October 5, 2024

ಸೃಜನಾತ್ಮಕವಾದ ಸಾಹಿತ್ಯದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ, ಇಂದಿನ ಯುವ ಪೀಳಿಗೆ ಪುಸ್ತಕದಿಂದ ವಿಮುಖವಾಗಿ ಮೊಬೈಲ್ ನತ್ತ ಹೊರಳುತ್ತಿದ್ದಾರೆ. ವಿದ್ಯಾರ್ಥಿ ಯುವಜನರಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಕವಿಗೋಷ್ಠಿ, ಕಾವ್ಯಕಮ್ಮಟ, ಕಥಾ ಕಮ್ಮಟದಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಸಾಹಿತಿ, ಉಪನ್ಯಾಸಕ ನಾಗರಾಜರಾವ್ ಕಲ್ಕಟ್ಟೆ ತಿಳಿಸಿದರು.

ಭಾನುವಾರ ಮೂಡಿಗೆರೆ ಜೇಸಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಮಾಯಣ ಮಹಾಭಾರತದ ಕಾಲದಿಂದಲೂ ಆರಂಭವಾಗಿರುವ ಮಹಾಕಾವ್ಯ ಎಂಬ ಸಮಾಜವನ್ನು ಸುಧಾರಣೆಯ ದಾರಿಗೆ ಕೊಂಡೊಯ್ದ ಕಾವ್ಯ ಪುಣ್ಯಪುರಾಣದ ಇತಿಹಾಸವನ್ನು ಹೊಂದಿದ್ದರು ಇಂದಿನ ಆಧುನಿಕ ಜಗತ್ತಿನಲ್ಲಿ ಕಾವ್ಯದ ಸ್ವಯಂಕೃಷಿ ಮಾಡುವಲ್ಲಿ ತಾತ್ಸಾರ ನೀತಿ ಅನುಸರಿಸಿರುವ ಕಾರಣ ಸಾಹಿತ್ಯಾತ್ಮಕವಾದ ಕನ್ನಡ ಭಾಷೆಗೆ ಗಂಡಾಂತರ ಎದುರಾಗಲು ಕಾರಣವಾಗಿದೆ. ಪುಣ್ಯಪುರುಷರು ಅನ್ನಿಸಿಕೊಳ್ಳಲು ಹಾಗೂ ಜಗತ್ತಿನಲ್ಲಿ ದೊಡ್ಡವರೆನಿಸಿಕೊಂಡವರು ಕೂಡ ಒಂದೊಂದು ರೀತಿಯ ಸ್ವಯಂಕೃಷಿ ಮಾಡಿದ್ದರಿಂದಲೆ ಅವರಿಗೆ ದೊಡ್ಡಮಟ್ಟದ ಮನ್ನಣೆ ದೊರೆತಿದೆ. ಸಹೃದಯತೆ ಹೊಂದಿರುವವರು ಪುಣ್ಯಪುರುಷರಾಗಿದ್ದಾರೆ. ಸಾಹಿತ್ಯದ ಗೆಳೆತನದಿಂದ ಸಮಾಜದ ಸುಧಾರಣೆಯಾಗಲಿದೆ. ಸಾಹಿತ್ಯಕ್ಕೆ ಶ್ರೀಮಂತಿಕೆ, ಬಡತನ, ಜಾತಿ, ಧರ್ಮ, ಕಲಹ, ವಿರಸ ಯಾವುದು ಇಲ್ಲ. ಎಲ್ಲರನ್ನೂ ಒಗ್ಗೂಡಿಸುವ ಶಬ್ದಕ್ಕೆ ಸಾಹಿತ್ಯ ಎನ್ನಲಾಗುತ್ತಿದೆ. ಸಾಹಿತಿಯಾಗಲು ಪ್ರತಿಭೆಯಿರಬೇಕು. ಸುಮ್ಮನೆ ಕುಳಿತರೆ ಸಾಹಿತ್ಯ ಹುಟ್ಟಲಾರದು ಜಗತ್ತಿನ ಮಕ್ಕಳನ್ನು ತನ್ನ ಮಕ್ಕಳೆಂದು ತಿಳಿದ ಜಗನ್ಮಾತೆಯಂತಹ ದೇವಾನುದೇವತೆಗಳು ಕೂಡ ಕಾವ್ಯದಿಂದಲೇ ಪ್ರಸಿದ್ಧಿ ಪಡೆದವರಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಆರೋಗ್ಯಪೂರ್ಣವಾದ ವಿಮರ್ಶೆಯಿಂದ ಸಾಹಿತ್ಯವನ್ನು ಚಿಗುರಿಸಬಹುದಾಗಿದೆ. ಅನೇಕ ತಲೆಮಾರುಗಳಿಂದ ಬಂದ ಸಾಹಿತ್ಯ, ಸಂಕಲನ ಸಮಾಜಕ್ಕೆ ಮಾರ್ಗದರ್ಶನವಾಗಿದೆ. ಪುಸ್ತಕ ಮತ್ತು ಪತ್ರಿಕೆ ಓದುವುದರಿಂದ ಮನುಷ್ಯನ ಮೆದುಳಿನಿಂದ ಹೊಸಹೊಸ ರೀತಿಯ ಸಾಹಿತ್ಯ ಚಿಗುರಬಲ್ಲದು. ಓದುಬರಹದಿಂದ ದೂರವಿರುವವರು ಸಮಾಜದಲ್ಲಿ ತಿರಸ್ಕೃತರಾದಂತೆ ಬದುಕಬೇಕಾಗುತ್ತದೆ. ಅಂತಹ ದುರ್ಗತಿಯಾರೊಬ್ಬರಿಗೂ ಬರದಿರಬೇಕಾದರೆ ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಾಗರತ್ನ ಶಿವಮೊಗ್ಗ ಮತ್ತು ಸತೀಶ್ ಕಂಚುಗಾರನಳ್ಳಿ ಇವರ ಕವನ ಸಂಕನಗಳನ್ನು ಬಿಡುಗಡೆಗೊಳಿಸಲಾಯಿತು.

ಸಾಹಿತಿ ಧನಂಜಯ ಜೀವಾಳ ಆಶಯ ನುಡಿಗಳನ್ನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಗಾಯಕ ಮಹೇಶ್ ಪ್ರಿಯದರ್ಶನ್ ಮತ್ತು ಗಾಯಕಿ ಅಂಬಾವತಿ ಅವರಿಗೆ ಗಾನಶ್ರೀ ಪ್ರಶಸ್ತಿ, ಪತ್ರಿಕಾ ವಿತರಕ ಜಹೀರ್ ಅವರಿಗೆ ಸೇವಾಶ್ರೀ, ಕಲಾವಿದೆ ವಿದ್ಯಾ ಅವರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಾಹಿತಿ ಹಳೆಕೋಟೆ ರಮೇಶ್, ಡಿ.ನಳಿನಾ, ಅನಿತಾ ಜಗದೀಪ್, ಡಿ.ಕೆ.ಲಕ್ಷ್ಮಣಗೌಡ, .ಎಂ.ಮಂಜುನಾಥಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ಹೇಮಂತರಾಜ್, ತಾಲೂಕು ಕಸಾಪ ಅಧ್ಯಕ್ಷ ಹೆಚ್.ಎಂ. ಶಾಂತಕುಮಾರ್,  ಸಂಗೀತ ನಿರ್ದೇಶಕ ಗಾಯಕ ಮಹೇಶ್ ಪ್ರಿಯದರ್ಶನ್, ಜೆಸಿಐ ಅಧ್ಯಕ್ಷೆ ಸವಿತಾ ರವಿ, ಶ್ರೀಮತಿ ಸುಧಾ ಚಂದ್ರಶೇಖರ್, ಪ್ರಕಾಶ್, ಬಿ.ಆರ್.ನವೀನ್, ಹಸೈನಾರ್, ವಿನೋದ್, ಹಾ.ಭಾ.ನಾಗೇಶ್,  ವಿ.ಪಿ. ನಾರಾಯಣ  ಇತರರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 40 ಮಂದಿ ಉದಯೋನ್ಮುಖ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಿಸಿದರು. ಸಾಹಿತಿಗಳಾದ ಉಮೇಶ್ ಹೊಸಹಳ್ಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಯುವ ಕವಿಗಳಿಗೆ ಕಿವಿಮಾತು ಹೇಳಿದರು.

ಅದೇ ದಿನ ಸಂಜೆ ನಡೆದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಪತ್ರಕರ್ತ ಪ್ರಸನ್ನ ಗೌಡಹಳ್ಳಿ ಮಾತನಾಡಿದರು. ಶಾಲಾ ಮಕ್ಕಳಿಂದ ವೈವಿದ್ಯಮಯವಾದ ಸಾಂಸ್ಕೃತಿಕ ನೃತ್ಯಗಳನ್ನು ಏರ್ಪಡಿಸಲಾಗಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ