October 5, 2024

ಅಗ್ನಿವೀರ್ ಯೋಜನೆಯ ಮೂಲಕ ಭಾರತೀಯ ಸೇನೆಗೆ ಸೇರಲು ಉತ್ತಮ ಅವಕಾಶಗಳು ಇವೆ ಎಂದು ಭಾರತೀಯ ನೌಕಸೇನೆ ಅಧಿಕಾರಿ ಲೆಪ್ಟಿನೆಂಟ್ ರಾಘವೇಂದ್ರರಾವ್ ತಿಳಿಸಿದ್ದಾರೆ.

ಅವರು ಬುಧವಾರ ಮೂಡಿಗೆರೆ ಜೇಸಿ ಭವನದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್, ಜೇಸಿಐ ಮೂಡಿಗೆರೆ ಮತ್ತು ಭಾರತೀಯ ನೌಕಾದಳದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಗ್ನಿವೀರ್ ಯೋಜನೆಯ ಬಗೆಗಿನ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಅಗ್ನಿವೀರ್ ಮೂಲಕ ಸೇನೆ ಸೇರ್ಪಡೆಯಾಗಲು ಎಲ್ಲರಿಗೂ ಉತ್ತಮ ಅವಕಾಶವಿದೆ.  ಅದರಲ್ಲೂ ಪ್ರಮುಖವಾಗಿ ನೌಕಾದಳದಲ್ಲಿ ಉತ್ತಮ ಅವಕಾಶವಿದೆ. ಸಮುದ್ರ, ನೆಲ, ಆಕಾಶ ಮೂರು ರೀತಿಯಲ್ಲಿಯೂ ಸೇವೆ ಸಲ್ಲಿಸಿಲು ನೌಕಾಸೇನೆಯಲ್ಲಿ ಅವಕಾಶವಿದೆ.

ಕನಿಷ್ಠ ಎಸ್.ಎಸ್.ಎಲ್.ಸಿ., ಮತ್ತು ಪಿ.ಯು.ಸಿ. ವ್ಯಾಸಂಗ ಮಾಡಿದವರಿಗೂ ಇಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಹಳ ಸರಳ ವಿಧಾನಗಳ ಮೂಲಕ ಅಗ್ನಿವೀರ್ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನಂತರ ಹಂತಗಳಲ್ಲಿ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ನೇರವಾಗಿ ಸೇನೆಗೆ ಆಯ್ಕೆಯಾಗಬಹುದು. ಇಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ. ಎಲ್ಲರಿಗೂ ಮುಕ್ತ ಮತ್ತು ಪಾರದರ್ಶಕವಾದ ಅವಕಾಶಗಳು ಇವೆ.

ಅಗ್ನಿವೀರ್ ಮೂಲಕ 4 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಬಹುದು. ಅಲ್ಲಿ ಉತ್ತಮ ನಿರ್ವಹಣೆ ತೋರಿದ ಶೇಕಡಾ 25 ರಷ್ಟು ಮಂದಿಯನ್ನು ಸೇನೆಯ ಮುಂದಿನ ಹಂತಕ್ಕೆ ಮುಂದವರಿಸುತ್ತಾರೆ. ನಾಲ್ಕು ವರ್ಷ ಸೇವೆ ಸಲ್ಲಿಸಿ ವಾಪಸ್ಸಾದವರಿಗೆ ವಿವಿಧ ಕಂಪನಿಗಳಲ್ಲಿ ಆದ್ಯತೆಯ ಮೇರೆಗೆ ಕೆಲಸ ಸಿಗಲಿದೆ ಎಂದರು.

ಹಾಗಾಗಿ 17 ವರ್ಷದಿಂದ 21 ವರ್ಷದೊಳಗಿನ ಯುವಕರು ಅಗ್ನಿವೀರ್ ಯೋಜನೆಯ ವೆಬ್ ಸೈಟ್ ಮೂಲಕ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಮೂಡಿಗೆರೆ ಸೀನಿಯರ್ ಛೇಂಬರ್ ಅಧ್ಯಕ್ಷರಾದ ಎನ್.ಎಲ್. ಪುಣ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನೌಕಾಸೇನೆಯ ಅಧಿಕಾರಿಗಳು, ಸೀನಿಯರ್ ಛೇಂಬರ್ ಕಾರ್ಯದರ್ಶಿ ಹೆಚ್.ಆರ್. ಪ್ರದೀಪ್ ದುಂಡುಗ, ಉಪಾಧ್ಯಕ್ಷ ಬಿ. ಬಸವರಾಜು, ಸದಸ್ಯರಾದ ಕೆ.ಎಲ್.ಎಸ್. ತೇಜಸ್ವಿ, ಅತುಲ್ ರಾವ್, ಹಾಲೂರು ರವಿ, ಎಂ.ಡಿ.ವಿಜಯಕುಮಾರ್, ಚಂದ್ರಶೇಖರ್ ಕುನ್ನಹಳ್ಳಿ, ಜೇಸಿಐ ಅಧ್ಯಕ್ಷೆ ಸವಿತಾ ರವಿ, ನಿಯೋಜಿತ ಅಧ್ಯಕ್ಷ ಸುಪ್ರೀತ್ ಕಾರಬೈಲ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎಂ. ಶಾಂತಕುಮಾರ್, ನಿವೃತ್ತ ಯೋಧರಾದ ಉಮೇಶ್, ರಾಜಶೇಖರ್ ಮುಂತಾದವರು ಇದ್ದರು.

ಕಾರ್ಯಕ್ರಮದಲ್ಲಿ ಬಿ.ಎನ್. ಮನಮೋಹನ್ ಪ್ರಸ್ತಾವಿಕವಾಗಿ ಮಾತನಾಡಿದರು, ವಿನೋದ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸನ್ನ ಗೌಡಹಳ್ಳಿ ವಂದಿಸಿದರು.

ಇದೇ ದಿನ ಬಣಕಲ್ ನಜರತ್ ಶಾಲೆ ಮತ್ತು ಆಲ್ದೂರಿನ ಪೂರ್ಣಪ್ರಜ್ಞಾ ಶಾಲೆಗಳಲ್ಲಿಯೂ ಸಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ