October 5, 2024

ಸರ್ಫೇಸಿ ಕಾಯಿದೆ ನೆಪದಲ್ಲಿ ಕಾಫಿ ಬೆಳೆಗಾರರ ಕೃಷಿ ಭೂಮಿ ಹರಾಜು ಮಾಡುತ್ತಿರುವ ಬ್ಯಾಂಕ್ ಗಳ ವಿರುದ್ಧ ಸೋಮವಾರ ಬೆಳೆಗಾರರ ಸಂಘದ ವತಿಯಿಂದ ಮೂಡಿಗೆರೆ ಪಟ್ಟಣದ ಕೆನರಾ ಬ್ಯಾಂಕ್ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ ಮಾತನಾಡಿ, ಸರ್ಫೇಸಿ ಕಾಯಿದೆ ನೆಪ ಮಾಡಿಕೊಂಡು ಮಂಗಳೂರಿನ ಕೆನರಾ ಬ್ಯಾಂಕ್‌ನ ಮುಖ್ಯಸ್ಥರಿಬ್ಬರು ರಿಯಲ್ ಎಸ್ಟೇಟ್ ಪ್ರಾರಂಭ ಮಾಡಿದಂತೆ ಕಾಣಿಸುತ್ತಿದೆ. ಎಲ್ಲಾ ಬ್ಯಾಂಕ್‌ಗಳಲ್ಲಿ ಸರ್ಫೇಸಿ ಕಾಯಿದೆ ಮೂಲಕ ಭೂಮಿ ಹರಾಜು ಮಾಡುವ ಪ್ರಕ್ರಿಯೆ ಕೈಗೊಂಡಿದ್ದರೂ, ಹಣ ಕಟ್ಟಲು ಕಾಲಾವಕಾಶ ನೀಡುವ ಜತೆಗೆ ಕಾಫಿ ಬೆಳೆಗಾರರ ಸಮಸ್ಯೆ ಹಾಗೂ ಮನವಿಗೆ ಸ್ಪಂಧಿಸುತ್ತಿದ್ದಾರೆ. ಮೂಡಿಗೆರೆ ಮತ್ತು ಚಿಕ್ಕಮಗಳೂರು ಕೆನರಾ ಬ್ಯಾಂಕ್ ಕೂಡ ಇದಕ್ಕೆ ಸ್ಪಂಧನೆ ನೀಡುತ್ತಿದ್ದರೂ ಮಂಗಳೂರಿನಲ್ಲಿರುವ ಕೆನರಾ ಬ್ಯಾಂಕ್‌ನ ಇಬ್ಬರು ಮೇಲಾಧಿಕಾರಿಗಳು ತಕರಾರು ಮಾಡುತ್ತಿದ್ದಾರೆ. ನೋಟೀಸು ನೀಡಿ 3 ದಿನದಲ್ಲೇ ಭೂಮಿ ಹರಾಜು ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಇದನ್ನು ಗಮನಿಸಿದರೆ ಇವರಿಬ್ಬರು ರಿಯಲ್ ಎಸ್ಟೇಟ್ ದಂಧೆಯಲ್ಲಿ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇವರ ವಿರುದ್ಧ ತನಿಖೆ ನಡೆಸಿ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು.

ಬೆಳಗಾರರು ಪಡೆದ ಸಾಲಕ್ಕೆ ಶೇ. 22 ರಂತೆ ಬಡ್ಡಿ ಪಾವತಿಸುತ್ತಿದ್ದಾರೆ. ಈ ಹಣದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಸಂಬಳ ಬರುತ್ತಿದೆ. ಎಂಬುದನ್ನು ಅಧಿಕಾರಿಗಳು ರ‍್ಥಮಾಡಿಕೊಳ್ಳಬೇಕು. ರೈತರಿಂದಲೇ ತಮ್ಮ ಜೀವನ ನಡೆಯುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳು ರೈತರ ಪರ ನಿಲ್ಲುತ್ತಿಲ್ಲ. ಬೆಳೆಗಾರರ ಮೇಲೆ ಬ್ಯಾಂಕ್ ಓಟಿಎಸ್ ವಿಧಿಸಿದರೆ ಮತ್ತೆ ಆ ಬೆಳಗಾರ ಮುಂದಿನ 7 ರ‍್ಷ ಯಾವುದೆ ಬ್ಯಾಂಕಿನಿಂದ ಸಾಲ ಪಡೆಯುವಂತಿಲ್ಲ. ಇಂತಹ ಕಠಿಣ ಕಾನೂನು ವಿಧಿಸುವ ಬ್ಯಾಂಕ್ ವಿರುದ್ಧ ಬೆಳೆಗಾರರು ಬೆಳೆಗಾರರ ತಿರುಗಿ ಬಿದ್ದರೆ ಬ್ಯಾಂಕ್ ಮುಚ್ಚಬೇಕಾಗುತ್ತದೆ. ಕೆನರಾ ಬ್ಯಾಂಕಿನ ಖಾತೆಯನ್ನು ಮುಕ್ತಾಯಗೊಳಿಸಿ ವ್ಯವಹಾರ ಸ್ಥಗಿತಗೊಳಿಸಲು ನರ‍್ಧರಿಸಲಾಗಿದೆ ಎಂದು ತಿಳಿಸಿದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಕೃಷಿಗೆ ಭವಿಷ್ಯವಿಲ್ಲವೆಂದು ಕಾಫಿ ಬೆಳೆಗಾರರ ಮಕ್ಕಳು ಕೃಷಿ ಕ್ಷೇತ್ರದಿಂದ ದೂರವುಳಿಯುತ್ತಿದ್ದಾರೆ. ಸಾಲ ಪಡೆಯಲು ಬೆಳೆಗಾರರು 5 ಎಕರೆ ಕಾಫಿ ತೋಟವನ್ನು ಬ್ಯಾಂಕಿಗೆ ಒತ್ತೆಯಿಟ್ಟಿವರಿಗೆ 50 ಎಕರೆ ಕಾಫಿ ತೋಟವಿದ್ದರೂ ಬ್ಯಾಂಕ್ ಅಧಿಕಾರಿಗಳು ರ‍್ಫೇಸಿ ಕಾಯ್ದೆಯಂತೆ ಎಲ್ಲಾ ತೋಟವನ್ನು ಹರಾಜು ನಡೆಸಲು ಯತ್ನಿಸುತ್ತಿದ್ದಾರೆ. ಇದು ಬೆಳೆಗಾರರ ಮೇಲಿನ ದಬ್ಬಾಳಿಕೆಯಾಗಿದೆ. ಬ್ಯಾಂಕುಗಳು ರೈತರೊಂದಿಗೆ ವ್ಯಾಪಾರಕ್ಕಿಳಿಯಬಾರದು. ರೈತರಿಂದಲೆ ಬ್ಯಾಂಕಿಗೆ ಹೆಚ್ಚಿನ ಆದಾಯ ಹರಿದು ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಸದ್ಯದಲ್ಲೆ ರಾಜ್ಯಮಟ್ಟದಲ್ಲಿ ಎಲ್ಲಾ ಬ್ಯಾಂಕಿನ ಸಿಇಓಗಳ ಸಭೆ ಕರೆದು ರ‍್ಫೇಸಿ ಕಾಯಿದೆ ನೆಪದಲ್ಲಿ ರೈತರ ಜಮೀನು ಹರಾಜು ನಡೆಸಿದಂತೆ ರ‍್ಚಿಸಲಾಗುವುದು ಎಂದು ತಿಳಿಸಿದರು.

ಬೇಲೂರು ಬೆಳೆಗಾರರ ಸಂಘದ ಅಧ್ಯಕ್ಷ ಸಂತೋಷ್ ಮಾತನಾಡಿ, ಸರ್ಫೇಸಿ ಕಾಯಿದೆಯನ್ನು ಕೆನರಾ ಬ್ಯಾಂಕ್ ಮಾತ್ರ ದುರುಪಯೋಗಪಡಿಸಿಕೊಳ್ಳುತ್ತಿದೆ. 30 ಲಕ್ಷಕ್ಕೆ ಬೆಲೆಬಾಳುವ ಭೂಮಿಯನ್ನು ಕಡಿಮೆ ಬೆಲೆಯಲ್ಲಿ ಹರಾಜು ಮಾಡುವ ಪ್ರಕ್ರಿಯೆಗೆ ಮುಂದಾಗುತ್ತಿದ್ದಾರೆ. ಬೆಳೆಗಾರರು ಕಾಲಾವಕಾಶ ಕೋರಲು ಮಂಗಳೂರಿಗೆ ತೆರಳಿದರೆ, ಅಲ್ಲಿರುವ ಅಧಿಕಾರಿಗಳಾದ ದಿನಕರ್ ಮತ್ತು ಜಯಕುಮಾರ್ ಉಡಾಫೆಯಿಂದ ವರ್ತಿಸುತ್ತಾರೆ. ರೈತರ ಮೇಲೆ ನಡೆಯುತ್ತಿರುವ ಬಲ ಪ್ರಯೋಗ ಇಲ್ಲಿಗೆ ನಿಲ್ಲಬೇಕು. ಕೆನರಾ ಬ್ಯಾಂಕ್‌ನಲ್ಲಿ ಎಸ್‌ಬಿ ಮತ್ತು ಎಫ್‌ಡಿ ಅಕೌಂಟ್ ಇರುವ ಎಲ್ಲಾ ರೈತರು ತಮ್ಮ ಖಾತೆಯನ್ನು ಬಂದ್ ಗೊಳಿಸುವ ಮೂಲಕ ಬ್ಯಾಂಕಿಗೆ ತಕ್ಕ ಉತ್ತರ ನೀಡಬೇಕೆಂದು ಕರೆ ನೀಡಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್‌ಗೌಡ, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ, ಬಿ.ಬಿ. ನಿಂಗಯ್ಯ, ಬಿ.ಜೆ.ಪಿ. ಮುಖಂಡ ದೀಪಕ್ ದೊಡ್ಡಯ್ಯ ಮುಂತಾದವರು ಮಾತನಾಡಿದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ರೈತಪರ ಸಂಘಟನೆಗಳ ಮುಖಂಡರು, ಆಲ್ದೂರು, ಚಿಕ್ಕಮಗಳೂರು, ಅವತಿ, ಗೋಣಿಬೀಡು, ಅರೇಹಳ್ಳಿ, ಸಕಲೇಶಪುರ, ಕಳಸ ಮುಂತಾದ ಕಡೆಗಳಿಂದ ಬೆಳೆಗಾರರ ಸಂಘದ ಪದಾಧಿಕಾರಿಗಳು, ಬೆಳೆಗಾರರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಸರ್ಫೇಸಿ ಕಾಯ್ದೆ ದುರ್ಬಳಕೆ ಮಾಡಿಕೊಂಡು ರೈತರಿಗೆ ತೊಂದರೆ ನೀಡಿತ್ತಿರುವ ಬ್ಯಾಂಕ್ ಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ