October 5, 2024

ಈ ಬಾರಿಯ ಏಕದಿನ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡವಾಗಿ ಕಣಕ್ಕಿಳಿದಿದ್ದ ಭಾರತ ತಂಡ ಮತ್ತೊಮ್ಮೆ ಫೈನಲ್ ನಲ್ಲಿ ಸೋಲನುಭವಿಸಿದೆ.

ಭಾರತದ ನೆಲದಲ್ಲಿಯೇ ನಡೆದ ಪಂದ್ಯಾವಳಿಯಲ್ಲಿ ಭಾರತವೇ ಚಾಂಪಿಯನ್ ಆಗುತ್ತದೆ ಎಂದು ಕೋಟ್ಯಾಂತರ ಭಾರತೀಯರು ಕನಸು ಕಂಡಿದ್ದರು. ಆದರೆ ಜನರ ಕನಸೆಲ್ಲಾ ನುಚ್ಚು ನೂರಾಗಿದೆ.

2003 ರ ಫಲಿತಾಂಶ ಮತ್ತೆ ಮರುಕಳಿಸಿದೆ. ಆಗಲೂ ಸಹ ಆಸ್ಟ್ರೇಲಿಯಾ ಫೈನಲ್ ಪಂದ್ಯದಲ್ಲಿ ಭಾರತವನ್ನು ಸುಲಭವಾಗಿ ಸೋಲಿಸಿ ಚಾಂಪಿಯನ್ ಆಗಿತ್ತು.

ಪಂದ್ಯಾವಳಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಆಡಿದ ಎಲ್ಲಾ ಹತ್ತು ಪಂದ್ಯಗಳನ್ನು ನಿರಾಯಾಸವಾಗಿ ಗೆದ್ದು ಬಂದಿದ್ದ ಭಾರತ ಫೈನಲ್ ಪಂದ್ಯದಲ್ಲಿ ಮಾತ್ರ ತೀರಾ ಸಾಧಾರಣ ಪ್ರದರ್ಶನ ನೀಡಿ ಆಸ್ಟ್ರೇಲಿಯಕ್ಕೆ ಶರಣಾಗಿದೆ.

ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದ ಆಸ್ಟ್ರೇಲಿಯಾ ಬಿಗುವಾದ ಬೌಲಿಂಗ್ ಮೂಲಕ ಭಾರತವನ್ನು ಕೇವಲ 240 ರನ್ ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಕೆ.ಎಲ್. ರಾಹುಲ್(66) ಮತ್ತು ವಿರಾಟ್ ಕೊಹ್ಲಿ (54) ಮಾತ್ರ ಅರ್ಧಶತಕ ಗಳಿಸಿದರು. ರೋಹಿತ್ ಶರ್ಮಾ ಬಿರುಸಿನ 47 ರನ್ ಗಳಿಸಿ ಔಟಾದರು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ 50 ರನ್ ಆಗುವಷ್ಟರಲ್ಲಿ ಮೊದಲ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ಜೊತೆಯಾದ ಟ್ರಾವಿಸ್ ಹೆಡ್ ಮತ್ತು ಲಬುಸೇನ್ ಆಸ್ಟ್ರೇಲಿಯಾಕ್ಕೆ ಆಸರೆಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟ್ರಾವಿಸ್ ಹೆಡ್ ಆಕರ್ಷಕ ಶತಕ(137) ಗಳಿಸಿದರೆ, ಲಬುಸೇನ್(58) ತಾಳ್ಮೆಯ ಅರ್ಧಶತಕ ಗಳಿಸಿದರು.

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಟ್ರಾವಿಸ್ ಹೆಡ್ ಪಡೆದರು, ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಒಟ್ಟಾರೆಯಾಗಿ ಆಸ್ಟ್ರೇಲಿಯಾ ಆರನೇ ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಟೂರ್ನಿಯಲ್ಲಿ ಮೊದಲ  ಎರಡು ಪಂದ್ಯಗಳನ್ನು ಸೋತ ನಂತರ ಮೈಕೊಡವಿ ಎದ್ದು ನಿಂತ ಆಸ್ಟ್ರೇಲಿಯಾ ಇದೀಗ ಚಾಂಪಿಯನ್ ಆಗುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

ಭಾರತ ತಂಡ ಫೈನಲ್ ನಲ್ಲಿ ಸೋಲು ಕಂಡಿದ್ದರೂ ಸಹ ಟೂರ್ನಿಯುದ್ದಕ್ಕೂ ತೋರಿದ ಅದ್ಭುತವಾದ ಆಟದಿಂದ ಭಾರತೀಯ ಪ್ರೇಕ್ಷಕರನ್ನು ರಂಜಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ