October 5, 2024

ಗ್ರಾಹಕರೊಬ್ಬರ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ.

ಮೂಡಿಗೆರೆ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿರುವ ಹೆಸಗೋಡು ಗ್ರಾಮದ ಹೆಚ್.ಎಸ್. ಸುಬ್ರಾಯಗೌಡ ಎಂಬುವವರ ಖಾತೆಯಿಂದ ಹತ್ತು ಸಾವಿರ ರೂಗಳನ್ನು ಗ್ರಾಹಕರ ಗಮನಕ್ಕೆ ಬಾರದಂತೆ ಬೇರೊಂದು ಖಾತೆಗೆ ಅಕ್ರಮವಾಗಿ ಜಮಾ ಆಗಿದ್ದು, ಈ ಸಂಬಂಧ ದೂರು ದಾಖಲಿಸಲಾಗಿದೆ.

ಅವರು ಬ್ಯಾಂಕಿಗೆ ಈ ಸಂಬಂಧ ದೂರು ನೀಡಿದ್ದು : ದಿನಾಂಕ 29/10/2023ರ ಭಾನುವಾರ ಸಮಯ : 01:01:46ರ ಹೊತ್ತಿಗೆ ಮೊಬೈಲಿಗೆ ತಮ್ಮ ಖಾತೆಯಿಂದ 10 ಸಾವಿರ ಹಣ ಬೇರೊಂದು ಖಾತೆಗೆ ಜಮಾ ಆಗಿರುವ ಬಗ್ಗೆ ಸಂದೇಶ ಬಂದಿದೆ. ಯಾವುದೇ ಓಟಿಪಿ ಕೇಳದೇ ಇವರಿಗೆ ಗೊತ್ತಿಲ್ಲದಂತೆ ಹತ್ತು ಸಾವಿರ ಹಣವನ್ನು ISOF/CW-330213924980 ಈ ಸಂಖ್ಯೆಯ ಅಪರಿಚಿತ ಖಾತೆಗೆ ಅಕ್ರಮವಾಗಿ ಜಮೆಯಾಗಿದೆ. ಈ ಹಣವನ್ನು ನನ್ನ ಖಾತೆಗೆ ಹಿಂದಿರುಗಿಸಿಕೊಡಿ ಮತ್ತು ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಿ ಎಂದು ಬ್ಯಾಂಕ್ ಮ್ಯಾನೇಜರ್ ಗಮನಕ್ಕೆ ತಂದಿದ್ದಾರೆ.

ಇವರ ದೂರನ್ನು ಆದರಿಸಿ ಬ್ಯಾಂಕ್ ಕಡೆಯಿಂದ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಬಿಹಾರ ರಾಜ್ಯ ಮೂಲದ ಖಾತೆಯೊಂದಕ್ಕೆ ಈ ಹಣ ವರ್ಗಾವಣೆ ಆಗಿರುತ್ತದೆ. ಯಾವುದೇ ಓಟಿಪಿ ಕೇಳದೇ ಈ ರೀತಿ ಹಣ ವರ್ಗಾವಣೆಯಗಿರುವುದು ಬ್ಯಾಂಕ್ ನವರಿಗೂ ಸಹ ಆಶ್ಚರ್ಯ ಉಂಟುಮಾಡಿದೆ.
ಗ್ರಾಹಕರ ಕೆ.ವೈ.ಸಿ. ಬಳಸಿ ಈ ರೀತಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನಿಂದ ಖಾತೆದಾರರಿಗೆ ಗೊತ್ತಿಲ್ಲದಂತೆ ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಗ್ರಾಹಕರು ಈ ಬಗ್ಗೆ ಎಚ್ಚರದಿಂದರಬೇಕಾಗಿದೆ. ಎಲ್ಲೋ ಕುಳಿತು ಮತ್ಯಾರದೋ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳುವ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಆಗಾಗ ದೂರುಗಳು ಕೇಳಿಬರುತ್ತಿವೆ. ಗ್ರಾಹಕರು ತಮ್ಮ ಮೊಬೈಲ್ ಗೆ ಬರುವ ಓ.ಟಿ.ಪಿ.ಯನ್ನು ಹೇಳದೇ ಇರುವ ಮೂಲಕ ಮತ್ತು ತಮ್ಮ ಕೆ.ವೈ.ಸಿ. ಲಾಕ್ ಮಾಡಿಕೊಳ್ಳುವ ಮೂಲಕ ಈ ರೀತಿ ವಂಚನೆಗೊಳಗಾಗುವುದರಿಂದ ರಕ್ಷಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ