October 5, 2024

ಚಿಕ್ಕಮಗಳೂರು ಅರಣ್ಯ ಉಪವಿಭಾಗದಲ್ಲಿ ಮುಖ್ಯವಾಗಿ ಸಾರಗೋಡು ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತಲಿನಲ್ಲಿ ಉಪಟಳ ನೀಡುತ್ತಿರುವ ಇನ್ನೂ ಎರಡು ಕಾಡಾನೆಗಳನ್ನು ಹಿಡಿದು ಸಾಗಿಸಲು ಅರಣ್ಯ ಇಲಾಖೆ ಆದೇಶ ಮಾಡಿದೆ.

ಬುಧವಾರ ಈ ಭಾಗದಲ್ಲಿ ಒಂದು ಕಾಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಿದ ನಂತರ ಇದೀಗ ಮತ್ತೆ ಎರಡು ಆನೆಗಳನ್ನು ಸೆರೆಹಿಡಿಯಲು ಆದೇಶ ಮಾಡಲಾಗಿದೆ. ಸೆರೆಹಿಡಿಯಲು ನಿಗದಿಪಡಿಸಿದ ಒಂಟಿಸಲಗ ಪತ್ತೆಯಾಗದ ಕಾರಣ ಈ ಭಾಗದಲ್ಲಿ ಉಪಟಳ ನೀಡುತ್ತಿದ್ದ ಬೇರೊಂದು ಆನೆಯನ್ನು ಹಿಡಿದು ಸಾಗಿಸಲಾಗಿತ್ತು.

ಜನರ ಪ್ರಾಣಹಾನಿಗೆ ಕಾರಣವಾಗುತ್ತಿರುವ ಒಂಟಿ ಸಲಗವನ್ನು ಹಿಡಿಯಲು ಕಳೆದ ಬುಧವಾರ ಆದೇಶ ಮಾಡಲಾಗಿತ್ತು. ಆ ಆನೆಯನ್ನು ಹಿಡಿಯಲು ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಸಾರಗೋಡು ಮೀಸಲು ಅರಣ್ಯ ಭಾಗದಲ್ಲಿ ಸುಮಾರು 20 ಕ್ಕೂ ಅಧಿಕ ಆನೆಗಳು ಇರುವುದು ಗೋಚರವಾಗಿತ್ತು. ಜೊತೆಗೆ ಭುವನೇಶ್ವರಿ ನೇತೃತ್ವದ 7 ಆನೆಗಳು ತಂಡವೂ ಸೇರಿ ಈ ಭಾಗದಲ್ಲಿ  34 ಆನೆಗಳು ಇವೆ ಎಂದು ಅಂದಾಜಿಸಲಾಗಿತ್ತು. ಆ ಆನೆಗಳಲ್ಲಿ ಕೆಲವು ಆನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟು ಉಪಟಳ ನೀಡುತ್ತಿವೆ ಆ ಆನೆಗಳನ್ನು ಹಿಡಿದು ಸಾಗಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿತ್ತು.

ಈ ಹಿನ್ನಲೆಯಲ್ಲಿ ಮನುಷ್ಯರನ್ನು ಕೊಲ್ಲುತ್ತಿರುವ ಒಂಟಿ ಸಲಗ ಸೇರಿ ಎರಡು ಆನೆಗಳನ್ನು ಹಿಡಿಯಲು ಇದೀಗ ಸರ್ಕಾರ ಗುರುವಾರ ಹೊಸ ಆದೇಶ ಹೊರಡಿಸಿದೆ. ಜೊತೆಗೆ ಭುವನೇಶ್ವರಿ ತಂಡದ ಆನೆಗಳನ್ನು ಕಾಡಿಗಟ್ಟಲು ಸಹ ಆದೇಶದಲ್ಲಿ ತಿಳಿಸಲಾಗಿದೆ.

ಚಿಕ್ಕಮಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಇವರು ಸಲ್ಲಿಸಿದ್ದ ಪ್ರಸ್ತಾವನೆಯಂತೆ ಹೆಚ್ಚುವರಿಯಾಗಿ ಕಂಡು ಬಂದಿರುವ 7 ರಿಂದ 8 ಸಲಗಗಳ ಪೈಕಿ 4 ಸಲಗಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಅನುಮತಿ ಕೋರಿದ್ದರು. ಈ ಪ್ರಸ್ತಾವನೆಯ ಮೇರೆಗೆ 2 ಸಲಗಗಳನ್ನು ಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ವಿಭಾಗ ಬೆಂಗಳೂರು ಇವರು ಆದೇಶ ಮಾಡಿರುತ್ತಾರೆ.

ಈಗಾಗಲೇ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ  ಸಾಕಾನೆಗಳನ್ನು ಇಲ್ಲಿಯೇ ಇರಿಸಿ ಇಲಾಖೆಯ ಆದೇಶದಂತೆ ಜನರ ಜೀವಹಾನಿ ಮಾಡುತ್ತಿರುವ ಒಂಟಿ ಸಲಗವು ಸೇರಿ ಇನ್ನೆರಡು ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ಮುಂದವರಿಯಲಿದೆ, ಹಾಗೆಯೇ ಜನವಸತಿ ಪ್ರದೇಶಕ್ಕೆ ಬರುತ್ತಿರುವ ಭುವನೇಶ್ವರಿ ತಂಡದ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಚಿಕ್ಕಮಗಳೂರು ಡಿ.ಎಫ್.ಓ. ರಮೇಶ್ ಬಾಬು ಅವರು ಮಾಹಿತಿ ನೀಡಿದ್ದಾರೆ.

ಒಂಟಿಸಲಗವನ್ನು ಹಿಡಿಯಲು ಆಗ್ರಹ :

ಈ ನಡುವೆ ಜನರನ್ನು ಕಂಡರೆ ಅಟ್ಟಿಸಿಕೊಂಡು ಬರುತ್ತಿರುವ ಮತ್ತು ಈಗಾಗಲೇ ಅನೇಕರ ಪ್ರಾಣ ಹಾನಿಗೆ ಕಾರಣವಾಗಿರುವ ಒಂಟಿ ಸಲಗವನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ