October 5, 2024

ಕಾಡಾನೆ ಸೆರೆಗಾಗಿ ನಡೆಯುತ್ತಿರುವ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಮುಂದುವರಿದಿದೆ.

ಚಿಕ್ಕಮಗಳೂರು ಜಿಲ್ಲೆ, ಆಲ್ದೂರು ಸಮೀಪ ಕಾರ್ಮಿಕ ಮಹಿಳೆಯೋರ್ವರನ್ನು ಕಾಡಾನೆ ಎಂದು ತುಳಿದು ಸಾಯಿಸಿದ ನಂತರ ಆನೆಯನ್ನು ಹಿಡಿದು ಬೇರೇಡೆಗೆ ಸಾಗಿಸಲು ಸರ್ಕಾರ ಆದೇಶ ಮಾಡಿತ್ತು.

ಕಳೆದ ಮೂರು ನಾಲ್ಕು ದಿನಗಳಿಂದ ಒಂಟಿ ಸಲಗದ ಸೆರೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಯು ಇದುವರೆಗೂ ಯಶಸ್ಸು ಕಂಡಿಲ್ಲ

ಕಳೆದ ಬುಧವಾರ ಬೆಳಗ್ಗೆ ಆಲ್ದೂರು ಸಮೀಪದ  ಹೆಡದಾಳು ಗ್ರಾಮದಲ್ಲಿ  ತೋಟದ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯನ್ನು ಕಾಡಾನೆ ದಾಳಿಮಾಡಿ ಸಾಯಿಸಿತ್ತು.

ಅದೇ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಆಗಮಿಸಿದ್ದರು. ಮುಖ್ಯಮಂತ್ರಿ ಅವರ ಸೂಚನೆಯ ಮೇರೆಗೆ ಕಾಡಾನೆ ಹಿಡಿಯಲು ಅರಣ್ಯ ಇಲಾಖೆ ಆದೇಶ ಮಾಡಿತ್ತು.

ಈ ಕಾಡಾನೆ ಸೆರೆಗಾಗಿ ಒಟ್ಟು ಒಂಬತ್ತು ಸಾಕಾನೆಗಳು ಆಗಮಿಸಿವೆ. ಮೂಡಿಗೆರೆ ತಾಲೂಕಿನ ತಳವಾರ ಸಮೀಪ ದೊಡ್ಡಳ್ಳ ಎಂಬಲ್ಲಿ ಆನೆ ಕ್ಯಾಂಪ್ ಹಾಕಿದ್ದು ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.

ಕುಂದೂರು ಸಮೀಪ ಅರಣ್ಯದಲ್ಲಿ ಒಂಟಿ ಸಲಗ ಇದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಲ್ಲಿಂದ ಕಾರ್ಯಾಚರಣೆಗೆ ಇಳಿಯಲಾಗಿತ್ತು. ಸತತ ಮೂರು ದಿನಗಳಿಂದ ಕುಂದೂರು, ಸಾರಗೋಡು, ಬಾಸ್ತಿ ಸುತ್ತಮುತ್ತ ನಡೆಸುತ್ತಿರುವ ಕಾರ್ಯಾಚರಣೆ ಇದುವರೆಗೂ ಯಶಸ್ವಿಯಾಗಿಲ್ಲ. ಇಂದು ಈ ಭಾಗದಲ್ಲಿರುವ ಇತರೆ ಕಾಡಾನೆಗಳು ಕಣ್ಣಿಗೆ ಬಿದ್ದಿದ್ದು, ಸೆರೆ ಹಿಡಿಯಲು ಗುರುತಿಸಿರುವ ನಿರ್ಧಿಷ್ಟ ಆನೆ ಪತ್ತೆಯಾಗಿಲ್ಲ ಎನ್ನಲಾಗಿದೆ.

ನೂರಾರು ಅರಣ್ಯ ಸಿಬ್ಬಂದಿ ಒಂಬತ್ತು ಸಾಕಾನೆಗಳೊಂದಿಗೆ ಒಂಟಿ ಸಲಗವನ್ನು ಸೆರೆಹಿಡಿಯಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.

ಆರಂಭದಲ್ಲಿ ಏಳು ಸಾಕಾನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿತ್ತು ಆದರೆ ಸೆರೆಹಿಡಿಯಬೇಕಾದ ಕಾಡಾನೆ ಸದೃಢವಾಗಿದ್ದು ಅದನ್ನು ಸೆರೆ ಹಿಡಿಯಲು ಅಭಿಮನ್ಯುವೇ ಆಗಬೇಕು ಎಂಬ ಹಿನ್ನೆಲೆಯಲ್ಲಿ ಕಾಡಾನೆ ಸೆರೆಯಲ್ಲಿ ಹೆಸರು ಮಾಡಿರುವ ಅಭಿಮನ್ಯು ಮತ್ತು ಮಹೇಂದ್ರ ಆನೆಗಳನ್ನು ನಾಗರಹೊಳೆಯಿಂದ ಕಾರ್ಯಾಚರಣೆಗೆ ಕರೆತರಲಾಗಿದೆ.

ಮಂಗಳವಾರವೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಒಟ್ಟಾರೆಯಾಗಿ ಹಲವು ಜನರ ಪ್ರಾಣಹಾನಿಗೆ ಕಾರಣವಾಗಿದೆ ಎನ್ನಲಾಗುತ್ತಿರುವ ಒಂಟಿ ಸಲಗ ಅರಣ್ಯ ಇಲಾಖೆಗೆ ಕಾರ್ಯಾಚರಣೆ ತಂಡದೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದು ಸೆರೆ ಕಾರ್ಯಾಚರಣೆ ಸವಾಲಿನದಾಗುತ್ತಿದೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ