October 5, 2024
ಅಖಿಲ ಕರ್ನಾಟಕ ರಾಜ್ಯ ಕೇಸರಿ ಟ್ರಸ್ಟ್ ವತಿಯಿಂದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಡಿ.28 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ತಿಳಿಸಿದ್ದಾರೆ.
      ಅವರು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ನಿಸರ್ಗ ಗ್ರ್ಯಾಂಡ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಲೆನಾಡಿನ ಭಾಗದಲ್ಲಿ ಹಿಂದು ಬಡ ಕುಟುಂಬದ ವಧುವರರಿಗೆ ವಿವಾಹ ಮಾಡಲು ಟ್ರಸ್ಟ್ ಮುಂದೆ ಬಂದಿದ್ದು 12 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಿದ್ದೇವೆ.ಈಗಾಲೇ 5ಜೋಡಿಗಳು ಸಾಮೂಹಿಕವಾಗಿ ವಿವಾಹವಾಗಲು ಮುಂದೆ ಬಂದಿವೆ.ಇನ್ನೂ 7ಜೋಡಿಗಳ ಅವಶ್ಯಕತೆಯಿದೆ.ಅದಲ್ಲದೇ ಮೂರು ಆಸಕ್ತ ಬಡ ಕುಟುಂಬಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ.ಸಂಘಟನೆ ವತಿಯಿಂದ ನೂತನ ವಧುವರರಿಗೆ ಒಂದು ಪವನ್ ಚಿನ್ನದ ಕರಿಮಣಿ,ಮತ್ತು ಉಡುಪುಗಳನ್ನು ನೀಡಲಾಗುವುದು’ ಎಂದರು.
ಅಖಿಲ ಕರ್ನಾಟಕ ರಾಜ ಕೇಸರಿ ಸಂಸ್ಥೆಯ ಗೌರವ ಸಲಹೆಗಾರ ಪ್ರೇಮ್ ರಾಜ್ ರೋಷನ್ ಸಿಕ್ವೇರಾ ಮಾತನಾಡಿ ‘ ನಮ್ಮ ಟ್ರಸ್ಟ್ ನಿಂದ ಕೊರೋನಾ ಸಮಯದಲ್ಲಿ 85 ಶವ ಸಂಸ್ಕಾರ, ಒಂದೇ ದಿನದಲ್ಲಿ 500 ನೇತ್ರ ನೋಂದಾವಣೆ,ಸೂರು ಇಲ್ಲದವರಿಗೆ 34 ಮನೆಗಳಿಗೆ ಆಸರೆ ನೀಡಿದ್ದೇವೆ.ಅನಾರೋಗ್ಯ ಪೀಡಿತರಿಗೆ ಸಹಾಯಾಸ್ತ ಮಾಡಿದ್ದೇವೆ.ವಿವಿಧ ಕ್ಷೇತ್ರದಲ್ಲಿ ನಮ್ಮ ಸಂಸ್ಥೆಯಿಂದ ಸಾಮಾಜಿಕ ಸೇವೆ ನೀಡಿದ್ದೇವೆ’ ಎಂದರು.
 ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂಜಯ್ ಗೌಡ ಮಾತನಾಡಿ ‘ಮಲೆನಾಡಿನ ಬಡ ಹಿಂದು ಯುವಕರಿಗೆ ನೆರವಾಗಲು ಈ ಸಂಸ್ಥೆ ಮುಂದೆ ಬಂದಿದೆ.ನಮ್ಮ ಮಲೆನಾಡಿನ ಯುವಕರು ಸಾಮೂಹಿಕವಾಗಿ ವಿವಾಹವಾಗಲು ಯೋಚಿಸಿದ್ದರೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9686714110/9901947498 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ