October 5, 2024

ಮೂಡಿಗೆರೆಯಿಂದ ಗೆಂಡೇಹಳ್ಳಿಗೆ ಸಾಗುವ ರಸ್ತೆಯಲ್ಲಿ ಬೀಜುವಳ್ಳಿ ಸಮೀಪ ಬೃಹತ್ ಹೊಂಡಗಳಿಂದ ಆವೃತ್ತವಾಗಿ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು, ಇದನ್ನು ಗಮನಿಸಿ ಟೀಮ್ ಛತ್ರಮೈದಾನ ಯುವಕರು ಇಂದು ಬೆಳಿಗ್ಗೆ  ರಸ್ತೆಯ ಗುಂಡಿಗೆ ಮಣ್ಣು ಸುರಿದು ಬಾಳೆಗಿಡ ಹಾಗೂ ಕೆಸುವಿನ ಗಿಡಗಳನ್ನು   ನೆಟ್ಟು ಗುಂಡಿ ಮುಚ್ಚಿ, ರಸ್ತೆ ಗುಂಡಿಗೆ ಮೀನು ಬಿಟ್ಟು ವಿಭಿನ್ನವಾಗಿ ಪ್ರತಿಭಟಿಸಿದರು.

ಅಹವಾಲುಗಳನ್ನು ಸ್ವೀಕರಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬರಲು ತಡಮಾಡಿದರಿಂದ ಕೆಲ ಹೊತ್ತು ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದಾಗ ಅವರಿಗೆ ಜನರ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಅಧಿಕಾರಿಗಳು ರಸ್ತೆ ದುರಸ್ಥಿಗೆ ಒಂದು ವಾರ ಕಾಲಾವಕಾಶವನ್ನು ಕೇಳಿದ್ದಾರೆ ಆಗಲೂ ಸರಿಪಡಿಸದಿದ್ದರೆ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಟೀಮ್ ಛತ್ರಮೈದಾನ ತಂಡದ ಅನಿಲ್ ಮಾತನಾಡಿ, ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ತಿ ಕಾರ್ಯ ಆಗಿಲ್ಲ,ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಮರು ಡಾಂಬರೀಕರಣವಾಗಿದ್ದು ಕಳಪೆ ಕಾಮಗಾರಿಯಾಗಿದ್ದು ಗುಂಡಿಬಿದ್ದುಹೋಗಿದೆ. ಇದರಿಂದಾಗಿ ಅಪಘಾತಗಳು,ವಾಹನಗಳಿಗೆ ತೊಂದರೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಟೀಮ್ ಛತ್ರಮೈದಾನದ ಸದಸ್ಯರಾದ  ಅನಿಲ್, ಅವಿನಾಶ್, ಸುಧೀರ್, ರಾಮು, ದೀಕ್ಷಿತ್, ಜಗನ್ನಾಥ್, ಮನು, ಲೋಕೇಶ್, ಮೂರ್ತಿ, ರಮೇಶ್, ಪ್ರಶಾಂತ್, ಅರುಣ್, ಶರತ್, ಗೋವಿಂದ್ ರಾಜ್, ಆಶಿತ್, ಆಕಾಶ್, ಸಾಲಿ, ಅವಿನಾಶ್, ಜಗದೀಶ್, ರೋಹಿತ್, ಸುನೀಲ್ ಇದ್ದರು. ,ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಸದಸ್ಯರಾದ ಪ್ರಕಾಶ್, ಪೂರ್ಣೆಶ್, ಸನತ್, ಉಮೇಶ್ ಸೇರಿದಂತೆ ಹಲವಾರ ಆಟೋ ಚಾಲಕರು ಪ್ರತಿಭಟನೆಗೆ ಕೈ ಜೋಡಿಸಿದರು.

ಈಗಾಗಲೇ ಟೀಮ್ ಛತ್ರಮೈದಾನ ಯುವಕರ ತಂಡ ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಕಡೆ ರಸ್ತೆ ಗುಂಡಿಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಕಾಂಕ್ರೀಟ್ ಹಾಕಿ ವಿನೂತನವಾಗಿ ಪ್ರತಿಭಟನೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ