October 5, 2024

ಮೂಡಿಗೆರೆ ದುರ್ಗಾ ದೇವಿ ಸಮಿತಿಯ ಸದಸ್ಯರೊಬ್ಬರ ಸೂಚನೆ ಮೇರೆಗೆ ತಾನು ಭಗವದ್ ಧ್ವಜ ತೆರವುಗೊಳಿಸಿದ್ದೇನೆ. ಆದರೆ ದುರ್ಗಾದೇವಿ ಸಮಿತಿಯವರು ವಿಚಾರ ಮರೆಮಾಚಿ ತನ್ನ ಮೇಲೆ ಆರೋಪ ಹೊರೆಸಿದ್ದಾರೆಂದು ಮೂಡಿಗೆರೆ ಆರೋಹಿ ಸೌಂಡ್ಸ್ ಅಂಡ್ ಲೈಟಿಂಗ್ಸ್ ಮಾಲೀಕ   ಪ್ರವೀಣ್‌ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಅವರು ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಸಾರ್ವಜನಿಕ ಮಹಾಗಣಪತಿ ಮತ್ತು ದುರ್ಗಾದೇವಿ ಉತ್ಸವಕ್ಕೆ ಲೈಟಿಂಗ್ಸ್ ಮತ್ತು ಸೌಂಡ್ ಸಿಸ್ಟಮ್ ಹಾಕಲು ತನಗೆ ಗುತ್ತಿಗೆ ನೀಡಲಾಗಿತ್ತು. ಗಣಪತಿ ವಿಸರ್ಜನೆ ಆದ ಮೇಲೆ ದುರ್ಗಾದೇವಿ ಸಮಿತಿ ಸದಸ್ಯ ಶಂಕರ್ ಎಂಬುವರು ದುರ್ಗಿ ಉತ್ಸವಕ್ಕೆ ಲೈಟಿಂಗ್ಸ್ ಅಳವಡಿಸುವಾಗ ಭಗವದ್ ಧ್ವಜ ತೆರವುಗೊಳಿಸಲು ಸೂಚಿಸಿದ್ದರು. ಹಾಗಾಗಿ ತಾನು ಭಗವದ್ ಧ್ವಜ ತೆರವುಗೊಳಿಸಿದ್ದೆ. ಆದರೆ ಗಣಪತಿ ಸಮಿತಿಯವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅವರು ಮಾಡಿದ ತಪ್ಪನ್ನು ತನ್ನ ಮೇಲೆ ಹೊರೆಸಿದ್ದಾರೆ. ಈ ಬಗ್ಗೆ ತಾನು ಯಾವ ದೇವರ ಬಳಿ ಬಂದು ಪ್ರಮಾಣ ಮಾಡಲ ಸಿದ್ಧವಿದ್ದೇನೆ. ದುರ್ಗಿ ಸಮಿತಿಯವರು ಭಗವದ್‌ ಧ್ವಜ ತೆರವುಗೊಳಿಸಲು ತಿಳಿಸಿಲ್ಲವೆಂದಾದರೆ ಅವರು ಕೂಡ ದೇವರ ಬಳಿ ಬಂದು ಪ್ರಮಾಣ ಮಾಡಬೇಕೆಂದು ತಿಳಿಸಿದರು.

ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಅವಿನಾಶ್ ಮಾತನಾಡಿ, ಬಣಕಲ್‌ನಲ್ಲಿದ್ದ ಗೊಂಬೆ ಕುಣಿತದ ತಂಡವೊಂದನ್ನು ದುರ್ಗಿ ವಿಸರ್ಜನೆಗೆ ಬುಕಿಂಗ್ ಮಾಡಲಾಗಿತ್ತು. ನಂತರ ಆ ತಂಡದ  ಸದಸ್ಯರು ಕೇಸರಿ ಬಣ್ಣದ ವಸ್ತ್ರ ಧರಿಸುತ್ತಾರೆಂಬ ಕಾರಣಕ್ಕೆ ಬುಕಿಂಗ್ ರದ್ದುಪಡಿಸಲಾಗಿದೆ. ಹಾಗಾದರೆ ಸಮಿತಿಯವರ ಮನಸ್ಥಿತಿ ಎಷ್ಟು ಸಂಕುಚಿತವಾಗಿದೆ ಎಂಬುದನ್ನು ಅರಿಯಬಹುದಾಗಿದೆ. ದುರ್ಗಿ ಉತ್ಸವದಲ್ಲಿ ಭಗವದ್ ಧ್ವಜ ಹಾರಿಸದಿರಲು ಕಾರಣವೇನು? ಕೇಸರಿ ಬಣ್ಣದ ಮೇಲೆ  ಅವರಿಗೆ ತಾತ್ಸಾರವೇಕೆ? ಇದನ್ನು ಗಮನಿಸಿದರೆ ಅವರು ಯಾರನ್ನೋ ಓಲೈಕೆ ಮಾಡಲು ದೇವರ ಉತ್ಸವ ಮಾಡುತ್ತಿರುವಂತೆ ಕಾಣುತ್ತದೆ.

ಇಂತಹ ಮನಸ್ಥಿತಿಯನ್ನು ವಿರೋಧಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು, ಸಾರ್ವಜನಿಕರಿಗೆ ಸತ್ಯವನ್ನು ತಿಳಿಸಲು, ಮೂಡಿಗೆರೆ ಪಟ್ಟಣದಲ್ಲಿ ನವೆಂಬರ್ 24ರಂದು  ಸನಾತನ ಹಿಂದೂ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಸಮಾವೇಶಕ್ಕೆ ಸಮಸ್ತ ಹಿಂದೂ ಬಾಂಧವರು ಪಾಲ್ಗೊಂಡು ಹಿಂದೂ ವಿರೋಧಿ ದೋರಣೆ ಪ್ರದರ್ಶಿಸುತ್ತಿರುವವರಿಗೆ ಬಿಸಿ ಮುಟ್ಟಿಸಬೇಕು ಎಂದು ಕರೆನೀಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ