ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಹುದ್ದೆಗಳು ಖಾಲಿ ಇದ್ದು, ಆಸಕ್ತ, ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳು : ಎಕ್ಸಿಕ್ಯುಟಿವ್ ಕಂಪನಿ ಸೆಕ್ರೆಟರಿ- 1 ಹುದ್ದೆ
ಆಫೀಸರ್/ ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್ 4
ಇಂಜಿನಿಯರ್ 2
ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್ 3
ಸಂಪರ್ಕ ಅಧಿಕಾರಿ 1
ಆಫೀಸರ್ 1
ಎಕ್ಸಿಕ್ಯೂಟಿವ್ ಆಫೀಸರ್ ಪಿಎ 1
ಆಫೀಸರ್ ಟ್ರೈನಿ 1
ವಿದ್ಯಾರ್ಹತೆ : ಎಕ್ಸಿಕ್ಯುಟಿವ್ ಕಂಪನಿ ಸೆಕ್ರೆಟರಿ – ಪದವಿ ಆಫೀಸರ್/ ಬ್ಯುಸಿನೆಸ್ ಡೆವಲ್ಮೆಂಟ್ ಆಫೀಸರ್ ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ, ಎಂಬಿಎ ಇಂಜಿನಿಯರ್ ಬಿಇ ಅಥವಾ ಬಿಟೆಕ್ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್ ಬಿಕಾಂ, ಬಿಬಿಎಂ, ಬಿಬಿಎ, ಬಿಸಿಎ/ ಸಂಪರ್ಕ ಅಧಿಕಾರಿ ಸ್ನಾತಕೋತ್ತರ ಪದವಿ ಆಫೀಸರ್ ಪದವಿ ಎಕ್ಸಿಕ್ಯೂಟಿವ್ ಆಫೀಸರ್ ಪಿಎ ಡಿಪ್ಲೊಮಾ ಆಫೀಸರ್ ಟ್ರೈನಿ ಎಂಬಿಎ
ವಯೋಮಿತಿ : ಗರಿಷ್ಠ ವಯೋಮಿತಿ 35 ವರ್ಷ. ಸಂಪರ್ಕ ಅಧಿಕಾರಿಗೆ ವಯೋಮಿತಿ 45 ವರ್ಷ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
ವೇತನ : ಈ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 30 ರಿಂದ 70 ಸಾವಿರ ರೂ. ನಿಗದಿ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ : ಕಂಪ್ಯೂಟರ್ ಸಾಕ್ಷಾರತಾ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ.
ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿಯಲ್ಲಿ ಶೈಕ್ಷಣಿಕ ಅರ್ಹತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು
ಅರ್ಜಿ ಸಲ್ಲಿಕೆ ವಿಳಾಸ: ಚೀಫ್ ಜನರಲ್ ಮ್ಯಾನೇಜರ್ (ಎಚ್ಆರ್), ಎಚ್ಆರ್ ವಿಭಾಗ, ಕೆಐಒಸಿಎಲ್ ಲಿಮಿಟೆಡ್, ಕೋರಮಂಗಲ, 2ನೇ ಬ್ಲಾಕ್, ಸರ್ಜಾಪುರ ರಸ್ತೆ, ಬೆಂಗಳೂರು- 560034.
ಅರ್ಜಿ ಸಲ್ಲಿಕೆ ಕಡೆಯ ದಿನಾಂಕ ನವೆಂಬರ್ 14. ಹಾರ್ಡ್ ಕಾಪಿ ಮೂಲಕ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್ 20. ಹೆಚ್ಚಿನ ಮಾಹಿತಿಗೆ kioclltd.in ಈ ವೆಬ್ಸೈಟ್ಗೆ ಭೇಟಿ ನೀಡಿ