October 5, 2024

ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟದ ಕಂದಕ್ಕೆ ಉರುಳಿಬಿದ್ದು ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಮತ್ತೋರ್ವ ಪುರುಷನ ಸ್ಥಿತಿ ಗಂಭೀರವಾಗಿದ್ದು, ಬಸ್ಸಿನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸುಮಾರು 4-30ರ ಸಮಯದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನಿಂದ ಹೊರನಾಡು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೇಲೂರು ಮೂಡಿಗೆರೆ ರಸ್ತೆಯ ಮಧ್ಯದಲ್ಲಿ ಬರುವ ಚೀಕನಹಳ್ಳಿ-ಕಸ್ಕೇಬೈಲ್ ನಡುವಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟದ ಕಂದಕಕ್ಕೆ ಉರುಳಿದೆ. ಬಸ್ಸು ಸುಮಾರು 100 ಅಡಿ ಆಳಕ್ಕೆ ಉರುಳಿ ಬಿದ್ದಿದೆ.

ಈ ಸಂದರ್ಭದಲ್ಲಿ ಬಸ್ಸಿನ ಕಿಟಿಕಿಯಿಂದ ಹೊರಗೆ ಹಾರಿಬಿದ್ದ ಸುರೇಖಾ(47 ವರ್ಷ) ಬಸ್ಸಿನಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಪುರುಷ ಗಂಭೀರವಾಗಿ ಗಾಯಗೊಂಡಿದ್ದಾರೆ. 10 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ವೀರಭದ್ರೇಶ್ವರ ಎಂಬು ಖಾಸಗಿ ಬಸ್ಸಿನಲ್ಲಿ ಸುಮಾರು 48 ಮಂದಿ ಪ್ರಯಾಣಿಕರು ಹೊರನಾಡು ಪ್ರವಾಸ ಹೊರಟ್ಟಿದ್ದರು ಎನ್ನಲಾಗಿದೆ.

ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಬೇರೆ ಬಸ್ಸಿನ ಪ್ರಯಾಣಿಕರು ನೀಡಿದ ಮಾಹಿತಿಯಿಂದ ಅಗ್ನಿಶಾಮಕ ದಳ, ಗೋಣಿಬೀಡು ಠಾಣೆ ಪೊಲೀಸರು ಮತ್ತು ಬಣಕಲ್ ಸಮಾಜಸೇವಕ ಆರೀಫ್ ಮತ್ತು ಇತರೆ ಅಂಬುಲೆನ್ಸ್ ಚಾಲಕರೊಂದಿಗೆ ಸ್ಥಳಕ್ಕೆ ಆಗಮಿಸಿ ರಕ್ಷಣ ಕಾರ್ಯದಲ್ಲಿ ತೊಡಗಿದ್ದಾರೆ.

ಗಾಯಗೊಂಡವರನ್ನು ಬೇಲೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಹಾಸನ ಬೆಂಗಳೂರಿಗೆ ರವಾನಿಸಲಾಗಿದೆ.

ಈ ಅಪಘಾತ ಘಟನೆ ನಡೆದಿರುವ ಸ್ಥಳದಲ್ಲಿ ಸತತವಾಗಿ ಅಪಘಾತಗಳು ಸಂಭವಿಸುತ್ತಿವೆ. ವರ್ಷದಲ್ಲಿ ಅನೇಕ ವಾಹನಗಳು ಇಲ್ಲಿ ನಿಯಂತ್ರಣ ತಪ್ಪಿ ಕಂದಕ್ಕಕ್ಕೆ ಬೀಳುತ್ತವೆ. ಇಲ್ಲಿ ಹೆದ್ದಾರಿ ಇಲಾಖೆಯವರು ಸೂಕ್ತ ತಡೆಗೋಡೆ ನಿರ್ಮಿಸಿಲ್ಲ, ಎಚ್ಚರಿಕೆಯ ನಾಮಫಲಕ ಹಾಕಿಲ್ಲ. ಈ ಅಪಘಾತಕ್ಕೆ ನೇರವಾಗಿ ಹೆದ್ದಾರಿ ಇಲಾಖೆಯವರೇ ಕಾರಣರಾಗಿದ್ದಾರೆ. ಇನ್ನಾದರೂ ಇಲ್ಲಿ ಸೂಕ್ತ ಎಚ್ಚರಿಕೆಯ ಫಲಕ ಮತ್ತು ತಡೆಗೋಡೆ ನಿರ್ಮಿಸುವ ಕೆಲಸ ಆದಷ್ಟು ಬೇಗ ಆಗಲಿ

ಆರೀಫ್ ಬಣಕಲ್, ಸಮಾಜ ಸೇವಕ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ