October 5, 2024

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಡೆದವರಲ್ಲಿ ಗಮನ ಸೆಳೆದಿರುವ ಹೆಸರು ಚಾರ್ಮಾಡಿ ಹಸನಬ್ಬ ಅವರದ್ದು. ಸಮಾಜ ಸೇವಾ ವಿಭಾಗದಲ್ಲಿ ಹಸನಬ್ಬ ಅವರಿಗೆ ರಾಜ್ಯದ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಚಾರ್ಮಾಡಿ ಘಾಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲಿಯೇ ಆಕಸ್ಮಿಕ ಅನಾಹುತಗಳು, ಅಪಘಾತಗಳು ಆದಾಗ ಆಪತ್ಬಾಂಧವರಂತೆ ಧಾವಿಸಿ ಬರುವ ಹಸನಬ್ಬ ಅದೆಷ್ಟೋ ಜನರ ಪ್ರಾಣರಕ್ಷಣೆ ಮಾಡಿದ್ದಾರೆ. ಈಗಲೂ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.

ಹೇಳಿಕೇಳಿ ಚಾರ್ಮಾಡಿ ಘಾಟ್ ರಸ್ತೆ ನಿರಂತರ ಅಪಘಾತಗಳ ತಾಣವಾಗಿದೆ. ಇಲ್ಲಿನ ಕಡಿದಾದ ರಸ್ತೆ ಮತ್ತು ತಿರುವುಗಳಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿವೆ. ಚಾರ್ಮಾಡಿ ಘಾಟ್ ನಲ್ಲಿ ಅಪಘಾತಗಳು ಆದಾಗ ಮೊದಲು ನೆನಪಾಗುವ ಹೆಸರೇ ಚಾರ್ಮಾಡಿ ಹೋಟೆಲ್ ಮಾಲೀಕ ಹಸನಬ್ಬ ಅವರದ್ದು.

ಅಪಘಾತದ ಸುದ್ದಿ ತಿಳಿದ ತಕ್ಷಣ ತಮ್ಮ ತಂಡದೊಂದಿಗೆ ಅಲ್ಲಿಗೆ ಬರುವ ಹಸನಬ್ಬ ತಕ್ಷಣ ರಕ್ಷಣಾ ಕಾರ್ಯದಲ್ಲಿ ನಿರತರಾಗುತ್ತಾರೆ. ಪೊಲೀಸ್ ಇಲಾಖೆಗೆ ಸುದ್ದಿ ಮುಟ್ಟಿಸುವುದರಿಂದ ಮೊದಲ್ಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ವರೆಗೆ ಇವರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಾರೆ.

1970 ರಿಂದ ಚಾರ್ಮಾಡಿಯಲ್ಲಿ ಹೋಟೆಲ್ ನಡೆಸುತ್ತಿರುವ ಹಸನಬ್ಬ ಅವರ ಹೆಸರಿನೊಂದಿಗೆ ಚಾರ್ಮಾಡಿ ಗ್ರಾಮದ ಹೆಸರು ಹಾಸುಹೊಕ್ಕಾಗಿದೆ. ದಶಕಗಳಿಂದ ಇವರು ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಗಲು ರಾತ್ರಿಯೆನ್ನದೇ ಅಪಘಾತ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಹಸನಬ್ಬ ಅವರು ಹಾಜರಾಗಿ ಗರಿಷ್ಟ ಮಟ್ಟದಲ್ಲಿ ನೆರವು ನೀಡುತ್ತಾರೆ.


ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಅಪಘಾತ, ಭೂಕುಸಿತ, ಮರಗಳು ರಸ್ತೆಗೆ ಬೀಳುವುದು ಹೀಗೆ ಹಲವು ರೀತಿಯ ತೊಂದರೆಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಚಾರ್ಮಾಡಿ ಘಾಟ್ ಎಂದರೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಸುಮಾರು 25 ಕಿಲೋ ಮೀಟರ್ ಅಂತರದಲ್ಲಿ ಯಾವುದೇ ಊರು ಸಿಗುವುದಿಲ್ಲ. ಜನವಸತಿ ಪ್ರದೇಶ ತಲುಪಬೇಕೆಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯೇ ಸಿಗಬೇಕು. ಇಂತಹ ದುರ್ಗಮ ಹಾದಿಯಲ್ಲಿ ಅಚಾನಕ್ ಆಗಿ ಎದುರಾಗುವ ಅವಘಡಗಳು ದಿನಕ್ಕೊಂದಾದರೂ ಇದ್ದೇ ಇರುತ್ತವೆ. ಇಂತಹ ಸನ್ನಿವೇಶದಲ್ಲಿ ತೊಂದರೆಗೀಡಾದ ಜನರ ರಕ್ಷಣೆಗೆ ಹಸನಬ್ಬ ಅವರು ಚಾರ್ಮಾಡಿ ಕಡೆಯಿಂದ ತಮ್ಮ ಸಹವರ್ತಿಗಳನ್ನು ಕರೆದುಕೊಂಡು ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವುದು, ಜನರ ಜೀವ ರಕ್ಷಣೆಗಾಗಿ ಹರಸಾಹಸ ಪಡುತ್ತಾರೆ.

ಹೀಗೆ ದಶಕಗಳ ಕಾಲ ನಿಸ್ವಾರ್ಥ ಮನೋಭಾವನೆಯಿಂದ ಜನಸೇವೆಯಲ್ಲಿ ನಿರತರಾಗಿರುವ ಹಸನಬ್ಬ ಅವರನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಶ್ಲಾಘನೀಯವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ