October 5, 2024

ಕಾಫಿಮಂಡಳಿ ನೂತನ ಅಧ್ಯಕ್ಷರಾಗಿ ಕೃಷಿಕ ಪತ್ರಿಕೆ ಪ್ರಕಾಶಕ, ಕಾಫಿ ಬೇಳೆಗಾರ ಎಂ.ಜೆ.ದಿನೇಶ್ ದೇವರುಂದ ಇವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಹಲವು ಸಮಯದಿಂದ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ತೆರವಾಗಿತ್ತು, ಇದೀಗ ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಪ್ರತಿಷ್ಠಿತ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಾಫಿ ಬೆಳೆಗಾರರೊಬ್ಬರನ್ನು ನೇಮಕ ಮಾಡಲಾಗಿದೆ.

ಈ ಹಿಂದೆಯೆಲ್ಲ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ಐ.ಎ.ಎಸ್. ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿತ್ತು. ಎನ್.ಡಿ.ಎ.ಅಧಿಕಾರಕ್ಕೆ ಬಂದ ಮೇಲೆ ಕಾಫಿ ಬೆಳೆಗಾರರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಪರಿಪಾಟ ಆರಂಭಿಸಲಾಗಿತ್ತು. ಹೊಸ ನಿಯಮ ಜಾರಿಗೆ ಬಂದ  ನಂತರ ಒಂದು ಅವಧಿಗೆ ಚಿಕ್ಕಮಗಳೂರು ಜಿಲ್ಲೆಯ ಎಂ.ಎಸ್.ಬೋಜೇಗೌಡರು ಕಾಫಿ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರು ಕಳೆದ ವರ್ಷ ಹೆಜ್ಜೇನು ದಾಳಿಯಿಂದ ದುರ್ಮರಣ ಹೊಂದಿದ್ದರು.

ಕಾಫಿ ಮಂಡಳಿ ನೂತನ ಸಾರಥಿಯಾಗಿರುವ ದಿನೇನ್ ಅವರು ಮೂಡಿಗೆರೆ ತಾಲೂಕಿನ ದೇವರುಂದ ಗ್ರಾಮದವರು. ಮೂಲತಃ ಇವರದ್ದು ಮೇಕನಗದ್ದೆ ಗ್ರಾಮ.

ದಿನೇಶ್ ಮೇಕನಗದ್ದೆ ಗ್ರಾಮದ ಜಗನ್ನಾಥ ಗೌಡ ಕಮಲಮ್ಮ ದಂಪತಿಗಳ ಪುತ್ರ,  ಪತ್ನಿ ಚೈತ್ರಾ ಸಾಪ್ಟ್ ವೇರ್ ಇಂಜಿನಿಯರ್, ಮಗಳು ಓದು ಮುಗಿಸಿ ಉದ್ಯೋಗದಲ್ಲಿದ್ದು, ಮಗ ಡೆಹ್ರಾಡೂನ್ ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.

ದಿನೇಶ್ ಅವರು ಕಳೆದ 18 ವರ್ಷಗಳಿಂದ ಕೃಷಿಕ ಎಂಬ ಪತ್ರಿಕೆ ನಡೆಸುತ್ತಿದ್ದಾರೆ. ಜೊತೆಗೆ ಕಾಫಿ ಉದ್ದಿಮೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕಾಳು ಮೆಣಸಿಗೆ ಸಂಬಂಧಿಸಿದಂತೆ ಬ್ಲಾಕ್ ಗೋಲ್ಡ್ ಲೀಗ್ ಸಂಸ್ಥೆಯ ಪ್ರವರ್ತಕರಲ್ಲಿ ಒಬ್ಬರಾಗಿದ್ದಾರೆ. ಚಿಕ್ಕಮಗಳೂರಿಗೆ ಸ್ಪೈಸ್ ಪಾರ್ಕ್ ತರುವುದರಲ್ಲಿ ಇವರ ಪ್ರಯತ್ನ ಪ್ರಮುಖವಾಗಿದೆ. ಕೃಷಿಕ ಆಪ್ ಮೂಲಕ ಕೃಷಿ ಮಾಹಿತಿಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ನಡೆಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದು ಮೂಡಿಗೆರೆ ಟಿಎಪಿಸಿಎಂಎಸ್, ಹಂತೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ವಿಧಾನಗಳ ಬಗ್ಗೆ, ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಬಗ್ಗೆ ಆನೇಕ ಕಾರ್ಯಾಗಾರಗಳನ್ನು, ತರಬೇತಿ ಶಿಬಿರಗಳನ್ನು, ಹಳ್ಳಿ ಹಬ್ಬದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ತಮ್ಮದೇ ಆದ ಪ್ರಕಾಶನ ಸಂಸ್ಥೆಯಿಂದ ಕೃಷಿ ಸಂಬಂಧಿತ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ರಾಜಕೀಯವಾಗಿ ಬಿ.ಜೆ.ಪಿ.ಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಬಿ.ಜೆ.ಪಿ. ರೈತ ಮೋರ್ಚ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಉತ್ತಮ ವಾಗ್ಮಿ ಮತ್ತು ಕೃಷಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ.

ದಿನೇಶ್ ಅವರು ಇದೀಗ ಕಾಫಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಒಂದು ಅತ್ತ್ಯುತ್ತಮ ಆಯ್ಕೆಯಾಗಿದೆ. ಕಾಫಿ ಉದ್ದಿಮೆಯ ಬಗ್ಗೆ ವಿಶೇಷ ಜ್ಞಾನವನ್ನು ಹೊಂದಿರುವ ಮತ್ತು ತಮ್ಮದೇ ಆದ ಕನಸು, ದೃಷ್ಟಿಕೋನ ಹೊಂದಿರುವ ದಿನೇಶ್ ಅವರಿಂದ ಕಾಫಿ ಉದ್ದಿಮೆಗೆ ಮತ್ತು ಕಾಫಿ ಮಂಡಳಿಗೆ ನವಚೈತನ್ಯ ಸಿಗುವ ಭರವಸೆ ಮತ್ತು ಹಾರೈಕೆ ಎಲ್ಲರದಾಗಿದೆ.

ದಿನೇಶ್ ದೇವರುಂದ ಅವರಿಗೆ ದರ್ಪಣ ಪತ್ರಿಕೆ ಸಮಸ್ತ ಓದುಗರ ಪರವಾಗಿ ಅಭಿನಂದನೆಗಳು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ