October 5, 2024

ಹುಲಿ ಉಗುರುಗಳ ಧರಿಸಿರುವವರ ಸರಣಿ ಬಂಧನದ ಬೆನ್ನಿಗೆಯೇ ಸ್ವತಃ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತನ್ನ ಕೊರಳಲ್ಲಿ ಹುಲು ಉಗುರಿನ ಪೆಂಡೆಂಟ್ ಧರಿಸಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸದರಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದೂರು ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ(DRFO) ಆಗಿ ಕೆಲಸ ಮಾಡುತ್ತಿರುವ ಆಲ್ದೂರು ಮೂಲದ ದರ್ಶನ್  ಧರಿಸಿರುವ ಆಭರಣದಲ್ಲಿ ಹುಲಿ ಉಗುರು ಇದ್ದು, ಈ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕು ಎಂದು ಆಲ್ದೂರು ಮೂಲದ ಸುಪ್ರೀತ್ ಅರೇನೂರು ಮತ್ತು ಅಬ್ದುಲ್ ಖಾದರ್ ಎಂಬುವವರು ದೂರು ನೀಡಿದ್ದಾರೆ.

ಅವರು ತಮ್ಮ ದೂರಿನಲ್ಲಿ ಆಲ್ದೂರು ನಿವಾಸಿಯಾದ ದರ್ಶನ್ ಪ್ರಸ್ತುತ ಕಳಸ ಅರಣ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ facebook, instagram ಖಾತೆಗಳಲ್ಲಿ ಚಿನ್ನದ ಸರಕ್ಕೆ ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದ ಪೋಟೋಗಳನ್ನು ಹಾಕಿಕೊಂಡಿದ್ದರು. ಯಾವಾಗ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಅರೆಸ್ಟ್ ಆದರೋ ಅಂದೇ ಅರಣ್ಯ ಅಧಿಕಾರಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಇದ್ದ ತಾನು ಹುಲಿ ಉಗುರು ಧರಿಸಿದ್ದ ಪೋಟೋಗಳನ್ನು ಡಿಲಿಟ್ ಮಾಡಿದ್ದಾರೆ.

ಇವರು ಅರಣ್ಯ ಇಲಾಖೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹುಲಿ ಉಗುರು ಧರಿಸುವುದು ಕಾನೂನುಬಾಹೀರ ಎಂದು ಗೊತ್ತಿದ್ದರೂ ಸಹ ಹುಲಿ ಉಗುರು ಧರಿಸಿದ್ದಾರೆ. ಜೊತೆಗೆ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿರುವ ಪೋಟೋಗಳನ್ನು ಡಿಲಿಟ್ ಮಾಡುವ ಮೂಲಕ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

ಇವರ ಸೋಷಿಯಲ್ ಮೀಡಿಯಾ ಖಾತೆಯನ್ನು ಸೈಬರ್ ಕ್ರೈಂ ಮೂಲಕ ತನಿಖೆಗೆ ಒಳಪಡಿಸಿದರೆ ಹಿಂದೆ ಹಾಕಿ ಈಗ ಡಿಲಿಟ್ ಮಾಡಿರುವ ಪೋಟೋಗಳು ಸಿಗುತ್ತವೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇಲ್ಲದೇ ಹೋದರೆ ಅರಣ್ಯ ಇಲಾಖೆಯ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಕ್ಕಮಗಳೂರು ಜಿಲ್ಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಅವರು ಕಳಸ DRFO ದರ್ಶನ್ ವಿರುದ್ಧ ದೂರು ಬಂದಿದೆ. ಆಲ್ದೂರು ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

ದರ್ಶನ್ ವಿರುದ್ಧ ಈ ಹಿಂದೆ ಆಲ್ದೂರು ಸಮೀಪ ಅಕ್ರಮವಾಗಿ ಬೀಟೆ ಮರ ಕೊಯ್ದು ಸಾಗಿಸಿದ ತಂಡದೊಂದಿಗೆ ಶಾಮೀಲಾಗಿದ್ದ ಬಗ್ಗೆಯೂ ದೂರು ದಾಖಲಾಗಿತ್ತು. ಆ ಪ್ರಕರಣವೂ ಈಗ ತನಿಖೆಯ ಹಂತದಲ್ಲಿದೆ. ಇದೀಗ ಅವರ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.

ಬೇಲಿಯೇ ಎದ್ದು ಹೊಲ ಮೇಲ್ದಂತೆ ಎನ್ನುವಂತೆ ಅರಣ್ಯ ಇಲಾಖೆಯಲ್ಲಿ ಇದ್ದುಕೊಂಡೇ ಕಾನೂನು ಬಾಹೀರ ಕೃತ್ಯಗಳಲ್ಲಿ ತೊಡಗಿರುವ ದರ್ಶನ್ ವಿರುದ್ಧ ಇಲಾಖೆ ಸೂಕ್ತ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ