October 5, 2024

ಹುಲಿ ಉಗುರು ಧರಿಸಿದ ನೆಪದಲ್ಲಿ ಇತಿಹಾಸ ಪ್ರಸಿದ್ಧ ಖಾಂಡ್ಯಾ ಮಾರ್ಕಂಡೇಶ್ವರ ದೇವಸ್ಥಾನದ ಅರ್ಚಕರನ್ನು ಅರಣ್ಯ ಇಲಾಖೆ ಬಂಧಿಸಿರುವುದು ಖಂಡನೀಯವಾಗಿದ್ದು ಇದು ಈ ಭಾಗದ ಶಾಸಕರು ಮತ್ತು ಸರ್ಕಾರದ ವೈಫಲ್ಯ ವಾಗಿದೆ ಎಂದು ಬಿಜೆಪಿ ಮೂಡಿಗೆರೆ ಮಂಡಲ ಅಧ್ಯಕ್ಷ ಜೆ.ಎಸ್. ರಘು ಜನ್ನಾಪುರ ತಿಳಿಸಿದ್ದಾರೆ

ಅವರು ಹೇಳಿಕೆಯಲ್ಲಿ ತಿಳಿಸಿ ಮಾರ್ಕಂಡೇಶ್ವರ ದೇವರು ಈ  ಭಾಗದ ಜನರ ಆರಾಧ್ಯ ಧೈವವಾಗಿದೆ. ಜನರ ನಂಬಿಕೆಯ   ಬಾವನೆಯಾಗಿದ್ದು ನಿತ್ಯ ದೇವರ ಪೂಜೆ ಮಾಡಿ ಸೇವೆ ಸಲ್ಲಿಸುವ ಅರ್ಚಕರ ಬಂಧನ ಅತ್ಯಂತ ಖಂಡನೀಯವಾಗಿದೆ.

ಹುಲಿ ಉಗುರು  ಧರಿಸುವುದರಿಂದ ಕೆಲವು ಗ್ರಹಚಾರಗಳು. ಕ್ಷುದ್ರ ಶಕ್ತಿಗಳು ನಾಶವಾಗುತ್ತವೆ ಎಂಬ ನಂಬಿಕೆ ಜನರಲ್ಲಿ ಇದ್ದು. ಕಾನೂನು ಅರಿವು ಇಲ್ಲದೆ  ಧರಿಸುತ್ತಿದ್ದು. ಜನರಿಗೆ ಕಾನೂನು ಅರಿವು ಮೂಡಿಸುವ ಬದಲು. ಕಾನೂನು ಅರಿವಿಲ್ಲದೇ ಹುಲಿ ಉಗುರು ಧರಿಸಿದವರನ್ನು ಅರಣ್ಯ ಇಲಾಖೆ ಭಯೋತ್ಪಾದಕರ ರೀತಿ   ನಡೆಸಿಕೊಂಡು  ಜೈಲಿಗೆ ತಳ್ಳುವಂತಹ ಕೆಲಸ ಮಾಡುತ್ತಿದೆ.  ಖಾಂಡ್ಯಾ ದೇವಸ್ಥಾನದ   71 ವರ್ಷದ ವೃದ್ಧ ಅರ್ಚಕರು ಸೇರಿದಂತೆ ಇಬ್ಬರು ಅರ್ಚಕರರಿಗೆ ಯಾವುದೇ ನೋಟಿಸ್ ಅಥವಾ ತಿಳುವಳಿಕೆ ನೀಡದೆ ಹುಲಿಯನ್ನೇ ಕೊಂದಿದ್ದಾರೆ  ಎಂಬ ರೀತಿಯಲ್ಲಿ ನೇರವಾಗಿ ಜೈಲಿಗೆ ಹಾಕಿರುವುದು ಅತ್ಯಂತ ಅಮಾನವೀಯ ಕೃತ್ಯ. ಹಾಲಿ ಶೃಂಗೇರಿ ಕ್ಷೇತ್ರದ ಶಾಸಕರ ಮನೆದೇವರು ಕೂಡ ಇದೆ  ಮಾರ್ಕಂಡೇಶ್ವರನಾಗಿದ್ದು ಅವರು ಮತ್ತು ರಾಜ್ಯ ಸರ್ಕಾರದ ವೈಫಲ್ಯ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ

ಹಾಗೆಯೇ ಹುಲ್ಲೆಮನೆ ಕುಂದೂರಿನಲ್ಲಿ  ಆನೆ ದಾಳಿಯಿಂದ ಮಹಿಳೆ  ಮೃತಪಟ್ಟಿದ್ದ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಮತ್ತು ಅಂದು ಜಾಮೀನು ಪಡೆದಿದ್ದರು  ಎಂಬ ಕಾರಣಕ್ಕೆ ಹುಲಿ ಉಗುರನ್ನು ಧರಿಸಿದ ನೆಪದಲ್ಲಿ   ಸತೀಶ್ ಮತ್ತು ರಂಜಿತ್ ಎಂಬುವರನ್ನು ಇಲ್ಲಿನ ಸ್ಥಳಿಯ ಅರಣ್ಯ ಅಧಿಕಾರಿಗಳು  ಸೇಡು ತೀರಿಸಿಕೊಂಡಿದ್ದಾರೆ ಮಾತುಗಳು ಕೇಳಿಬರುತ್ತಿವೆ.  ಸಾರ್ಗೋಡು ಮೀಸಲು ಅರಣ್ಯದಲ್ಲಿ  ಆರು ತಿಂಗಳ ಹಿಂದೆ ವನಪಾಲಕರೊಬ್ಬರ ಮದುವೆಯ ದಿನ ಸುಮಾರು 30ಕ್ಕೂ ಹೆಚ್ಚು ಸಾಗುವಾನಿ  ಮರಗಳನ್ನು ಕಳ್ಳತನ ಮಾಡಲಾಗಿದ್ದು.   ಇದನ್ನು ತನಿಖೆ ನಡೆಸಿ ಅಪರಾಧಿಗಳನ್ನು ಹಿಡಿಯುವ ಬದಲು. ಅದನ್ನು ಮುಚ್ಚಿ ಹಾಕಲು ಅರಣ್ಯ ಇಲಾಖೆ ಪ್ರಯತ್ನನಿಸುತ್ತಿದೆ ಎಂಬು ದೂರುಗಳು ಕೇಳಿಬರುತ್ತಿವೆ. ಅರವಿಲ್ಲದೇ ಹುಲಿ ಉಗುರು ಧರಿಸಿದವರನ್ನು ಬಂಧಿಸುವಂತಹ   ಕೃತ್ಯ  ಮುಂದಿನ ದಿನಗಳಲ್ಲಿ ರೈತರು ಮತ್ತು ಅರಣ್ಯ ಇಲಾಖೆಯ ನಡುವೆ ತಿಕ್ಕಾಟಕ್ಕೆ ಕಾರಣವಾಗಲಿದೆ.    ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಅಮಾಯಕರ ಬಂಧನವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ