October 5, 2024

ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಾನ್ ಹೊರಟ್ಟಿ ಗ್ರಾಮದ ಗ್ರಾಮಸ್ಥರು ಅರಣ್ಯ ಹಾಗೂ ಕಂದಾಯ ಭೂಮಿ ಸಮಸ್ಯೆ ಬಗೆ ಹರಿಸುವಂತೆ ಶಾಸಕಿ ನಯನಾ ಮೋಟಮ್ಮ  ಅವರನ್ನು  ಮೂಡಿಗೆರೆ ಅವರ ಮನೆಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಜಾವಳಿ ಗ್ರಾಮ ಪಂಚಾಯಿತಿ ಸದಸ್ಯ  ಸಂದೀಪ್ ಮಾತನಾಡಿ ‘ಆಲೇಕಾನ್ ಹೊರಟ್ಟಿಯಲ್ಲಿ ಬಡವರು ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿಯಲ್ಲಿ ನೆಲೆಸುತ್ತಿದ್ದಾರೆ.ಅವರಲ್ಲಿ ಹಿಂದಿನ ವಾಸಸ್ಥಳದ, ಕೃಷಿ ಭೂಮಿಯ ದಾಖಲೆಯಿದೆ.ಅರಣ್ಯ,ಕಂದಾಯ ಒತ್ತುವರಿ ಭೂಮಿ ತೆರವು ಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ.ಬಡವರ ಭೂಮಿ ಒಕ್ಕಲೆಬ್ಬಿಸಿದರೆ ಬಡವರು ಬೀದಿಗೆ ಬೀಳಲಿದ್ದಾರೆ.ತಮಗೆ ನ್ಯಾಯ ಒದಗಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಶಾಸಕಿ ನಯನಾ ಮೋಟಮ್ಮ ಜನರ ಸಮಸ್ಯೆಗೆ ಸ್ಪಂಧಿಸಿ ಮಾತನಾಡಿ’ ಬಡವರ ಭೂಮಿಯನ್ನು ಒಕ್ಕಲೆಬ್ಬಿಸಲು ಅವಕಾಶ ನೀಡುವುದಿಲ್ಲ.ಬಡವರ ಪರ ಸರ್ಕಾರ ಸ್ಪಂದಿಸಲಿದೆ.ಬಡವರ ನ್ನು ಒಕ್ಕಲೆಬ್ಬಿಸದಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ.ಯಾವುದಕ್ಕೂ ಅರಣ್ಯ, ಕಂದಾಯ ಭೂಮಿಯ ಜಂಟಿ ಸರ್ವೇ ಆಗಬೇಕು. ಈ ಬಗ್ಗೆ ಬಡವರ ಭೂಮಿ ಕಸಿದು ಕೊಳ್ಳದಂತೆ ಶ್ರಮ ಮೀರಿ ಪ್ರಯತ್ನಿಸಲಾಗುವುದು.ಯಾರು ಆತಂಕ ಪಡುವ ಅಗತ್ಯವಿಲ್ಲ. ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿ ಎಂದರು. ಮೂಡಿಗೆರೆ ಅರಣ್ಯ ಉಪ ಸಂರಕ್ಷಣಾ ಅಧಿಕಾರಿಗಳನ್ನು ದೂರವಾಣಿ ಮೂಲಕ  ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು.ಶಾಸಕಿಯರವರು ಕೂಡ ಅರಣ್ಯ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಮೂಡಿಗೆರೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಡಿ.ರಘು  ಮಾತನಾಡಿ ‘ ಬಡವರ ಭೂಮಿಯನ್ನು ಸ್ಥಳ ಪರಿಶೀಲನೆ ನಡೆಸಿ ಜಂಟಿ ಸರ್ವೆ ನಡೆಸಲಾಗುವುದು. ಮೂರು ತಲೆಮಾರಿನಿಂದ ವಾಸ ಅಥವಾ ಕೃಷಿ ಮಾಡುತ್ತಿರುವ ದಾಖಲೆ ಗ್ರಾಮಸ್ಥರು ಇಟ್ಟುಕೊಳ್ಳಬೇಕು.ಮನೆ ಕಂದಾಯ, ಪಟ್ಟೆ ಮತ್ತಿತರ ದಾಖಲೆ ಹೊಂದಬೇಕು.ಸರ್ವೆ ಮಾಡಲು ಸೆಟಲ್ ಮೆಂಟ್ ನಿವೃತ್ತ ಎಸಿಯವರನ್ನು ಸರ್ಕಾರ ನೇಮಿಸಿದೆ.ಅವರ ಮುಖಾಂತರವೇ ಜಂಟಿ ಸರ್ವೆ ಮಾಡಿಸಿ ಅರ್ಹರ ಭೂಮಿಯನ್ನು ಉಳಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ ‘ಡೀಮ್ಡ್ ಅರಣ್ಯ ತೆರವಿಗೆ  ಇನ್ನೂ ಅನುಮತಿ ಸಿಕ್ಕಿಲ್ಲ.ಕಾನೂನು ರೂಪಿಸಲಾಗಿಲ್ಲ.ಸರ್ಕಾರ ಸುತ್ತೋಲೆ ಹೊರಡಿಸಿದೆ.ಈ ಹಿಂದೆ ಡೀಮ್ಡ್ ಅರಣ್ಯವನ್ನು ಅಧಿಕಾರಿಗಳು ಅವೈಜ್ಞಾನಿಕವಾಗಿ ಉಪಗ್ರಹದ ಮೂಲಕ ಹಸಿರು ಕಂಡಲ್ಲಿ ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದೆ.ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಅರಣ್ಯ ಭೂಮಿಯೆಂದು ನಕ್ಷೆಯಲ್ಲಿ ಗುರುತಿಸಿದ್ದಾರೆ.ಇದರಿಂದ ಮಲೆನಾಡು  ಭಾಗದ ಬಡವರಿಗೂ ಗ್ರಾಮದ ಜನರಿಗೆ ತೊಂದರೆಯಾಗಿದೆ’ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸುರೇಶ್ ಗೌಡ,ಗೋಪಾಲ್,ಕಾಳೇಗೌಡ,ಗಿರೀಶ್, ಸತೀಶ್ ಶಿವರಾಜ್ ಇದ್ದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ