October 5, 2024

ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿಗೆ ಸರ್ಕಾರ ಆದೇಶ ನೀಡಿದ್ದರೂ ಸರ್ವರ್ ಸಮಸ್ಯೆಯಿಂದ ಗ್ರಾಹಕರು ತಿದ್ದುಪಡಿ ಮಾಡಲಾಗದೇ ಪರದಾಡುವಂತಾಗಿದೆ.   ಗ್ರಾಮ ಒನ್ ಕೇಂದ್ರಗಳಲ್ಲಿ ಜನರು ರೇಷನ್ ಕಾರ್ಡ್ ಗಳಲ್ಲಿ ಹೆಸರು ತಿದ್ದುಪಡಿ, ಹೆಸರು ಸೇರಿಸುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ್ದರೂ ತಿದ್ದುಪಡಿಗೆ ಸರ್ವರ್ ಕಂಟಕವಾಗಿದೆ. ಹಲವು ಗ್ರಾಮ ಒನ್ ಸೈಬರ್ ಗಳಲ್ಲಿ ಪಡಿತರ ಚೀಟಿಗೆ ಸರ್ವರ್ ಸಮಸ್ಯೆಯಿಂದ ಸೈಟ್ ಒಪನ್ ಆಗುತ್ತಿಲ್ಲ.

ರಾಜ್ಯದಾದ್ಯಂತ ಈಗ ಪಡಿತರ ಗ್ರಾಹಕರಿಗೆ ಅವಕಾಶ ನೀಡಿದರೂ ಸರ್ವರ್ ಅನಾನುಕೂಲದಿಂದ ಜನರು ಸಾಲುಗಟ್ಟಿ ಗ್ರಾಮ ಒನ್ ಗಳಲ್ಲಿ ಗಂಟೆ ಗಟ್ಟಲೇ ನಿಂತರೂ ತಿದ್ದುಪಡಿ ಸಾಧ್ಯವಾಗುತ್ತಿಲ್ಲ. ಇನ್ನು ಪಡಿತರದಲ್ಲಿ ಹೆಸರು ದೋಷ ಸೇರ್ಪಡೆಗಾಗಿ ದೂರದ ಊರುಗಳಲ್ಲಿ ಇದ್ದವರು ಊರಿಗೆ ಬಂದಿದ್ದರೂ ತಿದ್ದುಪಡಿಯಾಗದೇ ಮನೆಗೆ ವಾಪಾಸ್ ತೆರಳುವಂತಾಗಿದೆ.ಸರ್ಕಾರ ನಾಡಕಚೇರಿಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡದೇ ಗ್ರಾಮ ಒನ್ ನಲ್ಲಿ ಮಾತ್ರ ಅವಕಾಶ ನೀಡಲಾಗಿದೆ.

ಇದರಿಂದ ಕೂಲಿ ಕಾರ್ಮಿಕರಂತೂ ಕೆಲಸಕ್ಕೆ   ರಜೆ ಹಾಕಿ ಪಡಿತರ ಚೀಟಿ ತಿದ್ದುಪಡಿಗೆ ಸಾಲುಗಟ್ಟಿ ನಿಂತರೂ ಸಾಧ್ಯವಾಗದೇ ಕೆಲಸವೂ ಇಲ್ಲದೇ ದಿನ ದೂಡುವಂತಾಗಿದೆ.  ‘ ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಗ್ರಾಮ ಒನ್ ಗಳಲ್ಲಿ ಅವಕಾಶ ಒದಗಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ, ಶುಕ್ರವಾರ, ಶನಿವಾರ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸರ್ವರ್ ಸಮಸ್ಯೆಯಿಂದ ಇನ್ನು ಸ್ವಲ್ಪ ದಿನ ತಿದ್ದುಪಡಿಗೆ ಕಾಲಾವಕಾಶ ನೀಡಬೇಕು. ದೂರದ ಊರಿನಲ್ಲಿದ್ದು  ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿಗೆ ಬಂದರೂ ಸಮಸ್ಯೆ ಸರಿಪಡಿಸಲು   ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕರು ದೂರುತ್ತಾರೆ. ‘

*ಪಡಿತರ ಚೀಟಿ ಹೆಸರು ಸೇರ್ಪಡೆ ತಿದ್ದುಪಡಿಗೆ ಮೂರು ದಿನ ಕಾಲಾವಕಾಶ ನೀಡಲಾಗಿದೆ.ಸರ್ವರ್ ಸಮಸ್ಯೆ ಬೆಂಗಳೂರಿನ ಎನ್ಐಸಿ ವತಿಯಿಂದಲೇ ಸರಿಯಾಗಬೇಕು.ತಾಲ್ಲೂಕು ಕೇಂದ್ರದ ಆಹಾರ ವಿಭಾಗದಿಂದ ಯಾವುದೇ ಸಮಸ್ಯೆಯಿಲ್ಲ’*   

 * ಇಂದ್ರೇಶ್, ಆಹಾರ ಇಲಾಖೆಯ ಶಿರಸ್ತೇದಾರ್, ಮೂಡಿಗೆರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ