October 5, 2024

ಮೂಡಿಗೆರೆ ಪಟ್ಟಣದಲ್ಲಿ ಶ್ರೀ ದುರ್ಗಾದೇವಿ ಉತ್ಸವಕ್ಕೆ ಭಗವಾನ್ ಧ್ವಜವನ್ನು ಹಾಕದೇ ಹಿಂದೂ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ತಾಲೂಕು ಅಧ್ಯಕ್ಷ ಮಹೇಶ್ ಸಾಲುಮರ ದೂರಿದರು.

ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂ ಧರ್ಮದ ಭಾವನೆಗಳಿಗೆ ದಕ್ಕೆಯುಂಟು ಮಾಡುತ್ತಲೇ ಇದ್ದಾರೆ. ಅದಕ್ಕೆ ಪೂರಕವಾಗಿ ಮೂಡಿಗೆರೆ ಪಟ್ಟಣದಲ್ಲಿ ಶ್ರೀ ದುರ್ಗಾದೇವಿ ಉತ್ಸವದಲ್ಲಿ ಪ್ರತಿ ವರ್ಷ ಕೇಸರಿ ಬಣ್ಣದ ಭಗವಾನ್ ಧ್ವಜ ಹಾರಿಸಲಾಗುತ್ತಿತ್ತು. ಆದರೆ ಈ ವರ್ಷ ಭಗವಾನ್ ಧ್ವಜ ಹಾರಿಸಿಲ್ಲ. ಶ್ರೀ ರಾಮ ಮತ್ತು ಶ್ರೀ ಕೃಷ್ಣನ ರಥದಲ್ಲಿ ಭಗವಾನ್ ಧ್ವಜ ಹಾರಿಸಲಾಗಿತ್ತು. ಅಲ್ಲದೇ ಎಲ್ಲಾ ಮಠ ಮಂದಿರದಲ್ಲಿ ಭಗವಾನ್ ಧ್ವಜ ಹಾರಿಸಲಾಗುತ್ತದೆ. ಈ ಭಗವಾನ್ ಧ್ವಜ ಯಾವುದೇ ಪಕ್ಷಕ್ಕೆ ಸೀಮಿತವಾಗಿದ್ದಲ್ಲ. ಇದು ಹಿಂದೂ ಧರ್ಮದ ಸಂಕೇತ ಹೊಂದಿರುವ ಭಗವಾನ್ ಧ್ವಜವಾಗಿರುತ್ತದೆ. ಹಾಗಾಗಿ ಇಲ್ಲಿನ ದುರ್ಗಾ ದೇವಿ ಸಮಿತಿ ಅವರು ಭಗವಾನ್ ಧ್ವಜವನ್ನು ಹಾರಿಸಬೇಕು. ಇಲ್ಲವಾದರೆ ದುರ್ಗಾ ಉತ್ಸವದಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ಬದಲಾಗಿ ಮುಂದಿನ ದಿನದಲ್ಲಿ ಎಲ್ಲಾ ಹಿಂದೂಪರ ಸಂಘಟನೆಗಳೊAದಿಗೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಹೇಳಿದರು.

ಗೋಷ್ಠಿಯಲ್ಲಿ ತಾಲೂಕು ಸಂಯೋಜಕ ಅಜಿತ್, ತಾಲೂಕು ಸಹ ಸಂಚಾಲಕ ಪುನೀತ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ