October 5, 2024

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ  ಮಹಿಷ ದಸರಾ ಆಚರಣೆಗೆ ಮುಂದಾದ  ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಷಾಸುರನ ಭಾವಚಿತ್ರ ಪ್ರದರ್ಶನ ಮಾಡಿ ಮೆರವಣಿಗೆಗೆ ಮುಂದಾದ ಕೆಲ ಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಆಚರಣೆ ಮಾಡಲು ಬಂದಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ.

ನಗರದ ಹನುಮಂತಪ್ಪ ವೃತ್ತದಲ್ಲಿ ಸುಮಾರು 60ಕ್ಕೂ ಹೆಚ್ಚು ದಲಿತಪರ ಸಂಘಟನೆಯ ಮುಖಂಡರು ಏಕಾಏಕಿ ಮಹಿಷಾಸುರನ ಬ್ಯಾನರ್ ಹಿಡಿದು ಆಚರಣೆಗೆ ಮುಂದಾದ್ರೂ, ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಆಚರಣೆ ಮಾಡಲು ಬಂದಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆಯುವ ಯತ್ನವನ್ನು ನಡೆಸಿದರು.

ಈ ಹಂತದಲ್ಲಿ ಪೊಲೀಸರು ಹಾಗೂ ದಲಿತ ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತಡೆದು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ್ದರು.  ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತಪರ ಸಂಘಟನೆಯ ಮುಖಂಡರು ಘೋಷಣೆ ಕೂಗಿದ್ರು. ಪೊಲೀಸರು ಅವರನ್ನು ಬಂಧಿಸಿ ಕಡೂರು ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೂ ಪಟ್ಟು ಸಡಿಲಿಸದ ಕೆಲ ಸಂಘಟನೆಗಳು ದಸರಾ ಮುಗಿಯುವ ವೇಳೆಗೆ ಮಹಿಷಾ ದಸರಾ ಮಾಡೇ ಮಾಡ್ತೀವಿ ಅಂತ ಜಿಲ್ಲಾಡಳಿತಕ್ಕೆ ಸವಾಲು ಎಸೆದಿದ್ದಾರೆ.

ಬಂಧನ ಖಂಡಿಸಿ ಪ್ರತಿಭಟನೆ: ಮಹಿಷ ದಸರಾಗೆ ಪಟ್ಟು ಹಿಡಿದ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡಿಸಿ ಮತ್ತೊಂದು ತಂಡ ಎಸ್.ಡಿ.ಪಿ.ಐ. ಮುಖಂಡ ಅಂಗಡಿ ಚಂದ್ರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ .
ಮಹಿಷನ ಪರ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಇವರನ್ನು ಬಂಧಿಸಿ ಕಡೂರು ಠಾಣೆಗೆ ಕರೆದೊಯ್ಯಲಾಗಿದೆ.

ಅಕ್ಟೋಬರ್ 24 ರ ವರೆಗೆ ನಿಷೇದಾಜ್ಞೆ

ಚಿಕ್ಕಮಗಳೂರು ನಗರದಲ್ಲಿ ಮಹಿಷ ದಸರಾ ಆಚರಣೆಗೆ ಕೆ.ಎನ್. ಭಗವಾನ್ ಅವರನ್ನು ಕರೆಸಿ ಮೆರವಣಿಗೆ ಮತ್ತು ಸಭೆ ಮಾಡುವ ತಯಾರಿಯನ್ನು ಕೆಲವು ಸಂಘಟನೆಗಳು ನಡೆಸಿದ್ದವು.

ಈ ನಡುವೆ ಕೆ.ಎನ್. ಭಗವಾನ್ ಅವರು ಒಕ್ಕಲಿಗರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯ ವಿರುದ್ಧ ಜಿಲ್ಲೆಯಲ್ಲಿ ಒಕ್ಕಲಿಗ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೆ.ಎನ್. ಭಗವಾನ್ ಚಿಕ್ಕಮಗಳೂರಿಗೆ ಬಂದರೆ ಅವರ ವಿರುದ್ಧ ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದ್ದವು. ಇದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಆರು ದಿನಗಳ ಕಾಲ ನಿಷೇದಾಜ್ಞೇ ಹೇರಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ