October 5, 2024

ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾ.ಪಂ. ವ್ಯಾಪ್ತಿಯ ಕೆಲ ಗ್ರಾಮಕ್ಕೆ ಜಲ ಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸಿಕೊಡಬೇಕೆಂದು ಹೆಸಗಲ್ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಸೋಮವಾರ ಪಟ್ಟಣದ ತಾ.ಪಂ. ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಹೆಸಗಲ್ ಗ್ರಾ.ಪಂ. ಸದಸ್ಯ ಶಿವಣ್ಣ ಮಾತನಾಡಿ, ಹೆಸಗಲ್ ಗ್ರಾ.ಪಂ. ವ್ಯಾಪ್ತಿಯ ಹಳ್ಳದಗಂಡಿ, ಬಾಪುನಗರ, ಬನದೇವಿ ಎಸ್ಟೇಟ್, ಶಕ್ತಿನಗರ, ಅರಳಿಗಂಡಿ ಹಾಗೂ ಹೆಸಗಲ್ ಗ್ರಾಮಕ್ಕೆ ಅನೇಕ ವರ್ಷದಿಂದಲೂ ಹಳ್ಳದಗಂಡಿಯಿದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಆ ನೀರು ಕುಡಿಯಲು ಯೋಗ್ಯವಿಲ್ಲ. ಈ ಗ್ರಾಮಗಳಿಗೆ ಕಳೆದ 2 ವರ್ಷದ ಹಿಂದೆ ಜಲಜೀವನ್ ಮಿಷನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್, ಫಿಲ್ಟರ್ ಬೆಡ್, ತೆರೆದಬಾವಿ, ಹೊಸ ಬೋರ್‌ವೆಲ್ ಹಾಗೂ ಪೈಪ್ ಲೈನ್‌ಗಾಗಿ 1 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ. ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ಕೂಡ ನಡೆದಿದ್ದು, ಆದರೆ ಇದೂವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ದೂರಿದರು.

ಮುಖ್ಯವಾಗಿ ಕಾಮಗಾರಿ ಪ್ರಾರಂಭಿಸಲು ಗ್ರಾ.ಪಂ.ಯಿAದ ಸ್ಥಳ ಗುರುತು ಮಾಡಿಕೊಡಬೇಕಿತ್ತು. ಆದರೆ ಸ್ಥಳ ಗುರುತು ಮಾಡದ ಕಾರಣ ಕಾಮಗಾರಿಗೆ ಹಿನ್ನಡೆಯಾಗಿದೆ. ಕೂಡಲೇ ಜಾಗ ಗುರುತು ಮಾಡಿ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಭರವಸೆ ನೀಡದಿದ್ದರೆ ಸತ್ಯಾಗ್ರಹ ಹಿಂಪಡೆಯುವುದಿಲ್ಲವೆAದು ಎಚ್ಚರಿಕೆ ನೀಡಿದರು.

ಬಳಿಕ ತಾ.ಪಂ. ಇಒ ರಮೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ನಾಗರಾಜ್ ಹಾಗೂ ಹೆಸಗಲ್ ಗ್ರಾ.ಪಂ. ಪಿಡಿಒ ಸೌಮ್ಯ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಇಓ ರಮೇಶ್ ಮಾತನಾಡಿ, ಕಾಮಗಾರಿ ಪ್ರಾರಂಭಿಸಲು ಈಗಾಗಲೇ ಜಾಗ ಗುರುತು ಮಾಡಲಾಗಿದೆ. ಕಾಮಗಾರಿಯನ್ನು ಒಂದು ವಾರದಲ್ಲಿ ಪ್ರಾರಂಭಿಸಲಾಗುವುದು. ಕಾಮಗಾರಿ ಅಂತ್ಯಗೊಳ್ಳುವವರೆಗೂ ವಾರಕ್ಕೊಮ್ಮೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲಾಯಿತು.

ಹೆಸಗಲ್ ಗ್ರಾ.ಪಂ. ಸದಸ್ಯರಾದ ಪ್ರಶಾಂತ್, ರವಿ, ಅಶೋಕ್, ಮಾಜಿ ಸದಸ್ಯ ಹೆಸಗಲ್ ಗಿರೀಶ್, ಮುಖಂಡರಾದ ಸಲ್ಲಾವುದ್ದೀನ್, ವೆಂಕಟೇಶ್, ರಮೇಶ್‌ಗೌಡ, ಕೃಷ್ಣಾ, ದೀಕ್ಷಿತ್, ಸುರೇಶ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ