October 5, 2024

ಬೈರಾಪುರ ಮತ್ತು ಜೀವಸಳ್ಳಿ ಗ್ರಾಮದಲ್ಲಿ ಕಾಡಾನೆಗಳಿಂದ ಬತ್ತದ ಗದ್ದೆ ನಾಶ
ಕಾಡಾನೆಗಳ ದಾಳಿಯಿಂದ ಮೂಡಿಗೆರೆ ತಾಲೂಕಿನ ಬೈರಾಪುರ ಮತ್ತು ಜಿ.ಹೊಸಳ್ಳಿ ಗ್ರಾಮಗಳಲ್ಲಿ ರೈತರ ಭತ್ತದ ಗದ್ದೆಗಳು ಹಾನಿಯಾಗಿವೆ.

ಕಾಡಾನೆಗಳ ಪ್ರತ್ಯೇಕ ಗುಂಪುಗಳು ನಿನ್ನೆ ರಾತ್ರಿ ಬೈರಾಪುರ ಗ್ರಾಮದ ರೈತರು ಬೆಳೆದಿದ್ದ ಭತ್ತದ ಗದ್ದೆಯ ಮೇಲೆ ದಾಳಿ ನಡೆಸಿ ಭತ್ತದ ಪೈರುಗಳನ್ನು ತಿನ್ನುವುದರ ಜೊತೆಗೆ ಗದ್ದೆಯನ್ನು ಮೆಟ್ಟಿ ಹಾನಿ ಮಾಡಿವೆ.

ಹಾಗೆಯೇ ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಗ್ರಾಮದಲ್ಲಿ ಕಾಡಾನೆಗಳ ತಂಡ ಗ್ರಾಮದ ರೈತರ ಭತ್ತದ ಗದ್ದೆಗಳಿಗೆ ಲಗ್ಗೆ ಇಟ್ಟಿದ್ದು ಅಪಾರ ಹಾನಿಯುಂಟುಮಾಡಿವೆ.

ಭತ್ತದ ಪೈರು ಈಗ ತೆನೆ ಬಿಡುವ ಹಂತಕ್ಕೆ ಬಂದಿದ್ದು ಕಾಡಾನೆಗಳ ದಾಳಿಯಿಂದ ರೈತರು ಅಪಾರ ಹಾನಿ ಅನುಭವಿಸುತ್ತಿದ್ದಾರೆ.

ಕಾಡಾನೆ ಹಾವಳಿಯಿಂದ ಬಹುತೇಕ ರೈತರು ಭತ್ತದ ಗದ್ದೆ ಸಾಗುವಳಿ ಮಾಡುವುದನ್ನು ನಿಲ್ಲಿಸಿದ್ದು ಕೆಲವು ರೈತರು ಮಾತ್ರ ಭತ್ತದ ಗದ್ದೆಗಳನ್ನು ಸಾಗುವಳಿ ಮಾಡಿದ್ದು ಕಾಡಾನೆಗಳ ಗುಂಪು ಈಗ ಭತ್ತ ಬೆಳೆದ ರೈತರಿಗೆ ಕಂಟಕವಾಗಿ ಪರಿಣಮಿಸಿದೆ.

ಕಾಡಾನೆಗಳ ಗುಂಪೊಂದು ಜಿ. ಹೊಸಳ್ಳಿ, ಚೀಕನಹಳ್ಳಿ ಸುತ್ತಮುತ್ತ ಸತತವಾಗಿ ಉಪಟಳ ನೀಡುತ್ತಿವೆ. ಹಾಗೆಯೆ ಬೈರಾಪುರ ಊರುಬಗೆ ಸುತ್ತಮುತ್ತ ಮತ್ತೊಂದು ತಂಡ ಸಂಚರಿಸುತ್ತಾ ಜನರಲ್ಲಿ ಭಯ ಮೂಡಿಸಿವೆ

ಆಲ್ದೂರು ಹೋಬಳಿ ಕಣತಿ ಸುತ್ತಮುತ್ತ ಏಳು ಕಾಡಾನೆಗಳ ತಂಡ ರೈತರಿಗೆ ಕಂಟಕವಾಗಿ ಪರಿಣಮಿಸಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ