October 5, 2024

ಚೀನಾದ ಹಾಂಗ್ಜೂ ನಗರದಲ್ಲಿ ನಡೆದ ಏಷ್ಯಾನ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

ಇದೇ ಮೊದಲ ಬಾರಿಗೆ ಭಾರತ ದೇಶ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ ಮಾತ್ರವಲ್ಲ ಒಟ್ಟು ಪದಕಗಳ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದೆ.
ಏಷ್ಯಾನ್ ಗೇಮ್ಸ್ ನಾಳೆ ಕೊನೆಗೊಳ್ಳಲಿದೆ. ಆದರೆ ಭಾರತದ ಪದಕ ಅಭಿಯಾನ ಇಂದಿಗೆ ಕೊನೆಯಾಗಿದೆ. ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ ನೂರರ ಗಡಿ ದಾಟಿದೆ.

ಭಾರತ ಇದುವರೆಗೆ 70 ಪದಕಗಳನ್ನು ಗಳಿಸಿದ್ದೇ ಏಷ್ಯಾನ್ ಗೇಮ್ಸ್ ನಲ್ಲಿ ದೇಶದ ಅತ್ಯುನ್ನತ ಸಾಧನೆಯಾಗಿತ್ತು. 2018 ರಲ್ಲಿ ಭಾರತ ಈ ಸಾಧನೆ ಮಾಡಿತ್ತು. ಆಗ ಭಾರತ 16 ಚಿನ್ನಗಳನ್ನು ಗಳಿಸಿತ್ತು.

ಆದರೆ ಈ ಬಾರಿ ಭಾರತ ಈಗಾಗಲೇ 28 ಚಿನ್ನಗಳ ಸಮೇತ ಒಟ್ಟು 107 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 38 ಬೆಳ್ಳಿ ಪದಕ, 41 ಕಂಚಿನ ಪದಕಗಳು ಸೇರಿವೆ.

ಭಾರತ ಒಟ್ಟಾರೆ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿದೆ. ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಚೀನಾ, ಜಪಾನ್ ಮತ್ತು ದಕ್ಷಿಣ ಕೋರಿಯಾ ತಂಡಗಳು ಇವೆ. ಭಾರತ 1982ರಲ್ಲಿ 5 ನೇ ಸ್ಥಾನ ಗಳಿಸಿದ್ದೇ ಇದುವರೆಗಿನ ದೇಶದ ಉನ್ನತ ಸಾಧನೆಯಾಗಿತ್ತು.

ಭಾರತ ಶೂಟಿಂಗ್, ಕಬ್ಬಡ್ಡಿ, ಕ್ರಿಕೆಟ್, ಬ್ಯಾಡ್ಮಿಂಟನ್, ಜಾವೆಲಿನ್, ರಿಲೇ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಚಿನ್ನದ ಸಾಧನೆ ಮಾಡಿ ಈ ಬಾರಿ ವಿಶ್ವದ ಗಮನ ಸೆಳೆದಿದೆ.

ಭಾರತ ಕ್ರೀಡಾ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ತನ್ನ ಸಾಧನೆಯನ್ನು ಉನ್ನತ ಮಟ್ಟದಲ್ಲಿ ತೋರ್ಪಡಿಸುತ್ತಿದೆ. ಭಾರತದ ಸಾಧನೆಗೆ ದೇಶದ ಜನತೆ ಪುಳಕಿತರಾಗಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ