October 5, 2024

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲ್ಲುಗುಡ್ಡ ಗೋಣಿಬೀಡು ಕ್ಲಸ್ಟರ್ ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಗೋಣಿಬೀಡು ಕ್ಲಸ್ಟರ್ ವಲಯದ ಎಲ್ಲಾ ಶಿಕ್ಷಕರು ಸೇರಿ ಇತ್ತೀಚಿಗೆ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಣ ಇಲಾಖೆಯಿಂದ ನೀಡುವ 2023-24ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಂತಹ  ಪ್ರಕಾಶ ಹೆಚ್ ಎ, ಮುಖ್ಯ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲ್ಲುಗುಡ್ಡ ಹಾಗೂ ಜಗದೀಶ ಡಿ ಎಂ, ದೈಹಿಕ ಶಿಕ್ಷಕರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗೋಣಿಬೀಡು ಇವರುಗಳ ಸಾಧೆನಯನ್ನು ಗುರುತಿಸಿ ನಮ್ಮ ಶಿಕ್ಷಕರು ನಮ್ಮ ಹೆಮ್ಮೆ ಎನ್ನುವ ಕಾರ್ಯಕ್ರಮದಡಿಯಲ್ಲಿ ಸರ್ವ ಶಿಕ್ಷಕರು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು.

ಶ್ರೀಯುತ ಪ್ರಕಾಶ ಹೆಚ್ ಎ ಮುಖ್ಯ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2012ರಿಂದ ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದು ಮೂಡಿಗೆರೆ ತಾಲೂಕಿನಲ್ಲಿ 17 ವರ್ಷಗಳ ಕಾಲ ತಮ್ಮ ವೃತ್ತಿ ಜೀವನವನ್ನು ಸಲ್ಲಿಸಿ ಹಲವಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಾಯವನ್ನು ಪಡೆದು ದಾನಿಗಳ ಸಹಕಾರವನ್ನು ಪಡೆದು ಶಾಲೆಯನ್ನು ಅತ್ಯುತ್ತಮವಾಗಿ ಶೈಕ್ಷಣಿಕವಾಗಿ ಹಾಗೂ ಭೌತಿಕವಾಗಿ ಸುಂದರ ಕಾಣುವಂತೆ ಮಾಡಿದ್ದಾರೆ. ಶಾಲೆಗೆ ಅತ್ಯಗತ್ಯವಾಗಿ ಬೇಕಾದಂತಹ ಮೂಲಭೂತ ಸೌಲಭ್ಯಗಳನ್ನು ಪಡೆದು ಮಕ್ಕಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಕೊಡ ಮಾಡುವ ಸಾವಿತ್ರಿ ಬಾಪುಲೆಯವರ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಕೂಡ ಇವರು ಪಡೆದಿದ್ದು ನಮ್ಮ ತಾಲೂಕಿಗೆ ಹೆಮ್ಮೆಯನ್ನು ತಂದು ಕೊಟ್ಟಿದ್ದಾರೆ. ತರಕಾರಿ ವನ ಶಾಲಾ ಕೈತೋಟ ಹಾಗೂ ಹೈಟೆಕ್ ಶೌಚಾಲಯ ನಿರ್ಮಾಣದಲ್ಲಿ ಇವರ ಪಾತ್ರ ಅದ್ವಿತೀಯವಾದದ್ದು. ಪ್ರತಿಬಿಂಬ ಸಂಸ್ಥೆಯ ದತ್ತು ಯೋಜನೆಗೆ ಒಳಪಡಿಸಿ ಈ ಶಾಲೆಯನ್ನು ಅದ್ವಿತೀಯ ಸ್ಥಾನದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಇವರ ಹೆಗ್ಗಳಿಕೆ. ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮೈಸೂರು ಇವರು ನೀಡುವಂತಹ ರಾಜ್ಯದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಇವರ ಶಾಲೆಯು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, ಅಭಿನಂದನ ಪತ್ರವನ್ನು ಸ್ವೀಕರಿಸಿದ್ದಾರೆ. ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಯುತ ಪ್ರಸನ್ನ ಎಂ ಎಚ್ ಸಹ ಶಿಕ್ಷಕರು ಇವರು ಬೆನ್ನುಕೊಟ್ಟು ಇಬ್ಬರ ಪರಿಶ್ರಮದಿಂದ ಶಾಲೆಯು ಅತ್ಯುತ್ತಮ ಮಟ್ಟದಲ್ಲಿ ಸಾಗುತ್ತಿರುವುದು ನಮ್ಮ ತಾಲೂಕಿಗೆ ಹಾಗೂ ಜಿಲ್ಲೆಗೆ ಹೆಮ್ಮೆಯನ್ನು ತಂದಿದೆ. ಈ ಸಮಯದಲ್ಲಿ ಶಾಲೆಯ ಎಸ್ಡಿಎಂಸಿ ಪೋಷಕರು ಹಾಗೂ ಗ್ರಾಮಸ್ಥರು ಹಾಗೂ ಎಲ್ಲಾ ದಾನಿಗಳು ಹಾಗೂ ಪ್ರತಿಬಿಂಬ ಸಂಸ್ಥೆಯ ಸಹಕಾರವನ್ನು ಕೊಂಡಾಡಿದರು.

ಈ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಶ್ರೀಯುತ ಜಗದೀಶ ದೈಹಿಕ ಶಿಕ್ಷಕರು ಸರ್ಕಾರಿ ಹಿರಿಯ ಮಾದರಿ ಶಾಲೆ ಗೋಣಿಬೀಡು ಇವರು ಪ್ರತಿವರ್ಷ ಕ್ರೀಡಾಕೂಟದಲ್ಲಿ ಮಕ್ಕಳನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಮಕ್ಕಳನ್ನು ಪ್ರತಿನಿಧಿಸುವಂತೆ ಮಾಡಿದ್ದು ಇವರ ಹೆಗ್ಗಳಿಕೆಯಾಗಿದ್ದು ಗುಂಪು ಆಟ ಹಾಗೂ ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಚಾಂಪಿಯನ್ಶಿಪ್ ಪಡೆಯುವಲ್ಲಿ ಇವರ ಪರಿಶ್ರಮ ಅದ್ವಿತೀಯವಾದದ್ದು.

ಈ ಇಬ್ಬರು ಶಿಕ್ಷಕರ ಸಾಧನೆಯನ್ನು ಗುರುತಿಸಿ ಕ್ಲಸ್ಟರ್ನ ಎಲ್ಲಾ ಶಿಕ್ಷಕರು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ಇಬ್ಬರನ್ನು ಸನ್ಮಾನಿಸಿದರು ಈ ಕಾರ್ಯಕ್ರಮದಲ್ಲಿ ಗೋಣಿಬೀಡು ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದಂತಹ ಶ್ರೀಮತಿ ಮಧುರವರು , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಯರಾದಂತಹ ಶ್ರೀಯುತ ಜಯಂತ್ ನಾಯಕ್ ರವರು, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದಂತಹ ಶ್ರೀಯುತ ವಿ ಚಂದ್ರಶೇಖರ್ ರವರು, ಶ್ರೀಮತಿ ಶಶಿಕಲಾ ಹಿರಿಯ ಶಿಕ್ಷಕರು ಗೋಣಿಬೀಡು ಹಾಗೂ ಗೋಣಿಬೀಡು ಕ್ಲಸ್ಟರ್ ನ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ