October 5, 2024

ಸ್ಮಶಾನ ಜಾಗದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಬಗ್ಗೆ ಮೂಡಿಗೆರೆ ತಾಲೂಕಿನ ಚಕ್ಕುಡಿಗೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸರ್ವೆ ನಂ 9ರಲ್ಲಿ 1.05 ಎಕರೆ ಸರಕಾರಿ ರುದ್ರಭೂಮಿ ಇದ್ದು, ಇದನ್ನು ಅನಾದಿ ಕಾಲದಿಂದಲೂ ಚಕ್ಕುಡಿಗೆ ಗ್ರಾಮದಲ್ಲಿ ನಿಧನ ಹೊಂದಿದವರ ಅಂತ್ಯ ಸಂಸ್ಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಈ ಭೂಮಿಯನ್ನು ಅರಣ್ಯೀಕರಣದ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿ ಉಪಯೋಗಕ್ಕೆ ಬಾರದಂತೆ ಮಾಡಲಾಗಿದೆ ಎಂದು ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಆರೋಪಸಿದ್ದಾರೆ.

ಗ್ರಾಮದ ಕೆಲವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚಕ್ಕುಡಿಗೆ ಗ್ರಾಮದಲ್ಲಿದ್ದ ಸ್ಮಶಾನ ಭೂಮಿಯನ್ನು ಕಳೆದ ತಿಂಗಳು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ನರೇಗಾ ಯೋಜನೆಯಡಿಯಲ್ಲಿ ಅರಣ್ಯೀಕರಣಗೊಳಿಸಲು ಏಕಾಏಕಿ ಗ್ರಾಮಸ್ಥರ ಗಮನಕ್ಕೆ ತರದೇ ಗಿಡಗಳನ್ನು ನೆಟ್ಟಿದ್ದಾರೆ. ಈ ಹಿಂದೆ ಕುಟುಂಬದವರು ಸ್ಮಶಾನಕ್ಕೆ ತೆರಳಿ ಹಿರಿಯರಿಗೆ ಪೂಜೆ ಸಲ್ಲಿಸುವ ವಾಡಿಕೆ ನಿರಂತರವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಮಶಾನದಲ್ಲಿ ಇದ್ದ ಹಳೆ ಮರಗಳನ್ನು ತೆರವುಗೊಳಿಸಿ ಗಿಡ ನೆಡುವ ಸಲುವಾಗಿ ಸಮಾದಿ ಹಾಗೂ ಶವ ಸುಡುವ ಸ್ಥಳವನ್ನು ಜೆಸಿಬಿಯಿಂದ ಬಗೆದು ಗ್ರಾಮಸ್ಥರ ಭಾವನೆಗಳಿಗೆ ದಕ್ಕೆ ಉಂಟು ಮಾಡಿದ್ದಾರೆಂದು ದೂರಿದರು.

ಈಗಾಗಲೇ ಅರಣ್ಯೀಕರಣ ಮಾಡಿರುವ ಶ್ಮಶಾನ ಭೂಮಿಯಲ್ಲಿ ಹಳೆ ಕಾಲದ ಮರಗಳನ್ನು ತೆರವುಗೊಳಿಸಿದ್ದು, ಆ ಸ್ಥಳಕ್ಕೆ ಗಿಡಗಳನ್ನು ನೆಟ್ಟಿರುವುದು ನ್ಯಾಯ ಸಮ್ಮತವಲ್ಲ. ನರೇಗಾ ಯೋಜನೆಯಡಿ 1.83 ಲಕ್ಷ ರೂ ಮಂಜೂರಾಗಿದ್ದು ಇದರಲಿ ಕೇವಲ ಸುಮಾರು 25-30 ಸಾವಿರ ರೂಗಳಲ್ಲಿ ಕೆಲಸ ಮುಗಿಸಿದ್ದಾರೆ. ಅಲ್ಲದೇ ಈ ಕೆಲಸವನ್ನು ನಿಯಮವಾಗಿ ಕಾರ್ಮಿಕರಿಂದ ಮಾಡಿಸಬೇಕಿತ್ತು. ಬದಲಾಗಿ ಜೆಸಿಬಿ ಮೂಲಕ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಸಚಿವರು, ಜಿಲ್ಲಾಧಿಕಾರಿ, ಜಿ.ಪಂ.ಸಿಇಒ ಗೆ ದೂರು ನೀಡಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲಿ ಗ್ರಾಮಸ್ಥರಾದ ಗಿರಿಪ್ರಸಾದ್, ಕುಮಾರ್, ತೇಜಾ, ರಾಜಶೇಖರ್, ಪುಟ್ಟರಾಜು, ನಾಗರಾಜು, ರಾಹುಲ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ