October 5, 2024

ಇತರರ ಹಸಿವನ್ನು ನೀಗಿಸಿ ಆ ನಂತರ ತನ್ನ ಹಸಿವನ್ನು ನೀಗಿಸಲು ಆಹಾರ ಸೇವಿಸುವ ಜೀವನ ಮೌಲ್ಯ ಎಲ್ಲರದಾಗಬೇಕಿದೆ ಎಂದು ಬಣಕಲ್ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಧರ್ಮಗುರುಗಳಾದ ಅಮಿರ್ ಅಲ್ ಫಾರೂಖಿ ಹೇಳಿದರು.

ಬಣಕಲ್‌ನಲ್ಲಿ ಈದ್ ಮಿಲಾದ್ ಹಿನ್ನಲೆಯಲ್ಲಿ ಪ್ರವಚನ ನೀಡಿ ಅವರು ಮಾತನಾಡಿ, ಪ್ರಪಂಚದಾದ್ಯಂತ ಪ್ರವಾದಿ ಮಹಮ್ಮದರ ಜನ್ಮದಿನವನ್ನು ಈದ್ ಎ ಮಿಲಾದ್ ಎಂದು ಆಚರಿಲಾಗುತ್ತದೆ. ಮುಸ್ಲಿಂ ಸಮುದಾಯಕ್ಕೆ ಈ ದಿನವು ಅತ್ಯಂತ ಮಹತ್ವದಾಗಿದೆ. ಪ್ರವಾದಿ ಮಹಮ್ಮದರ ಭೋಧನೆಗಳು ದಾರಿದೀಪವಾಗಿವೆ ಎಂದರು.

ಬಣಕಲ್ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಧರ್ಮಗುರುಗಳಾದ ಮುಹಮ್ಮದ್ ಹಾರಿಸ್ ಬಾಖವಿ ಮಾತನಾಡಿ, ದ್ ನ ಶುಭ ದಿನದಂದು ಮೆರವಣಿಗೆಯನ್ನು ನಡೆಸಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಕುರಾನ್ ಸಂದೇಶಗಳನ್ನು ಪಠಿಸಿ ವಿಶೇಷವಾಗಿ ಈದ್ ಮಿಲಾದ್ ಆಚರಿಸಲಾಗುತ್ತದೆ ಎಂದರು.

ಈದ್ ಮಿಲಾದ್ ಪ್ರಯುಕ್ತ ಬಣಕಲ್ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿದ್ದು ಬಣಕಲ್ ಮೊಹಿದ್ದಿನ್ ಮಸೀದಿಯಿಂದ ಹೊರಟ ಮೆರವಣಿಗೆಯಲ್ಲಿ ಮುಸ್ಲಿಂ ಭಾಂದವರು ಹೆಜ್ಜೆ ಹಾಕಿದ್ದರು. ದಫ್ ನೃತ್ಯ, ಕವಾಲಿ ನ್ಯತ್ಯ ಎಲ್ಲರ ಗಮನ ಸೆಳೆಯಿತು. ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮುಸ್ಲಿಂ ಸಮುದಾಯ ಭಾಂದವರಿಗೆ, ಸಾರ್ವಜನಿಕರಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ