October 5, 2024

swami - 1

ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂಬ ಬಿರುದು ಪಡೆದಿದ್ದ ಹಿರಿಯ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ (98 ವರ್ಷ) ಇಂದು ನಿಧನರಾಗಿದ್ದಾರೆ.
ಇಂದು ಮುಂಜಾನೆ 11-15 ರ ಸಮಯದಲ್ಲಿ ಚೆನೈನ ತಮ್ಮ ಸ್ವಗೃಹದಲ್ಲಿ ಸ್ವಾಮಿನಾಥನ್ ಕೊನೆಯುಸಿರೆಳೆದಿದ್ದಾರೆ.

ಭಾರತ ಮಾತ್ರವಲ್ಲದೇ ವಿಶ್ವಮಟ್ಟದಲ್ಲಿಯೇ ಇವರು “ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ” ಎಂದು ವಿಶ್ವಸಂಸ್ಥೆಯಿಂದ ಬಣ್ಣಿಸಲ್ಪಟ್ಟಿದ್ದರು. ಅನೇಕ ರಾಷ್ಟ್ರಗಳು ಇವರ ಕೃಷಿ ಸಂಶೋಧನೆಗಳಿಂದ ಅನುಕೂಲ ಪಡೆದು ಆರ್ಥಿಕ ಅಭಿವೃದ್ಧಿ ಸಾಧಿಸಿವೆ.

ಭಾರತದ ಮಟ್ಟಿಗೆ ಇವರು ಆಧುನಿಕ ಕೃಷಿಯ ಅವತಾರ ಪುರುಷರಾಗಿ ಗುರುತಿಸಿಕೊಂಡಿದ್ದರು. ಅಧಿಕ ಇಳುವರಿ ಕೊಡುವ ಭತ್ತ ಮತ್ತು ಗೋಧಿ ತಳಿಗಳನ್ನು ಸಂಶೋಧನೆ ಮಾಡಿ ಅದರಿಂದ ಕಡಿಮೆ ಇಳುವರಿಯಿಂದ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದ ಸಾಮಾನ್ಯ ರೈತರು ಹೆಚ್ಚಿನ ಆಧಾಯ ಗಳಿಸಲು ಇವರು ಪ್ರೇರಕ ಶಕ್ತಿಯಾಗಿದ್ದರು.

ಭಾರತ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ನೇಮಕವಾದ ಸ್ವಾಮಿನಾಥನ್ 1960-70ನೇ ದಶಕದಲ್ಲಿ ಕೈಗೊಂಡ ಸಂಶೋಧನೆಗಳು ಭಾರತದ ಕೃಷಿಯ ದಿಕ್ಕನ್ನೆ ಬದಲಿಸಿದವು. ಭಾರತದ ಸಾಂಪ್ರದಾಯಿಕ ಕೃಷಿಗೆ ಆಧುನಿಕ ಸ್ಪರ್ಶ ನೀಡಿ ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಜಾರಿಗೆ ತಂದರು. ರಸಗೊಬ್ಬರಗಳ ಬಳಕೆಯು ಹೆಚ್ಚಾಯಿತು. ಇದೆಲ್ಲದರ ಪರಿಣಾಮವಾಗಿ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆಯನ್ನು ಸಾಧಿಸಲು ಕಾರಣವಾದವು.
ಇವರ ಸಾಧನೆಯನ್ನು ಗುರುತಿಸಿ ಅನೇಕ ರಾಷ್ಟ್ರ ಮತ್ತು ಅಂತರಾಷ್ಟ್ರೀ ಯ ಪ್ರಶಸ್ತಿಗಳು ಅರಸಿ ಬಂದಿವೆ.

ಸ್ವಾಮಿನಾಥನ್ ಅವರ ನಿಧನಕ್ಕೆ ದೇಶದ ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ