October 5, 2024

ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಎಲ್ಡೋಸ್ ಆಸ್ಪತ್ರೆಯ ಡಿ.ದರ್ಜೆ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎನ್.ಆರ್. ಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ಜಾಮೀನು ರದ್ದುಗೊಳಿಸಿದ್ದು, ಅಕ್ಟೋಬರ್ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರಿಂದ ಜಾಮೀನು ಪಡೆದು ಜಾಲಿಯಾಗಿದ್ದ ಡಾಕ್ಟರ್ ಎಲ್ಡೋಸ್ ಈಗ ಜೈಲು ಪಾಲಾಗುವಂತೆ ಆಗಿದೆ.

ಸೆಪ್ಟಂಬರ್ 20 ರಂದು ಎನ್.ಆರ್. ಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಮತ್ತು ತಾಲ್ಲೂಕು ವೈದ್ಯಾಧಿಕಾರಿಯಾಗಿದ್ದ ಡಾ. ಎಲ್ಡೋಸ್ ವರ್ಗೀಸ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರನ್ನು ಬಾಳೆಹೊನ್ನೂರಿನ ವಸತಿ ಗೃಹದಲ್ಲಿ ಒತ್ತಾಯಪೂರ್ವಕವಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ  ಡಾ.ಎಲ್ಡೋಸ್ ಗೆ ಮಹಿಳೆಯ ಸಂಬಂಧಿಕರು ಮತ್ತು ಸಾರ್ವಜನಿಕರರು ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಬಾಳೆಹೊನ್ನೂರು ಠಾಣೆಯಲ್ಲಿ ಮಹಿಳೆ ತನ್ನನ್ನು ಬ್ಲಾಕ್ ಮೇಲ್ ಮಾಡಿ ಡಾ. ಎಲ್ಡೋಸ್ ಒತ್ತಾಯಪೂರ್ವಕವಾಗಿ ವಸತಿಗೃಹಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಅಂದು ಡಾ. ಎಲ್ಡೋಸ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿತ್ತು.

ಆದರೆ ನಿನ್ನೆ ಪ್ರಕರಣದ ವಿಚಾರಣೆ ವೇಳೆ ಎನ್.ಆರ್.ಪುರ ನ್ಯಾಯಾಲಯದಲ್ಲಿ ಡಾ. ಎಲ್ಡೋಸ್ ಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ ಆಕ್ಟೋಬರ್  7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರಿಂದಾಗಿ ಡಾ. ಎಲ್ಡೋಸ್ ಜೈಲು ಪಾಲಾಗಿದ್ದಾರೆ.

ಏನಿದು ಪ್ರಕರಣ ? :

ಎನ್.ಆರ್.ಪುರ ಆಸ್ಪತ್ರೆಯಲ್ಲಿ ಡಿ.ದರ್ಜೆ ಮಹಿಳಾ ನೌಕರರೊಬ್ಬರು ಗುತ್ತಿಗೆ ಆಧಾರದಲ್ಲಿ ಡೆಪ್ಟೇಷನ್ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ಅವರ ಡೆಪ್ಟೇಷನ್ ಅವಧಿ ಮುಕ್ತಾಯವಾಗಿದ್ದು ಮೂಲ ಸ್ಥಾನ ಕಳಸ ಆಸ್ಪತ್ರೆಗೆ ಹೋಗಬೇಕಾಗಿತ್ತು. ಆಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ತಾಲ್ಲೂಕು ವೈದ್ಯಾಧಿಕಾರಿಯಾಗಿದ್ದ  ಹಿರಿಯ ವೈದ್ಯ ಡಾ. ಎಲ್ಡೋಸ್ ಕಳಸಕ್ಕೆ ಹೋಗಿ ಡೆಪ್ಟೇಷನ್ ಮುಂದುವರಿಸಿಕೊಡುತ್ತೇನೆ ಎಂದು ಮಹಿಳೆಯನ್ನು ವಾಹನದಲ್ಲಿ ಕರೆದುಕೊಂಡು ಕಳಸಕ್ಕೆಂದು ಹೊರಟಿದ್ದಾನೆ. ದಾರಿಮಧ್ಯೆ ಬಾಳೆಹೊನ್ನೂರಿನಲ್ಲಿ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಸರ್ಕಾರಿ ವಸತಿಗೃಹಕ್ಕೆ ಕರೆದೊಯ್ದಿದ್ದಾನೆ. ಈ ವಿಷಯ ತಿಳಿದ ಮಹಿಳೆಯ ಸಂಬಂಧಿಕರು ವಸತಿ ಗೃಹಕ್ಕೆ ಬಳಿ ಬಂದು ಕೊಠಡಿಯಲ್ಲಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಡಾ. ಎಲ್ಡೋಸ್ ಮೇಲೆ ಹಲ್ಲೆ ನಡೆಸಿದ್ದರು. ನಂತರ ಮಹಿಳೆ ವೈದ್ಯನ ವಿರುದ್ಧ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ