October 5, 2024

ಮೂಡಿಗೆರೆ ತಾಲೂಕಿನ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2022 -23ನೇ ಸಾಲಿನಲ್ಲಿ ರೂ 43.36 ಲಕ್ಷ ನಿವ್ವಳ ದೊರೆತಿದೆ ಎಂದು ಅಧ್ಯಕ್ಷ ಟಿ.ಎಂ.ಗಜೇಂದ್ರಗೌಡ ಹೇಳಿದರು.

ಬಣಕಲ್ ಚರ್ಚ್ ಸಮುದಾಯ ಭವನದಲ್ಲಿ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

47ವರ್ಷಗಳ ಸುದೀರ್ಘ ಅವಧಿಯಿಂದ ಸಂಘವು ಮುನ್ನಡೆಯುತ್ತಾ ಬಂದು ಪ್ರಗತಿ ಪಥದಲ್ಲಿ ಸಾಗಿದೆ. ಸಂಘದಲ್ಲಿ 1978 ಜನ ಸದಸ್ಯರಿಗೆ 32ಕೋಟಿ 72 ಲಕ್ಷ ಕೃಷಿ ಮತ್ತು ಕೃಷಿಯೇತರ ಸಾಲವನ್ನು ನೀಡಲಾಗಿದೆ. ಸಂಘವು 16 ವರ್ಷಗಳಿಂದ ಲೆಕ್ಕ ಪರಿಶೋಧನೆಯಲ್ಲಿ ಎ’ ತರಗತಿ ಶ್ರೇಣಿಯೊಂದಿಗೆ ಉತ್ತಮ ಸಾಧನೆ ಮಾಡಿದೆ. ಕೊಟ್ಟಿಗೆಹಾರದಲ್ಲಿ ನೂತನ ಆಹಾರ ಧಾನ್ಯ ಮಾರಾಟ ಮಳಿಗೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಎರಡು ತಿಂಗಳಿನಲ್ಲಿ ಉದ್ಘಾಟನೆಯಾಗಲಿದೆ. ಸರ್ಕಾರವು ರೂ 5ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಬೆಳೆ ಸಾಲ ನೀಡಲು ಘೋಷಣೆ ಮಾಡಿದೆ. ಆದೇಶವು ನಮಗೆ ಬಂದಿದೆ. ರೈತರಿಗೆ ಶೇ10 ಡಿವಿಡೆಂಟ್ (ಲಾಭಾಂಶ)ನೀಡುತ್ತೇವೆ. ನಮ್ಮ ಸಂಘದ ಮೇಲ್ಭಾಗದಲ್ಲಿ ನೂತನ ಸಭಾಂಗಣ ನಿರ್ಮಿಸಲು ಸರ್ವ ಸದಸ್ಯರ ದಾನಿಗಳ ಸಹಕಾರವಿದ್ದರೆ ಕಟ್ಟಡ ನಿರ್ಮಾಣ ಸುಗಮವಾಗಲಿದೆ’ ಎಂದರು.

ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಮಾತನಾಡಿ ‘ಸಹಕಾರ ಸಂಘವು ಲಾಭ ಹೊಂದಿದ್ದು ಸಂಘದಲ್ಲಿ ನಂಬಿಕೆ ಉಳಿಸಿಕೊಂಡು ರೈತರು ವ್ಯವಹಾರ ಮಾಡಬೇಕು. ಸಂಘವು ಮೂಲಭೂತ ಸೌಕರ್ಯಕ್ಕೂ ಸಾಲ ನೀಡುತ್ತಿದೆ. ಸರ್ವ ಸದಸ್ಯರ ಶ್ರಮದಿಂದ ಸಹಕಾರ ಸಂಘ ಅಭಿವೃದ್ದಿ ಹೊಂದಿದೆ. ಜಿಲ್ಲಾ ಬ್ಯಾಂಕ್ ನಿಂದ ಅನುದಾನ ನೀಡಲು ಸಹಕಾರ ನೀಡಲಾಗುವುದು’ ಎಂದರು.

ಸಂಘದ ನಿರ್ದೇಶಕ ಬಿ.ಎಂ.ಭರತ್ ಮಾತನಾಡಿ ‘ಸಂಘ ಅಭಿವೃದ್ಧಿಯಾಗಬೇಕಾದರೆ ಸಂಘದ ಸದಸ್ಯರ ಸಹಕಾರ ಮುಖ್ಯವಾಗಿದೆ. ರೈತರು ಹೂಡಿಕೆ ಮಾಡುವ ಮೂಲಕ ವಿವಿಧ ಸೌಲಭ್ಯ ಪಡೆದುಕೊಳ್ಳಿ’ ಎಂದರು. ಕಾರ್ಯಕ್ರಮದಲ್ಲಿ ಎ.ಆರ್.ಅಭಿಲಾಷ್ ಮಾತನಾಡಿ’ ನಮ್ಮ ಸಂಘದಲ್ಲಿ ಕಳಪೆ ಮಟ್ಟದ ಗೊಬ್ಬರ ಮಾರಾಟ ಮಾಡುವುದಿಲ್ಲ. ಈಗ ಬರುತ್ತಿರುವ ಹೊಸ ರೂಪದ ಗೊಬ್ಬರದ ಚೀಲಗಳಿಂದ ಗೊಂದಲವಾಗಿರಬಹುದು. ರೈತರು ಏನೇ ದೂರಿದ್ದರೂ ನೇರವಾಗಿ ಸಂಘದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬಹುದು ಎಂದರು.

ಸಂಘದ ವಾರ್ಷಿಕ ಅಡಳಿತ ವರದಿಯನ್ನು ಮುಖ್ಯ ಕಾರ್ಯನಿರ್ವಾಹಕ ಜಿ.ಪಿ.ನಿಶಾಂತ್ ಮಂಡಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಬಿ.ಎಸ್.ವಿಕ್ರಂ, ಬಿ.ಶಿವರಾಮಶೆಟ್ಟಿ, ಬಿ.ಕೆ.ಪ್ರಥ್ವಿ, ರಮೇಶ್ ಗುಡ್ಡಹಟ್ಟಿ, ದಿಲ್ ದಾರ್ ಬೇಗಂ ಮಾತನಾಡಿದರು. ಸಮಾರಂಭದಲ್ಲಿ ಉಪಾಧ್ಯಕ್ಷೆ ಎಚ್.ಕೆ.ಮಮತ, ಅಭಿಲಾಷ್, ರಂಗನಾಥ್, ಬಿ.ಎಸ್.ಕಲ್ಲೇಶ್, ಶಾಮಣ್ಣ ಬಣಕಲ್, ಜಿ.ಬಿ.ಲಕ್ಷ್ಮಿ, ಆರ್.ಚಂದ್ರಶೇಖರ್, ಕೆ.ಪಿ.ರಮೇಶ್, ಬಿ.ಎಲ್.ಅಶ್ವಥ್, ಬಿ.ಎಸ್.ನಾರಾಯಣ್, ಬಿ.ಎ.ಪ್ರದೀಪ್, ಎ.ಬಿ.ನಾಗೇಶ್ ಗೌಡ, ಬಿ.ಎಂ.ಸತೀಶ್, ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಯು.ಸಿ.ಪ್ರಯಾಗ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ