October 5, 2024

ಮೂಡಿಗೆರೆ ಟಿ.ಎ.ಪಿ.ಸಿ.ಎಂ.ಎಸ್. ನಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರವನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಬಿ.ಜೆ.ಪಿ. ತಾಲ್ಲೂಕು ಅಧ್ಯಕ್ಷ ಜೆ.ಎಸ್. ರಘು ದೂರಿದ್ದಾರೆ.

ಈ ಸಂಬಂಧ ಇಂದು  ಮೂಡಿಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮೂಡಿಗೆರೆ ರೈತಭವನದ ಊಟದ ಹಾಲ್ ನ ಅಡುಗೆ ಮನೆ, ಮೇಲಂತಸ್ತು ಕಟ್ಟಡ ನಿರ್ಮಾಣದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಕಳೆದ ವರ್ಷ ಟಿ.ಎ.ಪಿ.ಸಿ.ಎಂ.ಎಸ್. ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ದೂರುಗಳು ಕೇಳಿಬಂದಿದ್ದವು. ಆಗ ಸದಸ್ಯರ ಸರ್ವಾನುಮತದ ತೀರ್ಮಾನದಂತೆ ಈ ಬಗ್ಗೆ ತನಿಖೆಗೆ ವಹಿಸಲಾಗಿತ್ತು.

ಆದರೆ ಇತ್ತೀಚೆಗೆ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ತನಿಖಾ ವರದಿ ನೀಡಿದ್ದಾರೆ ಎಂದು ಕಾಂಗ್ರೇಸ್ ನವರು ಬೀಗುತ್ತಿದ್ದಾರೆ ಮತ್ತು ಇದನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ತನಿಖಾ ವರದಿಯೇ ಒಂದು ಅವ್ಯವಹಾರವಾಗಿದ್ದು, ಕಾಂಗ್ರೇಸ್ ಅಧಿಕಾರಕ್ಕೆ ಬಂದಮೇಲೆ ರಾಜಕೀಯ ಪ್ರಭಾವ ಬಳಸಿ ಅವ್ಯವಹಾರವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ತನಿಖಾಧಿಕಾರಿ ಸ್ಥಳ ಪರಿಶೀಲನೆ ನಡೆಸದೇ, ದೂರುದಾರರ ಅಭಿಪ್ರಾಯವನ್ನು ಆಲಿಸದೇ ಕಛೇರಿಯಲ್ಲಿಯೇ ಕುಳಿತು ವರದಿ ತಯಾರಿಸಿದ್ದಾರೆ ಎಂದು ದೂರಿದ್ದಾರೆ.  ದೂರುದಾರರ ಗಮನಕ್ಕೂ ತಾರದೆ ಇಲ್ಲಿನ ಟಿಎಪಿಸಿಎಂಎಸ್ ಅವ್ಯವಹಾರವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಿಯಿಂದ ಸುಳ್ಳು ತನಿಖೆ ನಡೆಸಿ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಎಲ್ಲಾ ಕಡೆ ಪ್ರಚಾರ ನಡೆಸುತ್ತಿದ್ದಾರೆ. ವಾಸ್ತವವಾಗಿ ತನಿಖೆಗೆ ನೇಮಿಸಿದ ಅಧಿಕಾರಿಯೇ ಅಂತಿಮ ವರದಿಯನ್ನು ಕೊಡಬೇಕಾಗುತ್ತದೆ. ಆದರೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತರಿಕೆರೆ ಇವರು ಸರಿಯಾಗಿ ತನಿಖೆಯನ್ನು ಮಾಡದೇ ಕೊಟ್ಟಂತಹ ಲೆಕ್ಕಪತ್ರದ ವಿವರವನ್ನೇ ಅಂತಿಮ ವರದಿ ಎಂಬಂತೆ ಬಿಂಬಿಸಿ ತಾವು ದೋಷಮುಕ್ತರಾಗಿದ್ದೇವೆ ಎಂದು ಬೀಗುತ್ತಿದ್ದಾರೆ. ಮತ್ತು ಇದನ್ನು ಕಾಂಗ್ರೇಸ್ ಪಕ್ಷದ ಗೆಲುವು ಎಂದು ಬಿಂಬಿಸುತ್ತಿದ್ದಾರೆ. ಇದನ್ನು ಬಿ.ಜೆ.ಪಿ. ತೀವ್ರವಾಗಿ ಖಂಡಿಸುತ್ತದೆ.

ಈ ಹಿಂದೆ ಟಿಎಪಿಸಿಎಂಎಸ್‌ನ  ಸರ್ವ ಸದಸ್ಯರ ಸಭೆಯಲ್ಲಿ ಪ್ರಕರಣವನ್ನು 64 b ವ್ಯಾಪ್ತಿಯಲ್ಲಿ ತನಿಖೆ ನಡೆಸಬೇಕು ಎಂದು ನಿರ್ಣಯವಾಗಿತ್ತು. ಇದನ್ನು ವಿರೋದಿಸಿ ಅಂದು ಕಟ್ಟಡ ಸಮಿತಿ ಅಧ್ಯಕ್ಷರಾಗಿದ್ದವರು ಕಟ್ಟಡದ ಮೇಲೆ ಏರಿ ಅತ್ಮ ಹತ್ಯೆ ನಾಟಕ ಅಡಿದ್ದರು. ಅದರೆ  ಸದಸ್ಯರ ಅನುಮತಿಯಂತೆ   ಕಾರ್ಯಪಾಲಕ ಇಂಜಿನಿಯರ್ ಇವರಿಗೆ ತನಿಖೆಯ ಹೊಣೆಯನ್ನು ವಹಿಸಲಾಗಿತ್ತು ಆದರೆ ಸದರಿ ಅಧಿಕಾರಿ ತನಿಖೆಯನ್ನು ನಡೆಸುವ ಬದಲು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೂಲಕ ದೂರುದಾರರ ಮತ್ತು ಆಡಳಿತ ಮಂಡಳಿಯ ಗಮನಕ್ಕೂ ತಾರದೆ ಸ್ಥಳ ಪರಿಶೀಲನೆಯನ್ನು ಮಾಡದೆ ನೇರ ತಮ್ಮ ಕಚೇರಿಯಲ್ಲಿ ಕುಳಿತು ಅಪಾದಿತರಿಗೆ ಅನುಕೂಲವಾಗುವ ಹಾಗೆ ವರದಿ ತಯಾರಿಸಿದ್ದಾರೆ.

ಕಾಮಗಾರಿಗೆ ಟೆಂಡರ್ ಕರೆಯಬೇಕೆಂದು ನಿಯಮವಿದ್ದರೂ ಕರೆಯದೆ ನಿರ್ಮಿತಿ ಕೇಂದ್ರಕ್ಕೆ ನೀಡಿ ಸದರಿ ಅಪಾಧಿತ ಸದಸ್ಯರೆ ಕಾಮಗಾರಿ ನಡೆಸಿದ್ದರು.  ಬಿಲ್ ಪಾವತಿ ಮಾಡುವಾಗ ಮೇಲಾಧಿಕಾರಿಗಳಿಂದ ಅಳತೆ ಪಡೆದಿರುವುದಿಲ್ಲ. ಬಿಲ್ ಗೆ  ಸಭೆಯ ಅನುಮತಿಯನ್ನು ಪಡೆದಿರುವುದಿಲ್ಲ. ಕಾಮಗಾರಿ ನಡೆಯುವ ಮುಂಚೆಯೇ ಹಣ ಪಾವತಿಸಲಾಗಿದೆ. ಸಾಮಗ್ರಿಗಳ ಬಳಕೆಯಲ್ಲಿ ಅಂದಿನ ದರ ಪಟ್ಟಿಯ ಎರಡರಷ್ಟು ಬಿಲ್ ಮಾಡಲಾಗಿದ್ದು. ಸರ್ಕಾರಿ ಮಾರ್ಗಸೂಚಿಯ ದರ ಪಟ್ಟಿಯನ್ನು ಪಾಲಿಸಿರುವುದಿಲ್ಲ. ಅಂತಿಮ ಬಿಲ್ ಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಂದ ಒಪ್ಪಿಗೆ ಪಡೆದಿರುವುದಿಲ್ಲ. ಚುನಾಯಿತ ಜನಪ್ರತಿನಿಧಿಗಳ ಅನುದಾನದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಹಣ ಪಡೆಯಲಾಗಿದೆ. ಅಲ್ಲಿ ಯಾವ ರಸ್ತೆಯು ಇರುವುದಿಲ್ಲ.  ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಎ.ಎ. ಶಿವು, ಜ್ಯೋತಿ ಹೇಮಶೇಖರ್, ಎಂ.ಎಸ್.ಅನಂತ್ ಅವರು ಜಿ.ಪಂ. ಸದಸ್ಯರಾಗಿದ್ದ ಪಡೆದ 6ಲಕ್ಷ ಅನುದಾನ ಯಾವುದಕ್ಕೆ ಬಳಸಲಾಗಿದೆ  ಎಂದು  ತಿಳಿದು ಬಂದಿಲ್ಲ.

ಅಂದು ಸುಮಾರು 50 ಲಕ್ಷಕ್ಕೆ ಆಗುವ ಕಾಮಗಾರಿಯನ್ನು 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಅವ್ಯವಹಾರ ನಡೆಸಲಾಗಿದ್ದು. ಈಗ ಸುಳ್ಳು ತನಿಖೆ ಮೂಲಕ ತಪ್ಪನ್ನು ಮರೆಮಾಚಿಕೊಳ್ಳಲು ಸಹಕಾರಿ ಸಂಸ್ಥೆಯನ್ನು ಕಾಂಗ್ರೆಸ್ ಪಕ್ಷವು ರಾಜಕೀಯಕ್ಕೆ ಬಳಸಿಕೊಂಡು   ಸಂಸ್ಥೆಯ ಸರ್ವ ಸದಸ್ಯರ  ನಿರ್ಧಾರಕ್ಕೆ ಅಗೌರವ ತರಲಾಗಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇದನ್ನು ಮಹಾನ್ ಗೆಲುವು ಎಂದು  ಆಚರಿಸಿರುವುದು ನಾಚಿಕೆಗೇಡು ಅಗಿದ್ದು ಇದನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ, ಈ ಪ್ರಕರಣವನ್ನು ಮರುತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು   ಆಗ್ರಹಿಸುತ್ತದೆ ಮತ್ತು ಈ ಬಗ್ಗೆ ಸೂಕ್ತ ವೇದಿಕೆಯಲ್ಲಿ ವಿಷಯ ಪ್ರಸ್ತಾಪಿಸಿ ಹೋರಾಟ ನಡೆಸುತ್ತೇವೆ ಎಂದು  ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಪಂಚಾಕ್ಷರಿ ಹಾಲೂರು, ಗಜೇಂದ್ರ ಕೊಟ್ಟಿಗೆಹಾರ, ಬಿ.ಜೆ.ಪಿ. ವಕ್ತಾರ ನಯನ ತಳವಾರ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ