October 5, 2024

ಸಾರಿಗೆ ಇಲಾಖೆ ವತಿಯಿಂದ ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ  ಎಲ್ಲ(ಹಳೆಯ/ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಸುರಕ್ಷಿತ ನೋಂದಣಿ ಫಲಕಗಳನ್ನು(ಎಚ್.ಎಸ್.ಆರ್.ಪಿ)ಅಳವಡಿಸುವುದು ಕಡ್ಡಾಯವಾಗಿದೆ.

HSRP ಎಂದರೆ High Security Registration Plate ಎಂದರ್ಥ. ಇದು ಅಲ್ಯುಮಿನಿಯಂ ನಿಂದ ಮಾಡಲ್ಪಟ್ಟ ನಂಬರ್ ಪ್ಲೇಟ್ ಆಗಿರುತ್ತದೆ. ಇದರಲ್ಲಿ ಕ್ರೊಮಿಯಂ ನಿಂದ ಮಾಡಲ್ಪಟ್ಟ ಅಶೋಕ ಚಕ್ರದ ಹಾಲೋಗ್ರಾಮ್ ಇರುತ್ತದೆ.

ಅಪರಾಧ ತಡೆ, ವಾಹನ ಕಳ್ಳತನ ತಡೆ ಸೇರಿದಂತೆ ಅನೇಕ ವಾಹನ ಸುರಕ್ಷತೆಗಾಗಿ ಈ ಕ್ರಮ ವಹಿಸಲಾಗುತ್ತಿದೆ ಎನ್ನಲಾಗಿದೆ.

HSRP ನಂಬರ್ ಪ್ಲೇಟ್ ಅಳವಡಿಕೆಗೆ ಆನ್ ಲೈನ್ ಮೂಲಕವೇ ನೊಂದಣಿ ಮಾಡಬೇಕಾಗಿದೆ. ಆನ್ ಲೈನ್ ಮೂಲಕ ನೊಂದಣಿ ಮಾಡಿ ಡೀಲರ್ ಗಳನ್ನು ಆಯ್ಕೆ ಮಾಡಿ ನಿಗದಿತ ಶುಲ್ಕ ಪಾವತಿಸಿದರೆ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಲು ದಿನಾಂಕ ನಿಗದಿ ಮಾಡಲಾಗುತ್ತದೆ. ಆ ದಿನಾಂಕದಂದು ತಮ್ಮ ವಾಹನವನ್ನು ನಿಗದಿತ ಡೀಲರ್ ಬಳಿ ಕೊಂಡೊಯ್ದರೆ ಅಂದು HSRP ನಂಬರ್ ಪ್ಲೇಟ್ ಅಳವಡಿಸಿಕೊಡಲಾಗುತ್ತದೆ.

HSRP ನಂಬರ್ ಪ್ಲೇಟ್ ಅಳವಡಿಕೆಯ ಕಾರ್ಯವಿಧಾನ: https://transport.karnataka.gov.inಅಥವಾ www.siam.in ಗೆ ಭೇಟಿ ನೀಡಿ BOOK HSRP ಅನ್ನು ಕ್ಲಿಕ್ ಮಾಡಿ.

* ನಿಮ್ಮ ವಾಹನ ತಯಾರಕರನ್ನು  ಆಯ್ಕೆ ಮಾಡಿ. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ, ಎಚ್.ಎಸ್.ಆರ್.ಪಿ ಶುಲ್ಕವನ್ನು ಆನ್‍ಲೈನ್ ನಲ್ಲಿ ಪಾವತಿಸಿ.

* ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಪಾವತಿ ಮಾಡುವಂತಿಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಚ್.ಎಸ್.ಆರ್.ಪಿ ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.

* ನಿಮ್ಮ ವಾಹನದ ಯಾವುದೆ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ ವಾಹನ ಮಾಲಕರ ಕಚೇರಿ ಆವರಣ/ ಮನೆಯ ಸ್ಥಳದಲ್ಲಿ ಎಚ್.ಎಸ್.ಆರ್.ಪಿ ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್, IND ಮಾರ್ಕ್, ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ ಎಚ್.ಎಸ್.ಆರ್.ಪಿ/ ಒಂದೇ ರೀತಿಯ ಪ್ಲೇಟ್ ಗಳು/ ಸ್ಮಾರ್ಟ್ ನಂಬರ್ ಪ್ಲೇಟ್ ಗಳನ್ನು ಅಳವಡಿಸುವಂತಿಲ್ಲ.

ಅವುಗಳು ಎಚ್.ಎಸ್.ಆರ್.ಪಿ ಫಲಕಗಳಾಗಿರುವುದಿಲ್ಲ, ಎಚ್.ಎಸ್.ಆರ್.ಪಿ ಅಳವಡಿಸದ ಹೊರತು, ವಾಹನ ಮಾಲಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು/ರದ್ದತಿ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳನ್ನು ಅನುಮತಿಸುವುದಿಲ್ಲ.

ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ ಎಚ್.ಎಸ್.ಆರ್.ಪಿ ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್.ಎಸ್.ಆರ್.ಪಿ ರಸೀದಿಯನ್ನು ಪ್ರಸುತ್ತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ. ಒಂದು ವೇಳೆ ನಿಗದಿತ ಅವಧಿಯೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದಿದ್ದರೆ ವಾಹನಗಳಿಗೆ 500ರಿಂದ 1 ಸಾವಿರ ರೂ. ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಎಚ್.ಎಸ್.ಆರ್.ಪಿ ಅಳವಡಿಕೆಗೆ ನ.17 ಕೊನೆಯ ದಿನವಾಗಿರುತ್ತದೆ ಎಂದು ಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ