October 5, 2024

ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ. 1606521 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಕೆ. ದಿವಾಕರ್ ತಿಳಿಸಿದ್ದಾರೆ.

ಶುಕ್ರವಾರ ಸಂಘದ ಆವರಣದಲ್ಲಿ ನಡೆದ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಂಘವು ಪ್ರಸ್ತುತ 1,82,36,475 ರೂ ಠೇವಣಿ ಹೊಂದಿದ್ದು, ರೂ. 862150 ಷೇರು ಬಂಡವಾಳ ಹೊಂದಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸಂಘದ ವ್ಯಾಪ್ತಿಯ ರೈತರಿಗೆ 10,53,70,000 ರೂ. ಕೃಷಿ ಸಾಲ ಮತ್ತು 2,01,97,400-00 ರೂ. ಸ್ವಂತ ಬಂಡವಾಳ ಸಾಲ ವಿತರಿಸಿದೆ. ಜೊತೆಗೆ ಜಾಮೀನು ಸಾಲ, ವಾಹನ ಸಾಲ, ಸ್ವಸಹಾಯ ಸಂಘಗಳ ಸಾಲವನ್ನು ವಿತರಿಸಲಾಗಿದೆ.

ಸಂಘದ ಸದಸ್ಯರಿಗೆ ಗೊಬ್ಬರ ವಿತರಣೆ, ಪಡಿತರ ವಿತರಣೆ, ಹಿಟ್ಟಿನ ಗಿರಣಿ ಸೇವೆ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಊರುಬಗೆಯಲ್ಲಿ ಸಂಘದ ಗೋದಾಮು ನಿರ್ಮಾಣ ಮಾಡಿದ್ದು, ಆ ಭಾಗದ ರೈತರಿಗೆ ಇದರಿಂದ ಅನುಕೂಲ ಆಗಿದೆ ಎಂದರು.
ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಮತ್ತು ಸಂಘದಲ್ಲಿ ನಿರಂತರ ವ್ಯವಹಾರಗಳನ್ನು ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಾಯಕವಾಗುತ್ತದೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಕೃಷಿಕರಿಗೆ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದರು.

ಮಹಾಸಭೆಯಲ್ಲಿ 2022-23ನೇ ಸಾಲಿನ ಜಮಾ ಖರ್ಚು ವಿವರ ಮಂಡಿಸಲಾಯಿತು ಮತ್ತು ಮುಂದಿನ ಸಾಲಿಗೆ ಗುರಿ ನಿಗದಿ ಮಾಡಿ ಸಭೆಯ ಅನುಮೋದನೆ ಪಡೆಯಲಾಯಿತು.

ಇದೇ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಸಾಧನೆ ತೋರಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಗೌಡಹಳ್ಳಿ ಶಂಕರಮೂರ್ತಿ ನಳಿನಿ ಯವರ ಪುತ್ರ ಜಿ.ಎಸ್. ಅನ್ವಯ್, ಕುಂಬರಡಿ ಶಿವಕುಮಾರ್ ಅವರ ಪುತ್ರಿ ಕೆ.ಎಸ್. ಸುಚಿತ, ಕುಂಬರಡಿ ಸಂದೀಪ್ ಅವರ ಪುತ್ರಿ ಆದ್ಯ ಎಸ್. ಗೌಡ ಇವರನ್ನು ಸನ್ಮಾನಿಸಲಾಯಿತು.

ಚಿಕ್ಕಮಗಳೂರು ಜಿಲ್ಲೆಗೆ ನೂತನವಾಗಿ ಅಸಿಸ್ಟೆಂಟ್ ರಿಜಿಸ್ಟಾçರ್ ಆಗಿ ಆಗಮಿಸಿರುವ ರಾಮನಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಜಿ. ವೆಂಕಟೇಶ್, ನಿರ್ದೇಶಕರಾದ ಬಿ.ಪಿ. ಕೃಷ್ಣೇಗೌಡ, ಎಂ.ಎಸ್. ಸಂತೋಷ್, ಕೆ.ಬಿ. ಚಂದ್ರೇಗೌಡ, ಬಿ.ಬಿ. ವಿನೇಶ್, ಶ್ರೀಮತಿ ಜಯಮ್ಮ, ಶ್ರೀಮತಿ ಸುಮಾ ರವಿ, ಅರುಣ್ ಕುಮಾರ್, ಲಿಂಗಪ್ಪ, ರಮೇಶ್, ಸಹಕಾರಿ ಸಂಘಗಳ ಮೇಲ್ವಿಚಾರಕಾದ ಎಸ್.ಜೆ. ನಿತಿನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಆರ್. ರವೀಂದ್ರ, ಸಂಘದ ಮಾಜಿ ನಿರ್ದೇಶಕರುಗಳು, ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ