October 5, 2024

ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯು ಜೇಸಿ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.   ಗೋಣಿಬೀಡು ಕುಡಿಯುವ ನೀರಿನ ಟ್ಯಾಂಕ್ ಹಾಗೂ ಜಿ. ಹೊಸಹಳ್ಳಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಘು ಅವರ ಉಪಸ್ಥಿತಿಯಲ್ಲಿ ನೀರಿನ ಸದ್ಬಳಕೆ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಸ್ಟಿಕರ್ ಅಳವಡಿಸಲಾಗಿದೆ ಈ ಸಂದರ್ಭದಲ್ಲಿ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ   ಜಗತ್, ದರ್ಶನ್, ಸುಧೀರ್, ಶೈಲಿ ಅವರು ಉಪಸ್ಥಿತರಿದ್ದರು

ಅಂಗನವಾಡಿ ಕೇಂದ್ರ ಗೋಣಿಬೀಡು ಇವರಿಗೆ ಮಕ್ಕಳ ಅನುಕೂಲಕ್ಕಾಗಿ ಕುಡಿಯುವ ನೀರಿನ ಟ್ಯಾಂಕ್ 32 ಲೀಟರ್  ಶುದ್ಧ ಕುಡಿಯುವ ನೀರಿನ ಫಿಲ್ಟರ್ ಕೊಡುಗೆಯಾಗಿ ನೀಡಲಾಯಿತು.

ಗೋಣಿಬೀಡು  ಸಾರ್ವಜನಿಕರಿಗೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ಬಗ್ಗೆ ಆದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಲಾಯಿತು, ಹಾಗೇ ಹೊಯ್ಸಳ ಶಾಲೆಯಲ್ಲಿ ಪೊಲೀಸ್ ಉಪನಿರೀಕ್ಷಕಿ ಶೋಭಾ ಹಾಗೂ ಜೇಸಿ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ಜಗತ್, ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಕುಮಾರ, ಜೆ ಸಿ ಸದಸ್ಯರು ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಶಿಕ್ಷಕರು  ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕುರಿತು ಉಪನ್ಯಾಸ ನೀಡಲಾಗಿದೆ ಹಾಗೇ ಪೊಲೀಸ್ ಇಲಾಖೆ ಮುಂಭಾಗ ರಸ್ತೆ ಬದಿಯಲ್ಲಿ ಹಣ್ಣಿನ ಗಿಡಗಳು ಹಾಗೂ ನೆರಳಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ಸಂದೇಶ ನೀಡಿದರು

ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಯಶಸ್ವಿ ಚಂದ್ರಯಾನ ಜೇಸಿ ಸಪ್ತಾಹದ ನಾಲ್ಕನೇ ದಿನವಾದ ಮಂಗಳವಾರ ಜಿ. ಹೊಸಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ   “ಹಸಿವು ಮತ್ತು ಬಡತನ ಮುಕ್ತ ಸಮಾಜ,  ಆಹಾರವನ್ನು ಚೆಲ್ಲದೇ ಮತ್ತು ತಟ್ಟೆಯಲ್ಲಿ ಆಹಾರ ಬಿಡದೇ ಸ್ವಲ್ಪ ಗೊಳಿಸುವ ನಿಟ್ಟಿನಲ್ಲಿ ಆಹಾರ ಇಲ್ಲದ ನಿರ್ಗತಿಕರಿಗೆ ಅನುಕೂಲವಾಗುವಂತೆ” “Clean plate challenge” ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 85 ಮಕ್ಕಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ರವಿ  ಹಾಗೂ ಶಿಕ್ಷಕರು, ಜೆ ಸಿ ಅಧ್ಯಕ್ಷ ಜೆ ಸಿ ಚಂದ್ರಶೇಖರ, ಕಾರ್ಯದರ್ಶಿ ಜೆ ಸಿ ಜಗತ್, ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಕುಮಾರ, ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಂಗವಿಕಲರಾಗಿರುವ  ಶೀನಾ ಸುಂದರಿ, ಮುಮ್ತಾಜ್, ಜಯಲಕ್ಷ್ಮಿ, ಪ್ರಕಾಶ, ಸೀತಮ್ಮ  ಅವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ