October 5, 2024

ನಮ್ಮ ಹಿರಿಯರು ತಮ್ಮ ರೂಢಿಸಿಕೊಂಡು ಬಂದಿದ್ದ ಜನಪದ ಕಲೆ ಸಂಸ್ಕೃತಿಗಳು ಬದುಕಿಗೆ ದಾರಿದೀಪವಾಗಿದ್ದವು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಅವರು ಇತ್ತೀಚೆಗೆ ಮಾಧ್ಯಮ ಪ್ರತಿಷ್ಠಾನ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ ವತಿಯಿಂದ ಮೂಡಿಗೆರೆ ಸನ್ನಿಧಿ ಲೇಯೌಟ್ ನಲ್ಲಿ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ನವರ ಮನೆಯಂಗಳದಲ್ಲಿ ನಡೆದ ಮುತ್ತಿನಂತ ಮಾತು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.

ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ನಾವು ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿದ್ದ ಜನಪದ ಕಲೆ ಮತ್ತು ಜೀವನ ಕ್ರಮವನ್ನು ಬದಿಗೆ ಸರಿಸುತ್ತಿದ್ದೇವೆ. ನಮ್ಮ ಜನಪದ ಹಾಡುಗಳು, ಗಾದೆಮಾತುಗಳು, ಲಾವಣಿಗಳು, ವಚನಗಳು, ತತ್ವಪದಗಳು ಜೀವನ ಮೌಲ್ಯಗಳ ಗಣಿಗಳಾಗಿದ್ದು, ಬದುಕು ಹದತಪ್ಪದಂತೆ ನಮ್ಮನ್ನು ಎಚ್ಚರಿಕೆಯಿಂದ ಮುನ್ನಡೆಸುತ್ತಿದ್ದವು.   ಅತ್ಯಂತ ಸತ್ವಯುತವಾಗಿದ್ದ ನಮ್ಮ ಪರಂಪರೆಯ ಹೆಜ್ಜೆಗುರುತುಗಳನ್ನು ಮರೆಯದೇ ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಇಂದಿನ ಯುವಪೀಳಿಗೆಗೆ ಅದನ್ನು ಪ್ರಚುರಪಡಿಸುವ ಕಾರ್ಯಗಳನ್ನು ಸಂಘಸಂಸ್ಥೆಗಳು ಮತ್ತು ಸರ್ಕಾರ ಮುತುವರ್ಜಿ ವಹಿಸಿ ಮಾಡಬೇಕು ಎಂದರು.

ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದೆಯೆಲ್ಲಾ ಗ್ರಾಮೀಣ ಭಾಗದಲ್ಲಿ ಮನೆಯಂಗಳದಲ್ಲಿ,ಬೆಳದಿಂಗಳಿನ ತಂಪಾದ ವಾತಾವರಣದಲ್ಲಿ ನಮ್ಮ ಗ್ರಾಮೀಣ ಕಲೆಗಳ ಪ್ರದರ್ಶನ ನಡೆಯುತ್ತಿತ್ತು. ಇಂದಿಗೂ ಸಹ ಇಂತಹ ಕಾರ್ಯಕ್ರಮಗಳನ್ನು ಕೆಲವು ಸಂಘಸಂಸ್ಥೆಗಳು ಮುಂದವರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಕಲ್ಲುಗುಡ್ಡ ಶಾಲೆಯ ಕಲ್ಲುಗುಡ್ಡ ಸರ್ಕಾರಿ ಶಾಲೆ ಶಿಕ್ಷಕ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಯುರೇಕಾ ಅಕಾಡೆಮಿ ಸಂಸ್ಥಾಪಕರಾದ ದೀಪಕ್ ದೊಡ್ಡಯ್ಯ, ಮಾಧ್ಯಮ ಪ್ರತಿಷ್ಠಾನದ ಪ್ರಭುಲಿಂಗಶಾಸ್ತ್ರಿ, ಪ.ಪಂ. ಸದಸ್ಯೆ ಆಶಾ ಮೋಹನ್ , ಕಾಫಿ ಬೆಳೆಗಾರ ಕೋಳೂರು ಸಂದೀಪ್ ಗೌಡ, ಗಣೇಶ್ ಮಗ್ಗಲಮಕ್ಕಿ, ಸುಂದರೇಶ್ ಕೊಣಗೇರಿ ಮುಂತಾದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ