October 5, 2024

ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುವ ಮೂಲಕ ಗ್ರಾಹಕರ ರಿವಾರ್ಡ್ ಪಾಯಿಂಟ್ಸ್ ಗೆ ಕನ್ನ ಹಾಕಿ ಸುಮಾರು 4.16 ಕೋಟಿ ಮೌಲ್ಯದ ವಸ್ತುಗಳನ್ನು ತನ್ನದಾಗಿಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರಿನ ಬೊಮ್ಮಲೂರು ಲಕ್ಷ್ಮೀಪತಿ ಬಂಧಿತ ಆರೋಪಿ. ಈತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ (ಐಐಐಟಿ) ಪದವಿ ಪಡೆದುಕೊಂಡಿದ್ದ. ಕೆಲ ಸಮಯ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಮರಳಿ ಭಾರತಕ್ಕೆ ಬಂದಿದ್ದ. ತನ್ನ ಜ್ಞಾನವನ್ನು ವಾವಮಾರ್ಗಕ್ಕೆ ಬಳಸಿ ಕಂಪನಿಗಳ ಮತ್ತು ಬ್ಯಾಂಕುಗಳ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ಕುಳಿತಲ್ಲಿಯೇ ಕೋಟಿಗಟ್ಟಲೇ ಹಣ ಗಳಿಸುತ್ತಿದ್ದ.

‘ಆರೋಪಿಯಿಂದ ರೂ 3.40 ಕೋಟಿ ಮೊತ್ತದ 5 ಕೆ.ಜಿ.ಚಿನ್ನಾಭರಣ, ರೂ 21.80 ಲಕ್ಷದ 27 ಕೆ.ಜಿ. ಬೆಳ್ಳಿ ಸಾಮಾಗ್ರಿ, ರೂ. 11.13 ಲಕ್ಷ ನಗದು, ವಿವಿಧ ಕಂಪನಿಗಳ ಏಳು ಬೈಕುಗಳು, ಫ್ಲಿಫ್ ಕಾರ್ಟ್ ವ್ಯಾಲೆಟ್ ನಲ್ಲಿದ್ದ ರೂ. 26ಲಕ್ಷ, ಅಮೆಜಾನ್ ವ್ಯಾಲೆಟ್ ನಿಂದ ರೂ.3.50 ಲಕ್ಷ ಎರಡು ಲ್ಯಾಪ್ ಟಾಪ್, 3 ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ.

ಇವುಗಳೆಲ್ಲದರ ಒಟ್ಟು ಮೌಲ್ಯ ರೂ.4.16 ಕೋಟಿಯಷ್ಟಿದೆ.’ ಎಂದು  ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದ ‘ರಿವಾರ್ಡ್ 360′ ಕಂಪನಿಗೆ ಸೇರಿದ ವೋಚರ್ ಗಳನ್ನು ಗ್ರಾಹಕರು ಬಳಕೆ ಮಾಡುವುದಕ್ಕೆ ಮೊದಲು ಕಂಪನಿ ವೆಬ್ಸೈಟ್ ಹ್ಯಾಕ್ ಮಾಡಿ ಬೇರೆ ಯಾರೋ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಗ್ರಾಹಕರಿಗೆ ಮೋಸ ಎಸಗುತ್ತಿರುವ ಆರೋಪಿಯನ್ನು ಬಂಧಿಸುವಂತೆ ಕಂಪನಿಯ ನಿರ್ದೇಶಕರು ಜೂನ್ 24 ರಂದು ಸೈಬರ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಗೆ ಈಗ ಕೇವಲ 23 ವರ್ಷ. ಈತ ತಂತ್ರಜ್ಞಾನ ಬಳಕೆಯಲ್ಲಿ ನೈಪುಣ್ಯತೆ ಪಡೆದುಕೊಂಡಿದ್ದ. ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುವುದನ್ನು ಕಲಿತಿದ್ದ’ ಎಂದು ಕಮಿಷನರ್ ಮಾಹಿತಿ ನೀಡಿದರು.

‘ರಿವಾರ್ಡ್ 360 ಕಂಪನಿಯ ವೆಬ್ಸೈಟ್ ಅನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದ ಆರೋಪಿ ಬಳಿಕ  ಆ ರಿವಾರ್ಡ್ ಪಾಯಿಂಟ್ಸ್ ಅನ್ನು ತಾನೇ ಬಳಸಿಕೊಂಡಿದ್ದು. ಇ-ಕಾಮರ್ಸ್ ಕಂಪನಿಗಳ ಮೂಲಕ ಚಿನ್ನ, ಬೆಳ್ಳಿ ಸಾಮಾಗ್ರಿ, ಬೈಕ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿದ್ದ,

‘ಆರೋಪಿಯು ರಿವಾರ್ಡ್ 360 ವೆಬ್ಸೈಟ್ ಜೊತೆಗೆ ವಿವಿಧ ಬ್ಯಾಂಕ್ ಹಾಗೂ ವಿವಿಧ ಕಂಪನಿಗಳ ಗ್ರಾಹಕರಿಗೆ ತಲುಪಬೇಕಿದ್ದ ರಿವಾರ್ಡ್ ಪಾಯಿಂಟ್ಸ್ ಅನ್ನು ತಾನೇ ಬಳಕೆ ಮಾಡಿಕೊಳ್ಳುತ್ತಿದ್ದ. ಆ ಕಂಪನಿಯವರು ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ