October 5, 2024

ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಪ್ರವರ ಥಿಯೇಟರ್ ತಂಡದ ಕಲಾವಿದರು ಪ್ರದರ್ಶಿಸಿದ ಅಣ್ಣನ ನೆನಪು ನಾಟಕವು ಜನಮನಸೂರೆಗೊಂಡಿತು. ಭಾನುವಾರ ಸಂಜೆ ಕುವೆಂಪು ಕಲಾಮಂದಿರ ಜನರಿಂದ ತುಂಬಿತುಳಿಕಿತ್ತು. ಅಣ್ಣನ ನೆನಪು ನಾಟಕವನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿ ನೆರೆದಿದ್ದ ಪ್ರಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ನಾಟಕದ ಮೂಲಕ ಕುವೆಂಪು ಮತ್ತು ತೇಜಸ್ವಿಯವರ ಬದುಕಿನ ಪುಟಗಳನ್ನು ರಂಗವೇದಿಕೆಯಲ್ಲಿ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿಯವರ ಒಡನಾಡಿ ಮತ್ತು ಲೇಖಕ ಪ್ರದೀಪ್ ಕೆಂಜಿಗೆ ಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ; ಪೂರ್ಣಚಂದ್ರ  ತೇಜಸ್ವಿ ಅವರು ಕುವೆಂಪು ಅವರ ಬಗ್ಗೆ ಬರೆದ ಅಣ್ಣನ ನೆನಪು ಕೃತಿ ಒಂದರ್ಥದಲ್ಲಿ ತೇಜಸ್ವಿ ಅವರ ಆತ್ಮ ಚರಿತ್ರೆಯ ಪುಟಗಳು ಕೂಡ ಆಗಿದ್ದು ಈ ಕೃತಿಯಲ್ಲಿ ಅವರ ಬದುಕಿನ ಪುಟಗಳು ತೆರೆದುಕೊಳ್ಳುತ್ತದೆ ಎಂದು  ಹೇಳಿದರು. ಕವಿಯಾಗಿ, ದಾರ್ಶನಿಕನಾಗಿ, ಕಾದಂಬರಿಕಾರನಾಗಿ, ಗುರುವಾಗಿ ಕುವೆಂಪು ಅವರನ್ನು ಅನೇಕರು ಕಂಡಿದ್ದಾರೆ. ತೇಜಸ್ವಿ ಅವರು ಅಣ್ಣನ ನೆನಪು ಕೃತಿಯ್ಲಲ್ಲಿ ಕುವೆಂಪು ಅವರ ಬದುಕಿನ ವಿವರಗಳನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ತೇಜಸ್ವಿ ಅವರು ಬದುಕಿದ್ದಾಗ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರಲಿಲ್ಲ. ಈಗ ತೇಜಸ್ವಿ ಅವರ ಹುಟ್ಟುಹಬ್ಬವನ್ನು ಯುವ ಪೀಳಿಗೆ ಸೇರಿದಂತೆ ಅನೇಕರು ವಿಶೇಷವಾಗಿ ಆಚರಿಸುತ್ತಿದ್ದಾರೆ. ನಾಟಕ, ಪರಿಸರ ಜಾಗೃತಿ ಮುಂತಾದ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ನಡೆಯುತ್ತಿವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ. ಸಿ ರಮೇಶ್ ಮಾತನಾಡಿ, ತೇಜಸ್ವಿ ಅವರ ಅಣ್ಣನ ನೆನಪು ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿರುವುದು ಶ್ಲಾಘನೀಯ. ತೇಜಸ್ವಿ ಪ್ರತಿಷ್ಠಾನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ತೇಜಸ್ವಿ ಒಡನಾಡಿಗಳು ಹಾಗೂ ಪುಸ್ತಕ ಪ್ರಕಾಶನದ ಮುಖ್ಯಸ್ಥರಾದ ರಾಘವೇಂದ್ರ, ಬರಹಗಾರರಾದ ರವೀಶ್ ಕ್ಯಾತನಬೀಡು ಮಾತನಾಡಿದರು.
ಈ ಸಂದರ್ಭದಲ್ಲಿ ಅಣ್ಣನ ನೆನಪು ನಾಟಕದ ನಿರ್ದೇಶಕರಾದ ಹನು ರಾಮಸಂಜೀವ, ಪ್ರವರ ಥಿಯೇಟರ್ ತಂಡದ ಸದಸ್ಯರಾದ ಅಶ್ವಿನಿ ಅಕ್ಷಯ್, ಲೇಖಕ ಪೂರ್ಣೇಶ್ ಮತ್ತಾವರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕ ಪ್ರಜ್ವಲ್, ಸಿಬ್ಬಂದಿ ಸತೀಶ್ ತರುವೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನವದೀಪ್, ಶಾಮಿಲಿ, ಪೂರ್ಣೆಶ್, ಮಲ್ಲಿಕ್, ಮೋಹನ್ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ