October 5, 2024

ಮೂಡಿಗೆರೆ ಮತ್ತು ಸಕಲೇಶಪುರ ತಾಲ್ಲೂಕುಗಳ ಗಡಿಭಾಗದಲ್ಲಿರುವ ಹುರುಡಿ ಮತ್ತು ಕಿರುಗುಂದ ಗ್ರಾಮಗಳಲ್ಲಿ  ಕೀಟಲೋಕದ ವಿಸ್ಮಯವೊಂದು ಅನಾವರಣಗೊಂಡಿದೆ. ಈ ಗ್ರಾಮದ ಎರಡು ಮರಗಳು ಈಗ ಜನಾಕರ್ಷಣೆಯ ಕೇಂದ್ರಗಳಾಗಿವೆ.

ಹುರುಡಿ ಗ್ರಾಮದ ಪ್ರೌಢಶಾಲೆಯ ಎದುರು ಇರುವ ಮರವೊಂದಕ್ಕೆ ಸಂಪೂರ್ಣ ಜೇಡರ ಬಲೆ ಆವರಿಸಿಕೊಂಡಿದೆ. ಸರ್ವೇ ಸಾಧಾರಣವಾಗಿ ಜೇಡರ ಬಲೆಗಳು ಮರಗಳಲ್ಲಿ ಕಂಡು ಬರುತ್ತವೆ. ಆದರೆ ಈ ಮರಗಳು ಸಂಪೂರ್ಣ ಜೇಡರಬಲೆಯಿಂದ ಆವರಿಸಿಕೊಂಡಿದ್ದು, ವಿಸ್ಮಯಕಾರಿಯಾಗಿ ತೋರುತ್ತಿವೆ. ಸಂಪೂರ್ಣ ಮರದ ಕೊಂಬೆಗಳು ಮತ್ತು ಎಲೆಗಳನ್ನು ಸೇರಿಸಿ ಸಂಕೀರ್ಣವಾದ ಬಲೆಯನ್ನು ಜೇಡರ ಹುಳುಗಳು ಹೆಳೆದಿವೆ. ಬಹುಶಃ ಈ ಬಲೆಯೊಳಗೆ ಸಿಲುಕಿದರೆ ಸಾಧಾರಣಾ ಗಾತ್ರದ ಪ್ರಾಣಿಗಳು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೇನೋ ಅಷ್ಟರಮಟ್ಟಿಗೆ ಇದು ದಟ್ಟವಾಗಿದೆ. ಇನ್ನು ಹಕ್ಕಿಗಳು, ಕೀಟಗಳು ಅಪ್ಪಿತಪ್ಪಿಯೂ ಇಲ್ಲಿ ಸಿಕ್ಕಿಹಾಕಿಕೊಂಡರೆ ಅವುಗಳ ಕತೆ ಮುಗಿದಂತೆಯೇ.

ಕಿರುಗುಂದ ಗ್ರಾಮದಿಂದ ಕಜ್ಜಳ್ಳಿಗೆ ಹೋಗುವ ರಸ್ತೆಯ ಬದಿಯಲ್ಲಿಯೂ ಇಂತಹುದೇ ದೃಶ್ಯ ಕಂಡು ಬರುತ್ತದೆ. ಈ ಮರದ ಅದ್ಭುತ ದೃಶ್ಯಗಳನ್ನು ಕಣಚೂರು ಗ್ರಾಮದ ನಯನ ಅವರು ತಮ್ಮ ಕ್ಯಾಮರದಲ್ಲಿ ಸೆರೆಹಿಡಿದು ಕಳುಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ