October 5, 2024

ಶ್ರೀ ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಸಂಬಂಧಪಟ್ಟಂತೆ ನ್ಯಾಯಕ್ಕಾಗಿ ಹೋರಾಟದಲ್ಲಿ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಪಾಪಿಗಳನ್ನು ಪತ್ತೆಹಚ್ಚಿ ಅವರನ್ನು ಗಲ್ಲಿಗೇರಿಸುವ ಕೆಲಸವನ್ನು ಮಾಡಬೇಕು. ಇದೊಂದು ಘೋರ ಕೃತ್ಯವಾಗಿದ್ದು ಇದನ್ನು ಇಡೀ ಸಮಾಜ ಒಕ್ಕೊರಲಿನಿಂದ ಖಂಡಿಸಿದೆ. ಆದರೆ ಕೆಲವರು ಸೌಜನ್ಯಳ ಹೆಸರನ್ನು ಮುಂದೆ ಇಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ವೀರೇಂದ್ರ ಹೆಗ್ಗಡೆ ಕುಟುಂಬವನ್ನು ತೇಜೋವದೆ ಮಾಡುತ್ತಿರುವುದು ಕಂಡುಬರುತ್ತಿದೆ. ಸಮಾಜದಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಾ ಲಕ್ಷಾಂತರ ಜನರ ಬದುಕಿಗೆ ಬೆಳಕನ್ನು ನೀಡುತ್ತಿರುವ ಶ್ರೀ ಕ್ಷೇತ್ರದ ಹಿರಿಮೆಗೆ ಕೆಟ್ಟ ಹೆಸರು ತರಬೇಕು ಎಂಬ ಹುನ್ನಾರದ ಭಾಗವಾಗಿ ಈಗ ನಡೆಯುತ್ತಿರುವ ಬೆಳವಣಿಗೆಗಳಾಗಿವೆ ಎಂದು ರಾಜ್ಯ ವಂದೇ ಮಾತರಂ ಸಂಘದ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಸೌಜನ್ಯ ಕೊಲೆ ಆರೋಪಿಗಳು ಇಂತವರೇ ಎಂದು ನೇರವಾಗಿ ಆರೋಪ ಮಾಡುತ್ತಿರುವ ವ್ಯಕ್ತಿಗಳು ಅದಕ್ಕೆ ತಕ್ಕ ಸಾಕ್ಷಿಗಳನ್ನು ತನಿಖಾ ಸಂಸ್ಥೆಗಳ ಮುಂದೆ ಏಕೆ ಮಂಡಿಸುತ್ತಿಲ್ಲ. ಕೇವಲ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ನಡೆದ ತನಿಖೆಗಳಲ್ಲಿ ಅವರು ತಮ್ಮಲ್ಲಿರುವ ಸಾಕ್ಷಿಗಳನ್ನು ನೀಡಿ ಇಂತವರೇ ಕೃತ್ಯ ಎಸಗಿದ್ದಾರೆ ಎಂದು ಯಾಕೆ ಹೇಳಿಲ್ಲ. ಸಿಬಿಐ ನ್ಯಾಯಾಲಯದ ತೀರ್ಪು ಬಂದ ಮೇಲೆ ಏಕೆ ಹಾದಿಬೀದಿಯಲ್ಲಿ ಹೆಸರು ಹೇಳಿಕೊಂಡು ತಿರುಗುತ್ತಿದ್ದಾರೆ.

ಇದು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಕೃತ್ಯವಾಗಿದೆ. ವೀರೇಂದ್ರ ಹೆಗ್ಗಡೆಯವರ ಕಾರ್ಯಗಳು ಇಂದು ವಿಶ್ವಮಾನ್ಯವಾಗಿವೆ. ಅವರ ಮೇಲೆ ಇಂತಹ ಆರೋಪಗಳನ್ನು ಮಾಡುವವರು ತಮ್ಮ ಮನಸ್ಥಿತಿಯ ಬಗ್ಗೆ ಪರಾಮರ್ಷೆ ಮಾಡಿಕೊಳ್ಳಬೇಕು.

ಹೋರಾಟಗಾರರು ಸೌಜನ್ಯ ಕುಟುಂಬವು ಕಾನೂನು ಹೋರಾಟದಿಂದ ಹೆಚ್ಚಿನ ನ್ಯಾಯವನ್ನು ಕೇಳುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ಅವರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸ್ವತಃ ವೀರೇಂದ್ರ ಹೆಗ್ಗಡೆಯವರೇ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೌಜನ್ಯ ಹಂತಕರನ್ನು ಸೆರೆಹಿಡಿಯಬೇಕಾಗಿದೆ.

ಕೆಲವರು ಜನರನ್ನು ದಾರಿತಪ್ಪಿಸಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇಂಥವರಿಗೆ ನಾವು ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ. ಅಥವಾ ಈ ಕೂಡಲೇ ಅವರು ಹೆಚ್ಚಿನ ನ್ಯಾಯಾಲಯಕ್ಕೆ ಮನವಿಯನ್ನ ನೀಡಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕೆ ಹೊರತು ಹಾದಿ ಬೀದಿಯಲ್ಲಿ ಶ್ರೀ ಕ್ಷೇತ್ರವನ್ನು ಮತ್ತು ಶ್ರೀ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ನಿಂದಿಸುವುದರಿಂದ ನ್ಯಾಯ ಸಿಗುವುದಿಲ್ಲ. ಇದು ಸಮಾಜವನ್ನು ಅಶಾಂತಿಗೆ ದೂಡುವಂತ ಬೆಳವಣಿಗೆ ಆಗಿದೆ.

ಈ ನಕಲಿ ಹೋರಾಟಗಾರರಿಗೆ ಎಚ್ಚರಿಕೆಯನ್ನು ಕೊಡುತ್ತಾ ಈ ಕೂಡಲೇ ಇಂಥ ಸುಳ್ಳು ಆರೋಪಗಳನ್ನು ನಿಲ್ಲಿಸಿ ನ್ಯಾಯಾಲಯಕ್ಕೆ ನ್ಯಾಯ ಕೊಡಿಸಲು ಮರೆ ಹೋಗಬೇಕಾಗಿ ಕೇಳುತ್ತಾ. ಒಂದು ವೇಳೆ ಇದೇ ರೀತಿಯ ನೀಚ ಪ್ರವೃತ್ತಿ ಮುಂದೆವರೆದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಪ್ರಶಾಂತ್ ಎಚ್ಚರಿಸಿದ್ದಾರೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ