October 5, 2024

ರಕ್ತ ದಾನ ಶ್ರೇಷ್ಠ ದಾನ. ರಕ್ತ ದಾನ ಮಾಡಿ ಇನ್ನೊಂದು ಜೀವ ಉಳಿಸಿದರೆ ಪುಣ್ಯದ ಫಲ ಸಿಗುತ್ತದೆ ಎಂದು ಗೋಣಿಬೀಡು ಜೇಸಿಐ ಹೊಯ್ಸಳ ಅಧ್ಯಕ್ಷ ಚಂದ್ರಶೇಖರ ಜೆ. ಸಿ. ಹೇಳಿದರು.

ಅವರು ಶನಿವಾರ ಕಿರುಗುಂದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಆವರಣ ದಲ್ಲಿ ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ “ಯಶಸ್ವಿ ಚಂದ್ರಯಾನ ಜೇಸಿ ಸಪ್ತಾಹ -2023ದ ರಕ್ತ ದಾನ ಶಿಬಿರ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷಣಿ ಸ್ವಾತಿ ರಾಘವೇಂದ್ರ ಮುಖ್ಯ ಅತಿಥಿ ಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವ್ಯಕ್ತಿ ಯ ಅರೋಗ್ಯ ಕಾಪಾಡುವುದಕ್ಕೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದೆ. ಅದು ಕೃತಕ ಉತ್ಪಾದನೆ ಸಾಧ್ಯವಿಲ್ಲದ ಕಾರಣಕ್ಕೆ ರಕ್ತ ದಾನಿಗಳಿಂದಲೇ ಸಂಗ್ರಹಿಸಬೇಕು ಇದಕ್ಕಾಗಿ ರಕ್ತ ದಾನ ಮಾಡುವುದಕ್ಕೆ ಮುಂದಾಗಬೇಕು ಎಂದರು.

ಜೀವ ಸಂಜೀವನಿ ರಕ್ತ ನಿಧಿ ಮುಖ್ಯಸ್ಥ ಮೋಹನ್ ಮಾತನಾಡುತ್ತಾ ಜೇಸಿ ಸಂಸ್ಥೆ ಗಳು ಈ ರೀತಿಯ ಮಾನವೀಯ ಮೌಲ್ಯ ವುಳ್ಳ ಕಾರ್ಯಕ್ರಮ ಗಳನ್ನು ಮಾಡಿ ಸಾರ್ವಜನಿಕರಿಗೆ ಮತ್ತು ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಿದಾಗ ನಮ್ಮ ನಿಮ್ಮ ಜನ್ಮ ಸಾರ್ಥಕ ವಾಗುತ್ತದೆ ಎಂದರು.

ವಲಯ ನಿರ್ದೇಶಕ ಹಾಗೂ ನಿಕಟಪೂರ್ವ ಅಧ್ಯಕ್ಷ ಯೋಗೇಶ್ ಕುಮಾರ್. ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ದಿನೇಶ್.. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಯತೀಶ್. ಪೂರ್ವಧ್ಯಕ್ಷ ರಾದ ಬಿ ಕೆ ಚಂದ್ರಶೇಖರ. ಎಂ ಗಣೇಶ್ ಗೌಡ. ಮುಖ್ಯ ಶಿಕ್ಷಕಿ ಕಮಲ. ಆಸ್ಪತ್ರೆ ಯ. ಸಿ ಹೆಚ್ ಓ ಕುಮಾರಿ. ಮತ್ತು ಜೇಸಿ ಸದಸ್ಯರು ಹಾಗೂ ಗ್ರಾಮಸ್ಥರು. ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯದರ್ಶಿ ಜಗತ್ ವಂದಿಸಿದರು. ರಕ್ತ ದಾನಿ ಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು ಮತ್ತು ಬಿಪಿ., ಶುಗರ್ ತಪಾಸಣೆ ಮಾಡಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ