October 5, 2024

ಜಗತ್ತಿನಲ್ಲಿ ಗುರುವಿನ ಸ್ಥಾನ ಎಲ್ಲಕ್ಕಿಂತ ಹಿರಿದಾದುದು ಮತ್ತು ಉನ್ನತವಾದುದು ಎಂದು ಲೇಖಕಿ, ಶಿಕ್ಷಕಿ ಶ್ರೀಮತಿ ರೇಖಾ ನಾಗರಾಜರಾವ್ ಹೇಳಿದರು.

ಅವರು ಮಂಗಳವಾರ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಎಷ್ಟೇ ಉನ್ನತ ಹುದ್ದೆಗಳು, ಅತಿಹೆಚ್ಚು ಸಂಬಳ ನೀಡುವ ವೃತ್ತಿಗಳಿದ್ದರೂ ಗುರು ಅಥವಾ ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಶ್ರೇಷ್ಠವಾಗಿದೆ. ಸಮಾಜದ ಮುಂದಿನ ಭವಿಷ್ಯವಾಗಿರುವ ಮುದ್ದು ಮಕ್ಕಳೊಂದಿಗೆ ನಿತ್ಯ ಬೆರೆಯುವ, ಅವರಲ್ಲಿ ಜ್ಞಾನವನ್ನು ತುಂಬುವ, ಮಕ್ಕಳಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಪ್ರೇರೇಪಿಸುವ ಕೆಲಸ ಶಿಕ್ಷಕರು ಮಾಡುತ್ತಾರೆ. ಇದು ಮನಸ್ಸಿಗೆ ಹೆಚ್ಚು ಖುಷಿ ನೀಡುವ ವೃತ್ತಿಯಾಗಿದೆ. ವೈಯುಕ್ತಿಕ ಬದುಕಿನಲ್ಲಿ ಎಷ್ಟೇ ಜಂಜಾಟಗಳಿದ್ದರೂ ಶಿಕ್ಷಕ ಅಥವಾ ಶಿಕ್ಷಕಿ ಶಾಲೆಗೆ ಬಂದಾಗ ಮಕ್ಕಳೊಂದಿಗೆ ಬೆರೆತು ಎಲ್ಲವನ್ನು ಮರೆತು ಬಿಡುತ್ತಾರೆ. ಶಿಕ್ಷಕರು ಜಗತ್ತಿನ ಭವಿಷ್ಯವನ್ನುರೂಪಿಸುವ ಶಿಲ್ಪಿಯಾಗಿದ್ದಾರೆ ಎಂದರು.

ಇಂದು ಶಿಕ್ಷಣದಲ್ಲಿ ಮಕ್ಕಳಿಗೆ ಅತಿಯಾದ ಮುದ್ದು ಹೆಜ್ಜಾಗಿದೆ. ಹಿಂದೆಯೆಲ್ಲಾ ಶಾಲೆಯಲ್ಲಿ ಮಕ್ಕಳು ತಪ್ಪುಮಾಡಿದಾಗ ಶಿಕ್ಷೆ ನೀಡಿ ತಿದ್ದಿ ತೀಡುವ ಅವಕಾಶವಿತ್ತು. ಹಾಗಾಗಿ ಅಪರಾಧ ಕೃತ್ಯಗಳು ಕಡಿಮೆಯಿದ್ದವು. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ತಪ್ಪುಮಾಡಿದಾಗ ಕನಿಷ್ಠ ಮಟ್ಟದ ಶಿಕ್ಷೆ ನೀಡಲು ಅವಕಾಶವಿಲ್ಲ. ಇದರಿಂದ ಮಕ್ಕಳ ತಪ್ಪುಗಳನ್ನೂ ತಿದ್ದುವುದರಲ್ಲಿ ಎಲ್ಲೋ ಒಂದು ಕಡೆ ಹಿನ್ನಡೆಯಾಗುತ್ತಿದೆ. ಇದರಿಂದ ಆ ಮಕ್ಕಳು ಮುಂದಿನ ಜೀವನದಲ್ಲಿ ತಪ್ಪುಗಳನ್ನು ಮರುಕಳಿಸಿ ಅಪರಾಧ ಕೃತ್ಯಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ; ಉತ್ತಮ ಸಂಸ್ಕೃತಿಯ ಶಿಕ್ಷಕರ ಸೇವೆಯಿಂದ ಸಮಾಜ ಸುಸಂಸ್ಕೃತದೆಡೆಗೆ ಸಾಗಲು ಸಹಕಾರಿಯಾಗಿದೆ. ಶಿಕ್ಷಕ ಮತ್ತು ವಿದ್ಯಾರ್ಥಿಯ ಸಂಬಂಧ ಜನ್ಮ ಕಳೆದರೂ ಮುಗಿಯಲಾರದು ಋಣಾನುಬಂಧವಾಗಿ ಮುಂದುವರಿಯಲಿದೆ. ದಾರಿಯಲ್ಲಿ ಬಿದ್ದಿರುವ ಕಲ್ಲನ್ನು ಕೆತ್ತನೆ ಮಾಡಿ ಅದನ್ನು ಸುಂದರವಾದ ಶಿಲೆಯನ್ನಾಗಿ ರೂಪಿಸುವಂತೆ ಏನು ಅರಿಯದ ಕಂದಮ್ಮಗಳನ್ನು ಶಾಲೆಗೆ ಸೇರಿಸಿದ ಬಳಿಕ ಅವರಿಗೆ ಅಕ್ಷರವನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ಮಾಡುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸೇವಾ ಅವಧಿಯಲ್ಲಿ ಸಾವಿರಾರು ಮಕ್ಕಳಿಗೆ ಗುಣಾತ್ಮಕವಾದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೆಗ್ಗಳಿಕೆಗೆ ಪ್ರತಿಯೊಬ್ಬ ಶಿಕ್ಷಕರು ಪಾತ್ರರಾಗುತ್ತಾರೆ. ಕರ್ತವ್ಯ ನಿಭಾಯಿಸುವಾಗ ಎದುರಾಗುವ ಅನೇಕ ಕಷ್ಟ ಕಾರ್ಪಣ್ಯಗಳನ್ನು ಗುರುವಿನ ಸ್ಥಾನದಲ್ಲಿ ನಿಂತು ವಿಶ್ವಾಸದಲ್ಲಿ ಬಗೆಹರಿಸಿ ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುವುದೆ ಅತ್ಯುತ್ತಮ ಶಿಕ್ಷಕರ ಜವಾಬ್ದಾರಿಯಾಗಿದೆ. ತಾನೆ ಪಾಠ ಕಲಿಸಿದ ಶಿಷ್ಯ ತನಗಿಂತ ಉನ್ನತ ಸ್ಥಾನಕ್ಕೇರಿದಾಗ ಕಲ್ಮಶವಿಲ್ಲದೆ ಆನಂದ ಪಡುವ ಶಿಕ್ಷಕರಿಂದಾಗಿ ಸಮಾಜದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆ, ಸಹಬಾಳ್ವೆಯ ಜೀವನ ಸಮಾಜದಲ್ಲಿ ಇನ್ನೂ ಮುಂದುವರಿದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಶಿಕ್ಷಕರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದರು. ಮೂಡಿಗೆರೆ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿವು ಗುರಿ ಹೊಂದಿದ್ದು, ಅದಕ್ಕೆ ಶಿಕ್ಷಕರ ಬೆಂಬಲ ಬೇಕೆಂದು ಕೋರಿದರು. ಮಲೆನಾಡು ಭಾಗದ ಶಿಕ್ಷಕರಿಗೆ ಹೆಚ್ಚುವರಿ ಭತ್ಯೆ ಬೇಡಿಕೆಯ ಬಗ್ಗೆ ಸರ್ಕಾರದ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳು, ನೌಕರರ ಸಂಘ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಅವರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ನಿರಂಜನಾ ಕಾರ್ಯಕ್ರಮ ನಿರೂಪಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ