October 5, 2024

ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರಾವಣ ಸಂಜೆ ಕಾರ್ಯಕ್ರಮವು ಶನಿವಾರ ಸಂಜೆ ಗೋಣಿಬೀಡು ಹೋಬಳಿ ಕ.ಸಾ.ಪ. ಅಧ್ಯಕ್ಷರಾದ ಚಕ್ಕುಡಿಗೆ ಶ್ರೀಮತಿ ಭಾಗ್ಯ ಲಕ್ಷ್ಮಣಗೌಡರ ಮನೆ ಅಂಗಳದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶಾಂತಕುಮಾರ್ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸುದೀರ್ಘ ಇತಿಹಾಸವಿದೆ. ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಕಟ್ಟಲಿಕ್ಕೆ, ಕಲೆ ಸಾಹಿತ್ಯವನ್ನು ಬೆಳೆಸಲಿಕ್ಕೆ ಈ ನಮ್ಮ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಆದರೆ ಇದರ ಬಳಕೆಯಾಗುತ್ತಿಲ್ಲವಲ್ಲ ಸಾಹಿತ್ಯವು ಹಳ್ಳಿಹಳ್ಳಿಗೆ  ತಲುಪುತ್ತಿಲ್ಲವಲ್ಲ, ಜನಸಾಮಾನ್ಯರಿಗೆ ತಲುಪುವ ಉದ್ದೇಶದಿಂದ ಹೊಸ ಒಂದು ಅಭಿಯಾನವಾಗಿ ಈ ಶ್ರಾವಣ ಸಂಜೆ ಮಾಡಬೇಕು ಎಂದು ತೀರ್ಮಾನಿಸಿ ಎಲ್ಲೆಡೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ.

ಶ್ರಾವಣ ಸಂಜೆ ಅಂದಾಕ್ಷಣ ಈ ತಿಂಗಳು ಸುಮಧುರವಾಗಿರೋ ತಂಪು ವಾತಾವರಣದಲ್ಲಿ ನಾವೆಲ್ಲ ಸೇರಲು ಒಂದು ಸುರ‍್ಣ ಅವಕಾಶ ಮಾಡಿಕೊಂಡು ಈ ಶ್ರಾವಣ ಸಂಜೆ ಮಾಡುತ್ತಿದ್ದೇವೆ. ನಮ್ಮ ಪರ‍್ವಿಕರು ಸುಮ್ಮನೆ ಇದನ್ನು ಮಾಡಿಲ್ಲ ಇದಕ್ಕೆ ಏನಾದರೂ ಒಂದು ವೈಜ್ಞಾನಿಕ ಕಾರಣಗಳಿವೆ ನಮ್ಮ ಹಳ್ಳಿಯ ರೈತರು ಕೆಲಸಗಳನ್ನು ಮಾಡಿಕೊಂಡು ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕಲ್ಲ, ಒಳ್ಳೆ ಸಮಾಜವನ್ನು ಸೃಷ್ಟಿ ಮಾಡಬೇಕಲ್ಲ, ಮನಸು ಮನಸುಗಳನ್ನು ಕೂಡ ಬೇಕಲ್ಲ ಆ ದೃಷ್ಟಿಯಲ್ಲಿ ಇ ತರದ ಹಬ್ಬಗಳು ಬರುತ್ತಾ ಇರುತ್ತವೆ ಎಂದರು.

ಪ್ರಸ್ತಾವಿಕ ಮಾತನಾಡಿದ ಕ.ಸಾ.ಪ. ಪದಾಧಿಕಾರಿ ಪ್ರಕಾಶ್ ಅವರು ನಮ್ಮ ಸುತ್ತಮುತ್ತಲಿನಲ್ಲಿರುವಂತಹ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಗೋಣಿಬೀಡು ಘಟಕವು ಸಾಕಷ್ಟು ಕೆಲಸಗಳನ್ನು ನರ‍್ವಹಿಸಿದೆ. ಹಾಗೇನೆ ಸಾಹಿತ್ಯ ಕೆಲವರಿಗೆ ಮಾತ್ರ ಸೀಮಿತವಾಗಬಾರದು ಅನ್ನುವ ದೃಷ್ಟಿಯಿಂದ ಸಾಹಿತ್ಯ ಸಮಾಜಮುಖಿಯಾಗಿ ಕೊಂಡೊಯ್ಯುವ ರೀತಿಯಲ್ಲಿ ಈ ಘಟಕವು ಶ್ರಾವಣ ಸಂಜೆ ಕಾರ್ಯಕ್ರಮವಿರಬಹುದು, ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಇಂತಹ ಹತ್ತು ಹಲವಾರು ಕಾರ್ಯಕ್ರಮವನ್ನು ಗೋಣಿಬೀಡು ಕನ್ನಡ ಸಾಹಿತ್ಯ ಪರಿಷತ್ ಘಟಕವು  ಏರ್ಡಿಪಡಿಸಿದೆ ಎಂದರು.

ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಬರಹಗರ‍್ತಿ ಕರ‍್ತಿ ಕಿರಣ್ ಶ್ರಾವಣ ಬಂತು ಅಂದರೆ ಮನಸ್ಸಿನಲ್ಲಿ ಏನೋ ಉಲ್ಲಾಸ. ಜಡಿ ಮಳೆ ಕಳೆದು  ಒಂದಿಷ್ಟು ಬಿಸಿಲು ಕಾಣುತ್ತೆ, ಮನೆ ಮುಂದೆ ಸ್ವಚ್ಛಗೊಳಿಸುತ್ತೇವೆ ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಶ್ರಾವಣ ಹಬ್ಬ ಸಾಲು ಸಾಲು ಹಬ್ಬಗಳಿಗೆ ಮುನ್ನುಡಿ, ಶ್ರಾವಣ ಸಂಜೆ ಎನ್ನುವ ಹೆಸರೇ ನನಗೆ ತುಂಬಾ ಖುಷಿಯಾಗಿದೆ. ಇಂತಹ ಒಂದು ತೋಟದ ಮನೆಯ ಮಧ್ಯದಲ್ಲಿ ಈ ಒಂದು ಕಾರ್ಯಕ್ರಮಕ್ಕೆ ಬಂದಿರುವುದೇ ನನಗೆ ನಿಜವಾದ ಖುಷಿ ಇಲ್ಲಿ ಪ್ರತಿಭೆಗಳಿದ್ದಾವೆ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸವನ್ನು ಗ್ರಾಮೀಣ ಭಾಗದಲ್ಲಿ ಮಾಡಬೇಕು ಎಂದರು.

ಗೋಣಿಬೀಡು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಭಾಗ್ಯ ಲಕ್ಷ್ಮಣ್ ಗೌಡರು ಮಾತನಾಡುತ್ತಾ  ಈ ಸಂಜೆ ಬಹುಶಃ ನನ್ನ ಜೀವನದ ನೆನಪಿನ ಕ್ಷಣ ಅಂದುಕೊಂಡಿದ್ದೇನೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕೀರ್ತಿ ಕಿರಣ್ ಬಹಳ ಚಿಕ್ಕ ವಯಸ್ಸಿನಲ್ಲಿ ಅಪಾರ, ವಿಭಿನ್ನ ಸಾಧನೆ ಮಾಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ. ನಮ್ಮೂರಿನಲ್ಲಿ ಹಾದುಹೋಗುವ ಹೇಮಾವತಿ ಮತ್ತು ಜಪಾವತಿ ಸಂಗಮದ ಈ ಊರು ಇಲ್ಲಿಗೆ ಚಿಕ್ಕಕೂಡಿಗೆ ಎಂದು ಹೆಸರು ಇದನ್ನು ಕ್ರಮೇಣವಾಗಿ ಚಕ್ಕೊಡಿಗೆ ಎಂದು ಕರೆಯಲ್ಪಡುತ್ತದೆ. ದೊಡ್ಡ ಕೂಡಿಗೆಯನ್ನು ಕೇಸೋಳ್ ಕೂಡಿಗೆ ಎಂದು ಕರೆಯುತ್ತಾರೆ. ಈ ಊರಿಗೊಂದು ಇತಿಹಾಸ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಅನಿತಾ ಜಗದೀಪ್ , ಕಸಾಪ ದ ಜಿಲ್ಲಾ ಸಂಚಾಲಕರು ಆದ ವಿಶಾಲ ನಾಗರಾಜ್, ಕಾಫಿ ನಾಡು ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷೆ ಶ್ರೀಮತಿ ಕಲಾವತಿ ರಾಜಣ್ಣ, ತಾಲೂಕು ಸಂಚಲಕರಾದ ಲಕ್ಷ್ಮಣಗೌಡ್ರು ಹೋಬಳಿ ಪದಾಧಿಕಾರಿಗಳಾದ ನಯನಗೌಡ, ಸುಂದರೇಶ್, ಪವಿತ್ರ ಹಳೆಕೋಟೆ,ಕಾರ್ಯದರ್ಶಿಗಳಾದ ಆನಂದ್, ಸುಪ್ರೀತ ನಯನ, ಪದಾಧಿಕಾರಿಗಳಾದ ತೀರ್ಥ ಮಹೇಶ್, ಸಿ.ಎಂ ಸರೋಜಾ, ಯತೀಶ್ ಹೆಗ್ಗರವಳ್ಳಿ, ಪ್ರಜ್ವಲ್ ಉಗ್ಗೆಹಳ್ಳಿ, ಸಿ.ಆರ್ ರವಿ, ಜನ್ನಾಪುರ ಜೆ ಸಿ ಅಧ್ಯಕ್ಷರಾದ ಭರತ್, ಗಿರೀಶ್ ಹಾಗೂ ಊರಿನ ಮುಖಂಡರಾದ ಯು.ಎನ್ ಚಂದ್ರೇಗೌಡ್ರು, ಎಚ್. ಡಿ ಶಿವರಾಂ, ಯು.ಕೆ ರಾಮೇಗೌಡ್ರು, ಸುಮಾ, ಯು. ಎಸ್. ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು.

ವರದಿ : ಸಿ.ಎಲ್. ಪೂರ್ಣೇಶ್, ಚಕ್ಕುಡಿಗೆ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ