October 5, 2024

ಇತ್ತೀಚೆಗೆ ತಾನೆ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ದ್ರುವದ ಮೇಲೆ ತನ್ನ ಬಾಹ್ಯಾಕಾಶ ನೌಕೆ ಇಳಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲಿ ತಲುಪುವ ಹಾದಿಯಲ್ಲಿ ಹೆಜ್ಜೆಯಿಟ್ಟಿದೆ.

ನಮ್ಮೆಲ್ಲರಿಗೆ ಬೆಳಕು ನೀಡುವ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆಂದು ಇಸ್ರೋ ತನ್ನ ಪ್ರಪ್ರಥಮ ಪ್ರಯತ್ನವಾಗಿ ಅಂತರಿಕ್ಷಾ ವೀಕ್ಷಣಾಲಯವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಂದು ಮುಂಜಾನೆ 11.50ಕ್ಕೆ ಸರಿಯಾಗಿ ಶ್ರೀಹರಿಕೋಟಾದಿಂದ ಮಿಷನ್ ಆದಿತ್ಯ ಎಲ್-1 ಅಂತರಿಕ್ಷಾ ವಿಕ್ಷಣಾಲಯವನ್ನು ಪಿ.ಎಸ್.ಎಲ್.ವಿ-ಸಿ57  ರಾಕೆಟ್ ಮೂಲಕ ಉಡಾವಣೆ ಮಾಡಿದೆ.

ಅಂತರಿಕ್ಷಾ ವೀಕ್ಷಣಾಲಯವನ್ನು ಹೊತ್ತ ರಾಕೆಟ್ ಯಶಸ್ವಿಯಾಗಿ ತನ್ನ ಗುರಿಯ ಕಡೆಗೆ ಚಿಮ್ಮಿ ಸಾಗುತ್ತಿದೆ.

ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿ ಲಗ್ರಾಂಜಿಯನ್ ಬಿಂದುವಿಗೆ ಸೇರಿದ ನಂತರ ಅಲ್ಲಿ ಅಂತರಿಕ್ಷಾ ವೀಕ್ಷಣಾಲಯವು ನೆಲೆನಿಂತು ಸೂರ್ಯನ ಬಗ್ಗೆ ವಿಶೇಷ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿರುವ ಸೂರ್ಯನ ಬಗ್ಗೆ ಭೂಮಿಯಿಂದ 15 ಲಕ್ಷ ಕಿ.ಮೀ. ನಷ್ಟು ದೂರಕ್ಕೆ ಹೋಗಿ ಅದು ಸೂರ್ಯನ ಅಂತರಾಳದ ಚಟುವಟಿಕೆಯನ್ನು ಇನ್ನಷ್ಟು ಸ್ಪಷ್ಟವಾಗಿ ಅಧ್ಯಯನ ಮಾಡಲಿದೆ.

ಸತತ 125 ದಿನಗಳ ಪಯಾಣದ ನಂತರ ಇದು ತನ್ನ ನಿಗದಿತ ಸ್ಥಳವನ್ನು ತಲುಪಲಿದೆ. ಸುಮಾರು 5 ವರ್ಷಗಳ ಕಾಲ ಇದು ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ. ಈ ಯೋಜನೆಯ ಒಟ್ಟು ವೆಚ್ಚ 400 ಕೋಟಿ ಎನ್ನಲಾಗಿದೆ.

ಇಂತಹ ಸಾಹಸಕ್ಕೆ ಮುಂದಾಗಿರುವ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಹಿಂದೆ ಜಪಾನ್, ಅಮೇರಿಕಾ ಮತ್ತು ಯುರೋಪಿಯನ್ ಒಕ್ಕೂಟ ಮಾತ್ರ.

ಇತ್ತೀಚಿನ ದಿನಗಳಲ್ಲಿ ಇಸ್ರೋ ವಿಶ್ವದ ಇತರೆಲ್ಲಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿಗಿಂತ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ