October 5, 2024

ರಾಜ್ಯದಲ್ಲಿ ಹೊಸ ಪಡಿತರ ಚೀಟಿ ನೀಡಲು ಅರ್ಜಿ ಆಹ್ವಾನಿಸಬೇಕು ಎಂದು ಮೂಡಿಗೆರೆ ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಬಿ.ಎಂ. ಮಂಜುನಾಥ್ ಬೆಟ್ಟಗೆರೆ ಆಗ್ರಹಿಸಿದ್ದಾರೆ.

ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ; ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವು ಆಡಳಿತಕ್ಕೆ ಬಂದಾಗಿನಿAದಲೂ ಪಂಚಭಾಗ್ಯಗಳನ್ನು ಬಿಡುಗಡೆಗೊಳಿಸುವುದಲ್ಲಿ ಮಗ್ನವಾಗಿದ್ದು ಇದರಿಂದ ಮಹಿಳಾ ಸಬಲೀಕರಣ ಸೇರಿದಂತೆ ಆರ್ಥಿಕ ಚಟುವಟಿಕೆಗಳು ಅಭಿವೃದ್ದಿಗೊಂಡಿದ್ದು ದೇಶದಲ್ಲಿ ಕರ್ನಾಟಕ ಮಾದರಿ ಎಂಬ ಹೆಸರು ಹೆಚ್ಚು ಪ್ರಚಲಿತವಾಗುತ್ತಿದ್ದು ಇದಕ್ಕೆ ಸಮಿತಿಯು ಶ್ಲಾಘಿಸುತ್ತದೆ, ಆದರೆ ಇದೇ ಸಮಯದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಹೊಸದಾಗಿ ಪಡಿತರ ಚೀಟಿಯನ್ನು ಸಹ ನೀಡಬೇಕಾಗಿದ್ದು ಹಲವಾರು ಕುಟುಂಬಗಳಲ್ಲಿ ಹೊಸದಾಗಿ ಅಂತ್ಯೋದಯ/ಬಿಪಿಎಲ್/ಎಪಿಎಲ್ ಸೇರಿದಂತೆ ಎಲ್ಲಾ ಬಗೆಯ ಪಡಿತರ ಚೀಟಿಗಳನ್ನು ಮಾಡಿಸಲು ಬಹಳ ದಿನಗಳಿಂದಲೂ ಪ್ರಯತ್ನಿಸುತ್ತಿದ್ದರೂ ಸಹ ಸರ್ಕಾರವು ಕೇವಲ ಪಡಿತರ ಚೀಟಿಯಲ್ಲಿ ಸೇರ್ಪಡೆ ಮತ್ತು ಡಿಲೀಷನ್‌ಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು ಹೊಸ ಪಡಿತರ ಚೀಟಿಯನ್ನು ಮಾಡಿಸಲು ಅವಕಾಶವಿಲ್ಲದ್ದರಿಂದ ಈ ಅವಕಾಶದಿಂದ ವಂಚಿತರಾಗಿರುವ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳು ಬಹಳ ಕಷ್ಟಪಡುವಂತಾಗಿದ್ದು ಅವರುಗಳಿಗೆ ಸರ್ಕಾರದ ಯೋಜನೆಗಳು/ ಭಾಗ್ಯಗಳನ್ನು ಪಡೆಯಲು ಸಾದ್ಯವಿಲ್ಲವಾಗಿದೆ.

ಹೊಸದಾಗಿ ಪಡಿತರ ಚೀಟಿಯನ್ನು ಮಾಡಿಕೊಡಲು ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕು.  ಆರ್ಥಿಕವಾಗಿ ಹಿಂದುಳಿದವರ ಬದುಕಿನ ಅನುಕೂಲವಾಗುವಂತೆ ಶೈಕ್ಷಣಿಕ, ಆರೋಗ್ಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳಲ್ಲಿ ಅನುಕೂಲ ಪಡೆದುಕೊಳ್ಳಲು ಅನುವಾಗುವಂತೆ ಹೊಸ ಪಡಿತರ ಚೀಟಿಯನ್ನು ತುರ್ತಾಗಿ ನೀಡಲು ಕಾರ್ಯೋನ್ಮುವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ನೂತನ ಸರ್ಕಾರ ಯಶಸ್ವಿ ಕಾಣಲು ಸಾಧ್ಯ ಎಂದು ಹೇಳಿದ್ದಾರೆ.

ಹೊಸ ಪಡಿತರ ಚೀಟಿ ನೀಡಲು ಸರ್ಕಾರ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ