October 5, 2024

ಪ್ರತಿ ವರ್ಷದಂತೆ ಈ ವರ್ಷವೂ  ಕ್ರೀಡಾ ಭಾರತಿ ಸಕಲೇಶಪುರ ಘಟಕದ  ವತಿಯಿಂದ ಸಕಲೇಶಪುರದ  ದೇಶ ಕಾಯುವ ಸೈನಿಕರೊಂದಿಗೆ ರಕ್ಷಾ ಬಂದನ ಆಚರಿಸಲಾಯಿತು. ಸಕಲೇಶಪುರ ಸೈನಿಕ ವಾಹನ ತರಬೇತಿ ಶಿಬಿರಕ್ಕೆ ತೆರಳಿದ ಸಂಘದ ಸದಸ್ಯರು ಸೈನಿಕರೊಂದಿಗೆ ಕಲೆತು ರಕ್ಷಾಬಂಧನ ಆಚರಿಸಿದರು. ಸೈನಿಕರ ಹಣೆಗೆ ತಿಲಕವಿಟ್ಟು, ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಇದರಿಂದ ಯೋಧರು ತುಂಬಾ ಸಂತೋಷ ಪಟ್ಟರು.

ಅದಲ್ಲದೇ ಸಕಲೇಶಪುರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು,  ಪಟ್ಟಣದ ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ಸಕಲೇಶಪುರ ಪಟ್ಟಣದ ಸಾರ್ವಜನಿಕರ ನಡುವೆ  ಈ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ರಕ್ಷಾ ಬಂಧನ ಹಬ್ಬವು ಅಣ್ಣ-ತಂಗಿಯರ ನಡುವಿನ ಪ್ರೀತಿ ಹಾಗೂ ಗೌರವದ ವಿಶೇಷ ಮತ್ತು ಆಳವಾದ ಬಾಂಧವ್ಯದ ಸಂಭ್ರಮಾಚರಣೆ. ಈ ಪವಿತ್ರ ದಿನದಂದು ಮಹಿಳೆಯರ ಘನತೆ ಎತ್ತಿ ಹಿಡಿಯುವ ಮತ್ತು ಅವರಿಗೆ ಸದಾ ಗೌರವ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪ ನಿಟ್ಟಿನಲ್ಲಿ  ಪ್ರತಿ ವರ್ಷವೂ ಸಾಂಪ್ರದಾಯದಂತೆ ರಕ್ಷಾ ಬಂಧನ ಕಾರ್ಯಕ್ರಮವನ್ನು  ಸಕಲೇಶಪುರ ಘಟಕದ ವತಿಯಿಂದ  ಆಚರಿಸಿಕೊಂಡು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ವರ್ಷವೂ ಸಂಘದ ಸದಸ್ಯರು  ಸಕಲೇಶಪುರ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ,ಮಿಲಿಟರಿ ಕ್ಯಾಂಪ್, ಅಗ್ನಿಶಾಮಕ ದಳದ  ಕಚೇರಿ ಗೆ ಭೇಟಿ ನೀಡಿ  ರಾಖಿ ಕಟ್ಟಿ ಹಣೆಗೆ ತಿಲಕವಿಟ್ಟು ಆರತಿ ಎತ್ತುವ ಮೂಲಕ   ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ  ಪೂಜಾ ಸುರೇಶ  ಪ್ರತಿ ವರ್ಷವೂ ಸಕಲೇಶಪುರದಾದ್ಯಂತ  ನಮ್ಮ ಘಟಕದ ವತಿಯಿಂದ  ಸನಾತನ ಧರ್ಮದ ಹಿಂದೂ ಸಂಪ್ರದಾಯದ ರಾಖಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ.  ಈ ನಿಟ್ಟಿನಲ್ಲಿ ಇಂದು  ನಮ್ಮ ಘಟಕದ ವತಿಯಿಂದ ಸಕಲೇಶಪುರ ತಾಲೂಕಿನಲ್ಲಿ  ರಕ್ಷಾ ಬಂಧನ ಕಾರ್ಯಕ್ರಮವನ್ನು   ಸಂಭ್ರಮ ಸಡಗರದಿಂದ ಆಚರಿಸಿದ್ದೇವೆ. ನಾಡಿನ ಜನತೆಗೆ ಅಣ್ಣ ತಂಗಿ  ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಹಬ್ಬದ ಶುಭಾಶಯಗಳು. ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ  ಕ್ರೀಡಾ ಭಾರತಿ ಸಕಲೇಶಪುರ ಘಟಕದ ಜಂಬ ರೆಡಿ ಲೋಹಿತ್, ಮೋಹನ ಜಿ ,ಮಹಿಳಾ ಘಟಕದ ಪ್ರಮುಖರಾದ ದರ್ಶಿನಿ ರಾಕೇಶ್, ಮಂಗಳೂರು ಘಟಕದ ಪ್ರಮುಖರಾದ ಪೂಜಾ ಸುರೇಶ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ