October 5, 2024

ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಸಕಲೇಶಪುರ ಭಾಗದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಅರವಳಿಕೆ ತಜ್ಞ ವೆಂಕಟೇಶ್ ಮೇಲೆ ಕಾಡಾನೆ ದಾಳಿ ನಡೆಸಿತ್ತು.

ಇತ್ತೀಚೆಗೆ ಸಕಲೇಶಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಪರಸ್ಪರ ಕಾದಾಟ ನಡೆಸಿದ ಪರಿಣಾಮ ಭೀಮ ಎನ್ನುವ ಕಾಡಾನೆ ತೀವ್ರವಾಗಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಕಾಡಾನೆಗೆ ಅರಣ್ಯ ಇಲಾಖೆ ಆರೈಕೆ ಮಾಡಲೇಂದು ಇಂದು ಆನೆಯನ್ನು ಅರವಳಿಕೆ ಮದ್ದು ನೀಡಿ ಕೆಳಗೆ ಬೀಳಿಸುವ ಕಾರ್ಯಾಚರಣೆ ನಡೆಸಲಾಗುತಿತ್ತು.

ಆಲೂರು ಸಮೀಪದ ಹಳ್ಳಿಯೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ್ದ ಅರಣ್ಯ ಇಲಾಖೆ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು.

ನಿಗದಿಪಡಿಸಿದ ಜಾಗದಲ್ಲಿ ನಿಂತು ಆನೆಗೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿದ ತಕ್ಷಣ ಗಾಬರಿಗೊಂಡ ಕಾಡಾನೆ ವೆಂಕಟೇಶ್ ಮೇಲೆ ಎರಗಿ, ಅವರನ್ನು ಕೆಳಗಿ ಬೀಳಿಸಿ ತುಳಿದಿತ್ತು. ಆನೆದಾಳಿಯಲ್ಲಿ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಮೆದುಳಿನ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು ಎನ್ನಲಾಗಿದೆ. ಅವರನ್ನು ತಕ್ಷಣ ರಕ್ಷಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆ ತಲುಪಿದ ಕೆಲ ಹೊತ್ತಿನಲ್ಲಿಯೇ ವೆಂಕಟೇಶ್ ಕೊನೆಯುಸಿರೆಳೆದಿದ್ದಾರೆ.

ನೂರಾರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವೆಂಕಟೇಶ್

ಆಲೂರು ಸಮೀಪದ ಹೊನ್ನವಳ್ಳಿ ಗ್ರಾಮದ ವೆಂಕಟೇಶ್2018 ರಲ್ಲಿಯೇ ಅರಣ್ಯ ಇಲಾಖೆಯಿಂದ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರವೂ ಅವರು ಸಂದರ್ಭ ಬಂದಾಗ ಅರವಳಿಕೆ ಚುಚ್ಚುಮದ್ದು ನೀಡಲು ಹೋಗುತ್ತಿದ್ದರು.

ಮೃತ ವೆಂಕಟೇಶ್ (65 ವರ್ಷ) ಕಾಡಾನೆ ಹಿಡಿಯುವ ಮತ್ತು ಚಿಕಿತ್ಸೆ ನೀಡುವ ನೂರಾರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರ ಅರವಳಿಕೆ ಚುಚ್ಚುಮದ್ದು ನೀಡುವುದರಲ್ಲಿ ನಿಸ್ಸೀಮರಾಗಿದ್ದರು. ಅತಿ ಹತ್ತಿರದಿಂದ ಕಾಡಾನೆಗಳಿಗೆ ಅರವಳಿಕೆ ಚಚ್ಚುಮದ್ದು ಶೂಟ್ ಮಾಡಿ ಸರಕ್ಷಿತವಾಗಿ ನೆಲಕ್ಕೆ ಕೆಡವುತ್ತಿದ್ದರು. ಇವರನ್ನು ಅರಣ್ಯ ಇಲಾಖೆಯಲ್ಲಿ ಶಾರ್ಪ್ ಶೂಟರ್ ವೆಂಕಟೇಶ್ ಎಂದೇ ಕರೆಯುತ್ತಿದ್ದರು.

ರಾಜ್ಯದ ನಾನಾ ಭಾಗಗಳಲ್ಲಿ ಇವರು ಕಾಡಾನೆ ಮತ್ತು ಕಾಡುಪ್ರಾಣಿಗಳಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಕಾರ್ಯಾಚರಣೆಗೆ ಸಹಕರಿಸಿದ್ದರು. ರಾಜ್ಯವಲ್ಲದೇ ದೂರದ ಅರುಣಾಚಲ ಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಇವರು ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇಂದು ಸಹ ಬಹು ಹತ್ತಿರದಿಂದ ಭೀಮ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಇದರ ವಿಡಿಯೋ ಸಹ ರೆಕಾರ್ಡ್ ಆಗಿದೆ. ಚುಚ್ಚುಮದ್ದು ಶೂಟ್ ಮಾಡಿದ ತಕ್ಷಣ ಆನೆ ಇವರನ್ನು ಅಟ್ಟಿಸಿಕೊಂಡು ಬಂದಿದೆ. ವೆಂಕಟೇಶ್ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಎಡವಿ ಬಿದ್ದಿದ್ದಾರೆ. ಆನೆ ಅವರನ್ನು ಕಾಲಿನಿಂದ ತುಳಿದು ತೀವ್ರ ಗಾಯಗೊಳಿಸಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಎಷ್ಟೋ ಸಂದರ್ಭಗಳಲ್ಲಿ ಕಾಡಾನೆ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ. ವಯಸ್ಸಿನ ಕಾರಣದಿಂದ ಅವರು ಇಂದು ಕಾಡಾನೆ ದಾಳಿಯಲ್ಲಿ ಚುರುಕಿನಿಂದ ಓಡಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಅರಣ್ಯ ಇಲಾಖೆಗೆ ಮತ್ತು ಜನತೆಗೆ ಆಪತ್ಬಾಂಧವರಾಗಿದ್ದ ವೆಂಕಟೇಶ್ ಕೊನೆಗೂ ಕಾಡಾನೆ ದಾಳಿಯಲ್ಲಿಯೆ ತನ್ನ ಬದುಕು ಕಳೆದುಕೊಂಡದ್ದು ವಿಷಾದನೀಯ, ದುಃಖಕರ ಸಂಗತಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ