October 5, 2024

ಕಳಸ ತಾಲ್ಲೂಕಿನಲ್ಲಿ ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿನಡೆಸಿದ ಪರಿಣಾಮ ತೀವ್ರಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಳಸ ತಾಲ್ಲೂಕಿನ ಮುಜೇಕಾನ್ ಗ್ರಾಮದ ಕೃಷಿಕ ಮರಿಗೌಡ (60 ವರ್ಷ) ಕಾಡುಕೋಣದಿಂದ ಇರಿತಕ್ಕೊಳಗಾದವರು.

ಅವರು ಇಂದು ಬೆಳಿಗ್ಗೆ ಮುಜೇಕಾನ್ ನಿಂದ ಕಳಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಕಾಡುಕೋಣ ಇರಿದು ಗಂಭೀರ ಗಾಯಗೊಂಡಿದ್ದಾರೆ.

ಇದ್ದಕ್ಕಿದ್ದಂತೆ ಎದುರಾಗಿ ದಾಳಿ ನಡೆಸಿದ ಕಾಡು ಕೋಣದಿಂದ ತಪ್ಪಿಸಿಕೊಳ್ಳಲು ಅವರು ನೆಲದ ಮೇಲೆ ಮಲಗಿದ್ದಾರೆ.

ಆದರೂ ಕೋಣ ಮರಿಗೌಡ ಅವರ ಎದೆಗೆ ಕೋಬಿನಿಂದ ಇರಿದು ದೂರಕ್ಕೆ ಎಸೆದಿದೆ. ಇದರಿಂದ ತೀವ್ರವಾಗಿ ರಕ್ತಸ್ರಾವ ಆಗಿದ್ದ ಮರಿಗೌಡ ರಸ್ತೆಯಲ್ಲಿ ಬಿದ್ದು ನರಳುತ್ತಿದ್ದರು.ಸಮೀಪದಲ್ಲಿ ಇದ್ದ ಸ್ಥಳೀಯರು ಅವರನ್ನು ಚಿಕಿತ್ಸೆಗೆ ಕಳಸಕ್ಕೆ ಕರೆತಂದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ಮಾನಸ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಂಗಳೂರಿಗೆ ಕರೆದೊಯ್ಯಲಾಗಿದೆ. ಮರೀಗೌಡರ ಶ್ವಾಸಕೋಶಕ್ಕೆ ಗಂಭೀರ ಗಾಯಗಳಾಗಿವೆ. ಗಾಯದ ತೀವ್ರತೆಗೆ ಹೃದಯದ ಭಾಗಕ್ಕೂ ತೀವ್ರ ಪೆಟ್ಟಾಗಿದೆ.

ಈಗ್ಗೆ ಕೆಲ ತಿಂಗಳ ಹಿಂದೆ ಕಳಸ ತಾಲ್ಲೂಕಿನ ತೋಟದೂರು ಗ್ರಾಮದಲ್ಲಿ ರೈತರೊಬ್ಬರು ಕಾಡುಕೋಣ ದಾಳಿಯಿಂದ ಮೃತಪಟ್ಟಿದ್ದರು. ಈ ಭಾಗದಲ್ಲಿ ಕಾಡುಕೋಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹಗಲು ರಾತ್ರಿಯೆನ್ನದೇ ರಾಜಾರೋಷವಾಗಿ ಕಾಡುಕೋಣಗಳು ಹಿಂಡುಹಿಂಡಾಗಿ ತಿರುಗುತ್ತಿದ್ದು, ಬೆಳೆಹಾನಿ ಜೊತೆಗೆ ಜೀವಭಯದಿಂದ ಜನರು ಬದುಕುವ ಸ್ಥಿತಿ ನಿರ್ಮಾಣವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ