October 5, 2024

ನಮ್ಮ ಭಾರತೀಯ ಕಲೆ ಸಂಸ್ಕøತಿಗಳು ವಿಶ್ವಮಾನ್ಯತೆ ಪಡೆದಿವೆ. ಅಮೇರಿಕಾ ಸೇರಿದಂತೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ನಮ್ಮ ದೇಶದ ಕಲೆಗಳಿಗೆ ಜನ ಮನ್ನಣೆ ನೀಡುತ್ತಾರೆ. ನಮ್ಮ ದೇಶದಲ್ಲಿರುವಷ್ಟು ವೈವಿಧ್ಯಮಯವಾದ ಸಾಂಸ್ಕøತಿಕ ಪ್ರಕಾರಗಳು ವಿಶ್ವದ ಬೇರಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಸಂಗೀತ ಕಲೆ ಅನಾದಿಕಾಲದಿಂದಲೂ ಮಾನವನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ನಮ್ಮ ನಿತ್ಯದ ಬದುಕಿನ ಜಂಜಾಟದ ನಡುವೆ ಮನಸ್ಸಿಗೆ ಸಂತಸವನ್ನು, ಮುದವನ್ನು ನೀಡಿವ ಸಾಧನಗಳಾಗಿವೆ ಎಂದು ಅಮೇರಿಕಾ ಅಕ್ಕ ಸಂಘಟನೆ ಮಾಡಿ ಅಧ್ಯಕ್ಷ ಡಾ. ವಿಶ್ವಾಮಿತ್ರ ಹಳೇಕೋಟೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬುಧವಾರ ಮೂಡಿಗೆರೆ ಜೇಸಿ ಭವನದಲ್ಲಿ ಅವಿನ್ ಸ್ವರ ಸಂಗಮ ಹಮ್ಮಿಕೊಂಡಿದ್ದ 300ನೇ ಫೇಸ್ಬುಕ್ ಲೈವ್ ಮತ್ತು ಕಾಫಿದೊರೆ ದಿವಂಗತ ವಿ.ಜಿ. ಸಿದ್ಧಾರ್ಥ ಹೆಗ್ಡೆಯವರ ಜನ್ಮದಿನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಇಂದಿನ ಆಧುನಿಕ ಕಾಲಗಟ್ಟದಲ್ಲಿ ನಮ್ಮ ಯುವಜನತೆ ಪಾಶ್ಚಿಮಾತ್ಯ ಜೀವನ ಶೈಲಿಗೆ ಮಾರುಹೋಗದೇ ನಮ್ಮತನವನ್ನು ಅಳವಡಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಅನೇಕ ಸಂಘಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಅಮೇರಿಕಾದಲ್ಲಿ ಅಕ್ಕ ಸಂಘಟನೆ ಮೂಲಕ ಭಾರತೀಯ ಕನ್ನಡಿಗರನ್ನು ಒಟ್ಟುಗೂಡಿಸುವ, ಕನ್ನಡದ ಸಾಂಸ್ಕøತಿಕ ಪರಂಪರೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಈ ನಿಟ್ಟಿನಲ್ಲಿ ಅವಿನ್ ಸ್ವರ ಸಂಗಮ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಗಾಯಕರನ್ನು ಗುರುತಿಸಿ ಅವರನ್ನು ಮುನ್ನಲೆಗೆ ತರುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಈ ಸಂದರ್ಭದಲ್ಲಿ ಮೂಡಿಗೆರೆ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ, ಕಾಂಗ್ರೇಸ್ ಮುಖಂಡರಾದ ಬಿ.ಎಸ್. ಜಯರಾಂ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಲಯನ್ಸ್ ಮಾಜಿ ಅಧ್ಯಕ್ಷ ಎಂ.ಬಿ. ಗೋಪಾಲಗೌಡ, ಅವಿನ್ ಟಿ.ವಿ. ಸ್ಥಾನಿಕ ಸಂಪಾದಕ ಮಗ್ಗಲಮಕ್ಕಿ ಗಣೇಶ್, ಅವಿನ್ ಸ್ವರ ಸಂಗದ ನಿರ್ದೇಶಕರಾದ ಮಂಜು ಬಕ್ಕಿ, ಮೂಡಿಗೆರೆ ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ಕಣಚೂರು, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷೆ ಹರಿಣಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

ಸುಚಿತ್ರ ಪ್ರಸನ್ನ, ಅಶ್ವಿನಿ ಸಂತೋಷ್, ಬಕ್ಕಿ ರವಿ ತಂಡದವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ನಿರಂಜನ ಪಂಚಾಕ್ಷರಿ ನಿರೂಪಿಸಿದರು.

ಅವಿನ್ ಸ್ವರಸಂಗಮ 300ನೇ ಸಂಚಿಕೆ ಕಾರ್ಯಕ್ರಮ ಆಗಸ್ಟ್ 23ರಿಂ 25ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ಜಿಲ್ಲೆಯಾದ್ಯಂತ ಸುಮಾರು 200ಕ್ಕೂ ಅಧಿಕ ಗಾಯಕರು ಭಾಗವಹಿಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ