October 5, 2024

ಚಿಕ್ಕಮಗಳೂರು ನಗರದಲ್ಲಿ ನಡೆದ ರಸ್ತೆ ಅಪಘಾತದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅದು ರಸ್ತೆ ಅಪಘಾತವಲ್ಲ ಬದಲಾಗಿ ಹತ್ಯೆಯ ಅಪಘಾತ ಎನ್ನುವುದು ಪೊಲೀಸರು ತನಿಖೆಯಿಂದ ಬಯಲಾಗಿದೆ.

ನಗರದಲ್ಲಿ ಇತ್ತೀಚೆಗೆ ರಾತ್ರಿ ಬೈಕಿಗೆ ಹಿಂದಿನಿಂದ ಕಾರೊಂದು ಡಿಕ್ಕಿಯೊಡೆದಿತ್ತು. ಕಾರಿನಡಿಗೆ ಸಿಕ್ಕ ಬೈಕನ್ನ ಕಾರು ಚಾಲಕ 100 ಮೀಟರ್ ದೂರಕ್ಕೆ ಎಳೆದೊಯ್ದಿದ್ದ. ಆ ರಭಸಕ್ಕೆ ಬೈಕ್ ಹೊತ್ತಿ ಉರಿದಿತ್ತು. ಕಾರು ಚಾಲಕ ಕಾರನ್ನ ನಿಲ್ಲಿಸದೆ ಎಸ್ಕೇಪ್ ಆಗಿದ್ದ. ನೋಡ್ದೋರು, ಇದೊಂದು ಅಚಾನಕ್ ಅಪಘಾತ. ಭಯದಿಂದ ಆತ ಕಾರು ನಿಲ್ಲಿಸದೇ ಹೋಗಿದ್ದಾನೆ ಎಂದೇ ಭಾವಿಸಿದ್ರು. ಯುವಕನನ್ನ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ, ಆ ಅಪಘಾತದ ಅಸಲಿ ಕಥೆಯೇ ಬೇರೆ ಇದೆ. ಇದು ಹಳೇ ಗೆಳೆಯರ ನಡುವೆ ನಡೆದ ಹತ್ಯೆಯ ಅಪಘಾತ. ಇದು ಅಪಾಘತ ಅಲ್ಲ. ಕೊಲೆಮಾಡಲು ಹಾಕಿದ ಸ್ಕೆಚ್ ಎಂದು ತಿಳಿದುಬಂದಿದೆ.

ಗೆಳೆಯನನ್ನೇ ಮುಗಿಸೋಕೆ ಸ್ಕೆಚ್ 

ಚಿಕ್ಕಮಗಳೂರು ನಗರದ ಬೈಪಾರಸ್ ರಸ್ತೆಯ ನಿವಾಸಿಗಳಾದ ನಕುಲ್ ಹಾಗೂ ಅಂಕಿತ ಇಬ್ಬರು ಸ್ನೇಹಿತರು. ಆದ್ರೆ   ಯುವತಿಯೊಬ್ಬಳ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಶುರುವಾಗಿತ್ತೆಂದು ತಿಳಿದುಬಂದಿದೆ. ಈ ವಿಚಾರ ಪರಸ್ಪರ ಇಬ್ಬರ ನಡುವೆ ದ್ವೇಷಕ್ಕೆ ಕಾರಣವಾಗಿತ್ತು ಮತ್ತು ಇದೇ ಕಾರಣಕ್ಕೆ  ಅಂಕಿತ್ ನಕುಲ್‍ನನ್ನ ಮುಗಿಸೋಕೆ ಪ್ರಯತ್ನಿಸಿದ್ದ. ಹೆಣ್ಣಿನ ಸಲುವಾಗಿ ಗೆಳೆಯನನ್ನೇ ಕೊಲೆ ಮಾಡುವ ಹಂತಕ್ಕೆ ದ್ವೇಷ ಬೆಳೆದಿತ್ತು.

ಆಗಸ್ಟ್ 14ರ ರಾತ್ರಿ ನಕುಲ್ ಮನೆಗೆ ಹೋಗುವಾಗಿ ಕಾರಿನಲ್ಲಿ ಹಿಂದಿನಿಂದ ಹೋಗಿ ಡಿಕ್ಕಿಯೊಡೆದಿದ್ದ. ಡಿಕ್ಕಿಯ ರಭಸಕ್ಕೆ ರಾಯಲ್ ಎನ್‍ಫಿಲ್ಡ್ ಬೈಕ್ ಕಾರಿನಡಿ ಸಿಕ್ಕಿ 100 ಮೀಟರ್ ಉಜ್ಜಿಕೊಂಡು ಹೋಗಿತ್ತು. ಬೈಕ್ ರಸ್ತೆಯಲ್ಲಿ ಉಜ್ಜುವ ರಭಸಕ್ಕೆ ಬೈಕಿನಲ್ಲಿ 60 ಮೀಟರ್‍ನಷ್ಟು ದೂರಕ್ಕೆ ಬೆಂಕಿ ಹತ್ತಿತ್ತು. ಅಪಘಾತ ಮಾಡಿದ್ದ ಅಂಕಿತ್ ಕಾರನ್ನ ನಿಲ್ಲಿಸಿದೆ ಎಸ್ಕೇಪ್ ಆಗಿದ್ದ. ಸ್ಥಳಿಯರು ನಕುಲ್‍ನನ್ನ ಆಸ್ಪತ್ರೆಗೆ ದಾಖಲಿಸಿದ್ದರು.

ಇದೀಗ ನಕುಲ್ ನೀಡಿರುವ ಹೇಳಿಕೆಯಂತೆ ಇದೊಂದು ಕೊಲೆ ಯತ್ನ ಎಂದು ತಿಳಿದಬಂದಿದೆ.  ಅಂಕಿತ್ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ