October 5, 2024

ಧರ್ಮಸ್ಥಳದ ಸಮೀಪ ಅತ್ಯಾಚಾರ ಮತ್ತು ಕೊಲೆಗೀಡಾಗಿರುವ ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಮೂಡಿಗೆರೆ ಒಕ್ಕಲಿಗರ ವೇದಿಕೆ, ಕೆಂಪೇಗೌಡ ಒಕ್ಕಲಿಗರ ವೇದಿಕೆ ವತಿಯಿಂದ ಮೂಡಿಗೆರೆ ಪಟ್ಟಣದಲ್ಲಿ  ಪಂಜಿನ ಮೇರವಣಿಗೆಯನ್ನು ಮಾಡುವ ಮೂಲಕ ಸರ್ಕಾರವನ್ನು ಈ ಮೂಲಕ ಒತ್ತಾಯಿಸಿದರು

ಸೌಜನ್ಯ ಎಂಬ ಅಮಾಯಕ ಹೆಣ್ಣು ಮಗಳನ್ನ ಧಾರುಣವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿ ಆಪರಾಧಿಗಳು ಸಿಕ್ಕದೆ ಹಾಗೂ ಸಂತೋಷ್ ರಾವ್ ಎಂಬ ಅಮಾಯಕ ವ್ಯಕ್ತಿಯನ್ನು ಬಂಧಿಸಿ 11 ವರ್ಷಗಳ ಕಾಲ ಕಾರಗೃಹ ಶಿಕ್ಷೆ ನೀಡಿ ಈಗ ನಿರಪರಾಧಿ ಎಂದು ಬಿಡುಗಡೆಗೊಳಿಸಲಾಗಿದೆ.ಆದರೆ ಈ 11 ವರ್ಷಗಳಲ್ಲಿ ಸೌಜನ್ಯಳಿಗೆ ಸೂಕ್ತವಾದ ನ್ಯಾಯ ಸಿಕ್ಕಿರುವುದಿಲ್ಲ, ನಿರಪರಾಧಿಯಾದ ಸಂತೋಷ್ ರಾವ್ ನನ್ನು ಬಂಧಿಸಿ ಅವನ ಇಡೀ ಕುಟುಂಬ ಇಂದು ಚಿಂತಾಜನಕ ಸ್ಥಿತಿಯಲ್ಲಿದೆ. ನಿರಪರಾಧಿಯಾದ ಸಂತೋಷ್ ರಾವ್ ಗೆ ಸರ್ಕಾರ ಕೂಡಲೇ ಸ್ಪಂದಿಸಿ ಪೂನರ್ವಸತಿಯನ್ನು ಸೃಷ್ಠಿಸಬೇಕು, ಅದೆ ರೀತಿ ಸೂಕ್ತವಾಗಿ ಮರು ತನಿಖೆಯನ್ನ ಮಾಡಿ ನ್ಯಾಯಯುತವಾಗಿ ತಪ್ಪಿತಸ್ಥರನ್ನ ಶಿಕ್ಷಿಸಬೇಕು. ಸೌಜನ್ಯ ಎಂಬ ಹೆಣ್ಣುಮಗಳು ಒಕ್ಕಲಿಗ ಸಮೂದಾಯದ ಹೆಣ್ಣು ಮಗಳಾಗಿದ್ದು,  ಆದಷ್ಟು ಬೇಗನೆ ಮರುತನಿಖೆಯನ್ನು ಮಾಡಿ ಅಪರಾಧಿಗಳನ್ನು ಬಂದಿಸಬೇಕು ಎಂದು ಮಾತನಾಡಿದ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಇದು ಒಂದು ಸಾಂಕೇತಿಕ ಹೋರಾಟವಾಗಿದೆ ಮರುತನಿಕೆ ಮಾಡಲು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಇಡೀ ಒಕ್ಕಲಿಗ ಸಮೂದಾಯದ ವತಿಯಿಂದ ಕರ್ನಾಟಕದಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಸಿದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ