October 5, 2024

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುರಿತು ಅವಹೇಳನಕಾರಿಯಾಗಿ ತನ್ನ ಫೆಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಮೂಡಿಗೆರೆ ಮೂಲದ ಪ್ರಜ್ವಲ್ ಬಂಧಿತ ಆರೋಪಿ.

ತಿಥಿ ಕಾರ್ಡ್ ಎಂಬ ಉಲ್ಲೇಖದಡಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಭಾವಚಿತ್ರ ಹಾಕಿ ಪೋಸ್ಟ್ ರಚಿಸಿದ್ದ ಮತ್ತು ಅದನ್ನು ತನ್ನ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದ. ಜನನ 3 ಆಗಸ್ಟ್ 1947, ನಿಧನ ಜೂನ್ 18ರಂದು ಇವರ ವಿಧಿವಿಧಾನವನ್ನು ಗುರುಕೃಪ ಮೋಕ್ಷದಾಮದಲ್ಲಿ ದಿನಾಂಕ 4-8-2023ರಂದು ಸಮ್ಮಸಗಿಯಲ್ಲಿ ವೈಕುಂಠ ಸಮಾರಾಧನೆ ಮಾಡಲಾಗುವುದು ಎಂದು ಬರೆದುಕೊಂಡಿದ್ದ.

ಈತನ ವಿರುದ್ಧ ಮೂಡಿಗೆರೆ ಕಾಂಗ್ರೇಸ್ ಕಾರ್ಯಕರ್ತರು ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನ ಜಾಡು ಹಿಡಿದು ಹೋದಾಗ ಮೂಡಿಗೆರೆ ಸಮೀಪದ ಕುನ್ನಹಳ್ಳಿಯಲ್ಲಿ ಕೆಲ ಸಮಯ ತನ್ನ ದೊಡ್ಡಮ್ಮನ ಮನೆಯಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ. ಹಾಲಿ ಈತ ತನ್ನ ಕುಟುಂಬದವರೊಂದಿಗೆ ಕೊಡಗು ಜಿಲ್ಲೆ ಗಾಳಿಪೇಟೆಯ ಹೆರಿಟೇಜ್ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಈತ ತನ್ನ ಫೇಸ್ಬುಕ್ ಪ್ರೊಫೈಲ್ ಪೋಟೋದಲ್ಲಿ ಶ್ರೀರಾಮ ಪೋಟೋ ಹಾಕಿಕೊಂಡು ಅದರ ಸುತ್ತ ಹಿಂದೂ ಸಾಮ್ರಾಜ್ಯ ಮೂಡಿಗೆರೆ ಕೆಎ-18, ಜೈ ಶ್ರೀ ರಾಮ್ ಎಂದು ಇಂಗ್ಲೀಷ್ ನಲ್ಲಿ ಬರೆದುಕೊಂಡಿದ್ದಾನೆ.

ಮೂಡಿಗೆರೆ ಪೊಲೀಸ್ ತಂಡ ಈತನನ್ನು ಮೂಡಿಗೆರೆ ಠಾಣೆಗೆ ಕರೆತಂದು ಸೆಕ್ಷನ್ 505 ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ, ಪ್ರಚೋಧನಾಕಾರಿ ಸಂದೇಶಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ತಮ್ಮ ಮೊಬೈಲ್ ಗೆ ಬರುವ ಸಂದೇಶಗಳನ್ನು ಪರಿಶೀಲಿಸದೇ ಫಾರ್ವರ್ಡ್ ಮಾಡುವುದು, ಪ್ರಚೋಧನಾಕಾರಿ ಸಂದೇಶಗಳನ್ನು ಹರಿಯಬಿಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ಬಗ್ಗೆ ಯುವಜನರು ಎಚ್ಚರಿಕೆಯಿಂದ ಇರಬೇಕು ಎಂದು ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಉಮಾ ಪ್ರಶಾಂತ್ ಅವರು ಹೇಳಿಕೆ ನೀಡಿದ್ದನ್ನು ಇಲ್ಲಿ ಗಮನಿಸಬಹುದು. ಜಿಲ್ಲೆಯ ಇತ್ತೀಚೆಗೆ ಸುಮಾರು 12 ಜನರ ಮೇಲೆ ಈ ರೀತಿಯ ಪ್ರಚೋಧನಾಕಾರಿ, ಅವಹೇಳನಕಾರಿ ಸಂದೇಶ ಹಾಕಿರುವ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿಯವರು ತಿಳಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ